ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 14 ಜೂನ್ 2021
ಕ್ಷುಲಕ ಕಾರಣಕ್ಕೆ ಶಿವಮೊಗ್ಗದ ವಿದ್ಯಾನಗರದಲ್ಲಿ ಯುವಕರ ನಡುವೆ ಗಲಾಟೆಯಾಗಿದೆ. ಘಟನೆಯಲ್ಲಿ ಓರ್ವ ಯುವಕನಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರಾಜೀವ್ ಗಾಂಧಿ ಬಡಾವಣೆಯ ಚಿತಾಗಾರದ ಬಳಿ ಗಲಾಟೆ ಸಂಭವಿಸಿದೆ. ಪರಶುರಾಮ್, ಅಬ್ಬು, ತಿಪ್ಪಗೆ ಸಾದಿಕ್, ಅಂಗೂರಿ ಸೇರಿದಂತೆ ಕೆಲವರು ಮಾಲತೇಶ್ ಎಂಬಾತನ ಜೊತೆಗೆ ಜಗಳವಾಡುತ್ತಿದ್ದರು.
ಇದೆ ದಾರಿಯಲ್ಲಿ ಬಂದ ಮಾಲತೇಶ್‍ನ ಸ್ನೇಹಿತರಾದ ಗುರುರಾಜ್, ತಿಲಕ್, ದರ್ಶನ್ ಅವರು ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಪರಶುರಾಮ್ ಎಂಬಾತ ದರ್ಶನ್‍ಗೆ ಹೊಡೆದಿದ್ದರಿಂದ ಗಂಭೀರ ಗಾಯಗೊಂಡದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೂಡಲೆ ದರ್ಶನ್‍ನನ್ನು ಬಿ.ಹೆಚ್.ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಕೆ ನಡೆಯುತ್ತಿದೆ.