ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಸೆಪ್ಟೆಂಬರ್ 2021
ದೇವಸ್ಥಾನದ ಬೀಗ ಒಡೆದ ಕಳ್ಳರು ಕಾಣಿಕೆ ಹಣ ಮತ್ತು ಪೂಜಾ ಸಾಮಾಗ್ರಿಗಳನ್ನು ಕದ್ದೊಯ್ದಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಶಿವಮೊಗ್ಗ ತಾಲೂಕು ದೊಡ್ಡಮತಲಿ ಗ್ರಾಮದ ಶ್ರೀ ಹುಲಿಯಾಂಬಿಕ ದೇವಸ್ಥಾನದಲ್ಲಿ ಘಟನೆ ಸಂಭವಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಂಗಳವಾರ ಮಾತ್ರ ಪೂಜೆ
ಶ್ರೀ ಹುಲಿಯಾಂಬಿಕ ದೇವಸ್ಥಾನದಲ್ಲಿ ವಾರಕ್ಕೆ ಒಮ್ಮೆ ಮಾತ್ರ ಪೂಜೆ ಸಲ್ಲಿಸಲಾಗುತ್ತದೆ. ಮಂಗಳವಾರದಂದು ಮಾತ್ರ ಅರ್ಚಕರು ಬಂದ ಪೂಜೆ ಮಾಡುತ್ತಿದ್ದರು. ಈ ವೇಳೆ ಗ್ರಾಮಸ್ಥರು ಪಾಲ್ಗೊಳ್ಳುತ್ತಿದ್ದರು. ಉಳಿದ ದಿನಗಳಲ್ಲಿ ದೇವ್ಥಾನಕ್ಕೆ ಬೀಗ ಹಾಕಲಾಗುತ್ತಿತ್ತು. ಇದನ್ನು ತಿಳಿದುಕೊಂಡೆ ಕಳ್ಳರು ಕೃತ್ಯ ಎಸಗಿರುವ ಶಂಕೆ ಇದೆ.
ದೇಗುಲದಲ್ಲಿ ಏನೆಲ್ಲ ಕಳುವಾಗಿದೆ?
ಕಳ್ಳರು ದೇವಸ್ಥಾನದ ಬಾಗಿಲು ಬೀಗ ಮುರಿದಿದ್ದಾರೆ. ಹುಂಡಿ ಒಡೆದು ಸುಮಾರು 10 ಸಾವಿರ ರೂ. ಕಾಣಿಕೆ ಹಣ ಕದ್ದೊಯ್ದಿದ್ದಾರೆ. 50 ಕೆ.ಜಿ. ತೂಕದ ಎರಡು ಹಿತ್ತಾಳೆಯ ದೊಡ್ಡ ದೀಪ, ಒಂದೂವರೆ ಕೆ.ಜಿ ತೂಕದ ಎರಡು ಸಣ್ಣ ದೀಪಗಳು, ಹಿತ್ತಾಳೆಯ ಆರು ಹರಿವಾಣಗಳು, ತಾಮ್ರದ ಎರಡು ಹರಿವಾಣಗಳು, 30 ತೂಗು ಗಂಟೆಗಳು, ಮಂಗಳಾರತಿ ತಟ್ಟೆ, 5 ಚಂಬುಗಳನ್ನು ಕದ್ದೊಯ್ದಿದ್ದಾರೆ. ಸುಮಾರು 50 ಸಾವಿರ ರೂ. ಮೌಲ್ಯದ ವಸ್ತುಗಳ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೇವಸ್ಥಾನದ ಅಧ್ಯಕ್ಷ ಗಣಪತಿ ಅವರು ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಕೆ ಕೈಗೊಂಡಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200