ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2021
ಕಳೆದ ವರ್ಷದಂತೆ ಈ ಭಾರಿಯೂ ಆಡಿಕೃತ್ತಿಕೆ ಜಾತ್ರೆ ವೈಭವಕ್ಕೆ ಕರೋನ ಅಡ್ಡಿಯಾಗಿದೆ. ಮೂರನೆ ಅಲೆ ಭೀತಿಯ ಹಿನ್ನೆಲೆ ಜಾತ್ರೆ ರದ್ದುಗೊಳಿಸಲಾಗಿದೆ. ಆದರೆ ಕಾವಡಿ ಹೊತ್ತು ಬರುತ್ತಿರುವ ಭಕ್ತರು, ದೇವರಿಗೆ ಹರಕೆ ತೀರಿಸುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಗುಡ್ಡೇಕಲ್ಲಿನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ಆಡಿಕೃತ್ತಿಗೆ ಜಾತ್ರೆ ನಡೆಯಲಿದೆ. ಕೋವಿಡ್ ಭೀತಿಯ ಹಿನ್ನೆಲೆ ಕಳೆದ ವರ್ಷ ಮತ್ತು ಈ ಭಾರಿ ಜಾತ್ರೆ ರದ್ದುಗೊಳಿಸಲಾಗಿದೆ. ಹಾಗಾಗಿ ಯಾವುದೆ ವೈಭವವಿಲ್ಲದೆ, ವಿಶೇಷ ಪೂಜೆ, ದೇವರ ದರ್ಶನ ಮತ್ತು ಹರಕೆ ತೀರಿಸುವುದಕ್ಕಷ್ಟೆ ಆಚರಣೆ ಸೀಮಿತವಾಗಿದೆ.
ಕಾವಡಿ ಹೊತ್ತು ಬರುತ್ತಿರುವ ಭಕ್ತರು
ಆಡಿಕೃತ್ತಿಕೆ ಜಾತ್ರೆ ಹಿನ್ನೆಲೆ ಭಕ್ತರು ಕಾವಡಿಗಳನ್ನು ಹೊತ್ತು ಬರುತ್ತಿದ್ದಾರೆ. ದೂರದ ಊರುಗಳು, ಏರಿಯಾಗಳಿಂದ ಮಕ್ಕಳು, ಮಹಿಳೆಯರು ಸೇರಿದಂತೆ ಭಕ್ತರು ಕಾವಡಿಗಳನ್ನು ಹೊತ್ತು ನಡೆದು ಬರುತ್ತಿದ್ದಾರೆ. ಪ್ರತಿ ಭಾರಿಯಂತೆ ಈ ಭಾರಿಯೂ ದೊಡ್ಡ ತ್ರಿಶೂಲಗಳನ್ನು ತುಟಿ, ಕೆನ್ನೆಗೆ ಚುಚ್ಚಿಕೊಂಡು ಗುಡ್ಡ ಹತ್ತಿ ಹರಕೆ ತೀರಿಸುತ್ತಿದ್ದಾರೆ. ವಾದ್ಯದ ಶಬ್ದಕ್ಕೆ ಹೆಜ್ಜೆ ಹಾಕುತ್ತ, ಹರೋಹರ ಘೋಷಣೆ ಕೂಗುತ್ತ ಬಾಲಸುಬ್ರಹ್ಮಣ್ಯ ಸ್ವಾಮಿಗೆ ನಮನ ಸಲ್ಲಿಸುತ್ತಿದ್ದಾರೆ.
ಲಕ್ಷ ಲಕ್ಷ ಭಕ್ತರು ಭಾಗಿಯಾಗುತ್ತಿದ್ದರು
ಆಡಿಕೃತ್ತಿಕೆ ಜಾತ್ರೆ ತಮಿಳು ಸಮುದಾಯದವರ ಪಾಲಿಗೆ ಪ್ರಮುಖ ಆಚರಣೆ. ಆದರೆ ಶಿವಮೊಗ್ಗ, ಭದ್ರಾವತಿ ಸೇರಿದಂತೆ ವಿವಿಧೆಡೆಯ ಎಲ್ಲಾ ಜಾತಿ, ವರ್ಗದ ಜನರು ಇದರಲ್ಲಿ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು. ಲಕ್ಷ ಲಕ್ಷ ಭಕ್ತರು ಜಾತ್ರೆಯಲ್ಲಿ ಭಾಗಿಯಾಗುತ್ತಿದ್ದರು. ಗುಡ್ಡೆಕಲ್ ಸಮೀಪ ಹೊಳೆಹೊನ್ನೂರು ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿತ್ತು. ಆದರೆ ಈ ಭಾರಿಯೂ ಜಾತ್ರೆಗೆ ಕೋವಿಡ್ ಅಡ್ಡಿಯಾಗಿದೆ.
‘ಗುಡ್ಡೆಕಲ್ಲು ದೇವಸ್ಥಾನದ ಚರಿತ್ರೆಯಲ್ಲಿ ಎಂದಿಗೂ ಬಾಗಿಲು ಹಾಕಿರಲಿಲ್ಲ. ಕೋವಿಡ್ ಇರುವುದರಿಂದ ಜನರ ಹಿತದೃಷ್ಟಿಯಿಂದ ಎರಡು ವರ್ಷ ಜಾತ್ರೆ ರದ್ದುಗೊಳಿಸಲಾಗಿದೆ. ಭಕ್ತರು ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ. ದರ್ಶನಕ್ಕೆ ನಿರಾಕರಣೆ ಮಾಡಲು ಸಾಧ್ಯವಿಲ್ಲ. ಕೆಲವರು ಕಾವಡಿ ಹೊತ್ತು ಬಂದು ಹರಕೆ ತೀರಿಸುತ್ತಿದ್ದಾರೆ’ ಅನ್ನುತ್ತಾರೆ ಬಾಲಸುಬ್ರಹ್ಮಣ್ಯ ಸೇವಾ ಸಮಿತಿ ಅಧ್ಯಕ್ಷ ಎಂ.ರಾಜು.
ಕೋವಿಡ್ ನಿಂದಾಗಿ ಆಡಿಕೃತ್ತಿಗೆ ಜಾತ್ರೆ ಸೇರಿದಂತೆ ಹಲವು ವೈಭವಯುತ ಜಾತ್ರೆಗಳಿಗೆ ಬ್ರೇಕ್ ಬಿದ್ದಿದೆ. ಜನರು ಎಚ್ಚೆತ್ತುಕೊಂಡು, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಸೋಂಕು ಹರಡುವುದಕ್ಕೆ ತಡೆಯೊಡ್ಡಬೇಕಿದೆ. ಮುಂದಿನ ವರ್ಷದಿಂದ ಪುನಃ ಜಾತ್ರೋತ್ಸವಗಳು ಕಣ್ತುಂಬಿಕೊಳ್ಳುವ ಅವಕಾಶವಾಗಲಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200