ಶಿವಮೊಗ್ಗ ಜಿಲ್ಲೆಯಲ್ಲೂ ತೌಕ್ತೆ ಚಂಡಮಾರುತದ ಎಫೆಕ್ಟ್, ಮರ ಬಿದ್ದು ಹೆದ್ದಾರಿ ಬಂದ್, ಹೇಗಿದೆ ಮಳೆಯ ಅಬ್ಬರ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 MAY 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ತೌಕ್ತೆ ಚಂಡಮಾರುತದ ಪರಿಣಾಮ ಶಿವಮೊಗ್ಗ ಜಿಲ್ಲೆಯಾದ್ಯಂತ ಇಡೀ ದಿನ ಕಾರ್ಮೋಡ ಕವಿದಿದ್ದು, ಜಿಟಿ ಜಿಟಿ ಮಳೆಯಾಗಿದೆ. ಭಾರಿ ಮಳೆಯಾಗುವ ಸಾದ್ಯತೆ ಇರುವುದರಿಂದ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಿಸಿದೆ. ಇನ್ನು, ತುಂಗಾ ಜಲಾಶಯವು ಭರ್ತಿಯಾಗಿದ್ದು ಅಲ್ಪ ಪ್ರಮಾಣದ ನೀರನ್ನು ಹೊಳೆಗೆ ಬಿಡಲಾಗಿದೆ.

ಜಿಲ್ಲೆಯ ಕೆಲವು ಕಡೆ ಸೋನೆ ಮಳೆ ಜೋರಾಗಿ ಸುರಿದರೆ, ಇನ್ನೂ ಕೆಲವು ಕಡೆ ಬಿಟ್ಟು ಬಿಟ್ಟು ಸುರಿದಿದೆ. ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಉತ್ತಮ ಮಳೆಯಾಗುತ್ತಿದೆ.

ರಸ್ತೆಗೆ ಉರುಳಿದ ಮರ, ಕರೆಂಟ್ ಕಟ್

ಹೊಸನಗರದಲ್ಲಿ ರಾತ್ರಿ ಜೋರು ಗಾಳಿ ಸಹಿತ ಮಳೆಯಾಗಿದೆ. ಅಲ್ಲಲ್ಲಿ ಮರಗಳು ಉರುಳಿ ಬಿದ್ದಿರುವ ವರದಿಯಾಗಿದೆ. ಪಟ್ಟಣದ ಮಾವಿನಕೊಪ್ಪ ಪೆಟ್ರೋಲ್ ಬಂಕ್ ಬಳಿ ಮರ ಬುಡಮೇಲಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿದೆ. ಇನ್ನು, ಜಿಲ್ಲೆಯ ವಿವಿಧೆಡೆ ಮಳೆ ಆರಂಭವಾಗುತ್ತಿದ್ದಂತೆ ಕರೆಂಟ್ ಕೈಕೊಟ್ಟಿದೆ. ಗಂಟೆಗಟ್ಟಲೆ ವಿದ್ಯುತ್ ಇಲ್ಲದೆ ಜನರು ಬದುಕು ನಡೆಸುವಂತಾಗಿದೆ.

ಕೃಷಿಕರಿಗೆ ಸಂಕಷ್ಟ ತಂದ ಮಳೆ

ಅಕಾಲಿಕೆ ಮಳೆ ಕೃಷಿಕರಿಗೆ ಸಂಕಷ್ಟ ತಂದೊಡ್ಡಿದೆ. ಫಸಲು ರಕ್ಷಣೆಗೆ ರೈತರು ಹರಸಾಹಸಪಡುತ್ತಿದ್ದಾರೆ. ಬೇಸಿಗೆ ಕಾಲದ ಬೆಳೆಗಳಾದ ಮೆಕ್ಕೆ ಜೋಳ, ಭತ್ತದ ಕಟಾವು ಕಾರ್ಯಕ್ಕೆ ಅಕಾಲಿಕ ಮಳೆ ಅಡ್ಡಿಯಾಗಿದೆ. ಮೆಕ್ಕೆ ಜೋಳ ಒಣಗಿಸಲು ಸಾಧ್ಯವಾಗದ ಸ್ಥಿತಿ ಇದೆ. ಕೆಲವು ರೈತರು ಮೆಕ್ಕೆ  ಜೋಳ, ಭತ್ತ ಕಟಾವಿಗೆ ಸಿದ್ಧತೆ ನಡೆಸಿದ್ದಾಗಲೇ ಜೋರು ಮಳೆಯಾಗಿದೆ. ಇನ್ನು, ಬೇಸಿಗೆ ಬೆಳೆ ಮುಗಿಸಿದ ರೈತರಿಗೆ ಈ ಮಳೆ ಸ್ವಲ್ಪ ನಿರಾಳತೆ ನೀಡಿದೆ. ನೀರಾವರಿ ಮೂಲಕ ನೀರು ಹಾಯಿಸುವ ಕಾರ್ಯಕ್ಕೆ ಬಿಡುವು ನೀಡಿದೆ.

030121 Rain At Shimoga 1 1

ಜಲಾಶಯದಿಂದ ನೀರು ಹೊರಗೆ

ಕಳೆದ ವಾರ ಅಕಾಲಿಕೆ ಮಳೆಯಿಂದಾಗಿ ತುಂಗಾ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದಿತ್ತು. ಚಂಡಮಾರುತದ ಪರಿಣಾಮ ಇನ್ನಷ್ಟು ಮಳೆಯಾಗುವುದರಿಂದ ಹೆಚ್ಚುವರಿ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಭಾನುವಾರ ಮಧ್ಯಾಹ್ನದ 500 ಕ್ಯೂಸೆಕ್ ನೀರನ್ನು ಪವರ್‍ ಜನರೇಟರ್ ನಾಲೆ ಮೂಲಕ ನದಿಗೆ ಬಿಡಲಾಗಿತ್ತು.

184361437 1387534408274642 1803379065236892211 n.jpg? nc cat=109&ccb=1 3& nc sid=8bfeb9& nc ohc=yLFiV2Crd gAX MJEcR& nc ht=scontent.fblr1 6

ಒಳ ಹರಿವು ಹೆಚ್ಚಳವಾದ್ದರಿಂದ ರಾತ್ರಿಯಿಂದ ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಹಿನ್ನೀರು ಭಾಗದಲ್ಲಿ ಮಳೆ ಹೆಚ್ಚಾದರೆ ಕ್ರಸ್ಟ್ ಗೇಟ್‍ಗಳ ಮೂಲಕ ನೀರು ಬಿಡಲಾಗುತ್ತದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. 3.15 ಟಿಎಂಸಿ ಸಾಮರ್ಥ್ಯವಿರುವುದರಿಂದ ತುಂಗಾ ಜಲಾಶಯ ಬಹಳ ಬೇಗ ಭರ್ತಿಯಾಗುತ್ತದೆ.

ಚಂಡಮಾರುತದ ಪರಿಣಾಮ ಇನ್ನೂ ಎರಡು ದಿನ ಮಳೆಯಾಗುವ ಸಂಭವವಿದೆ. ತುರ್ತು ಪರಿಸ್ಥಿತಿ ಉಂಟಾದರೆ ತಕ್ಷಣ ನೆರವಿಗೆ ಧಾವಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚಿಸಿದೆ. ಇನ್ನೇನು ಮುಂಗಾರು ಆರಂಭವಾಗಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment