ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಸೆಪ್ಟೆಂಬರ್ 2021
ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಫ್‌ಎಂ ಸಮುದಾಯ ರೇಡಿಯೋ ಕೇಂದ್ರ ಆರಂಭಿಸಲು ಕೇಂದ್ರ ದೂರ ಸಂಪರ್ಕ ಇಲಾಖೆ ಅನುಮತಿ ನೀಡಿದೆ. ಪರಿಸರ ಅಧ್ಯಯನ ಕೇಂದ್ರದ ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿಯಿಂದ ನಡೆಸಲಾಗುವ ಈ ಕೇಂದ್ರಕ್ಕೆ ‘ರೇಡಿಯೋ ಶಿವಮೊಗ್ಗ-90.8’ ಎಂದು ನಾಮಕರಣ ಮಾಡಲಾಗುವುದು ಎಂದು ಸೊಸೈಟಿ ಕಾರ್ಯದರ್ಶಿ ಜಿ.ಎಲ್.ಜನಾರ್ದನ ತಿಳಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಆರು ತಿಂಗಳೊಳಗೆ ಪ್ರಸಾರ ಆರಂಭಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಆದರೆ ನಾಲ್ಕು ತಿಂಗಳಲ್ಲೇ ಪ್ರಸಾರ ಆರಂಭಿಸಲಾಗುವುದು. ಕೃಷಿ ಕಾಲೇಜು ಸಮೀಪದ ರತ್ನಾಕರ ನಗರದಲ್ಲಿ ರೇಡಿಯೋ ಕೇಂದ್ರ ಕಾರ್ಯನಿರ್ವಹಿಸಲಿದೆ. ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ಕಾರ್ಯಕ್ರಮ ಪ್ರಸಾರ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೊಸ ಎಫ್‌ಎಂ ಕೇಂದ್ರಕ್ಕೆ ದೂರ ಸಂಪರ್ಕ ಇಲಾಖೆ 90.8 ಎಂಎಚ್ ಕಂಪನಾಂಕ ನೀಡಿದೆ. ಜಿಲ್ಲೆಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡುವುದು, ಧ್ವನಿಯಿಲ್ಲದವರ ಪಾಲಿಗೆ ಧ್ವನಿಯಾಗಿ ಕೆಲಸ ಮಾಡುವುದು ನಮ್ಮ ಗುರಿಯಾಗಿದೆ. ಶಿಕ್ಷಣ ಮತ್ತು ಪರಿಸರವನ್ನು ಕೇಂದ್ರೀಕರಿಸಿ ಆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದರು.
30 ಕಿಮೀ ವ್ಯಾಪ್ತಿಯಲ್ಲಿ ಪ್ರಸಾರ
ಶಿವಮೊಗ್ಗ ಕೇಂದ್ರವನ್ನಾಗಿಸಿಕೊಂಡು 30 ಕಿಮೀ ವ್ಯಾಪ್ತಿಯಲ್ಲಿ ರೇಡಿಯೋ ಕಾರ್ಯಕ್ರಮಗಳನ್ನು ಆಲಿಸಬಹುದು. ಈ ವ್ಯಾಪ್ತಿಯಲ್ಲಿನ ಎಲ್ಲ ಶಾಲೆಗಳನ್ನು ಸದಸ್ಯರನ್ನಾಗಿಸಿಕೊಂಡು ಕಾರ್ಯಕ್ರಮ ರೂಪಿಸಲಾಗುವುದು. ಜಿಲ್ಲೆಯ ಇತರ ಶಿಕ್ಷಣ ಸಂಸ್ಥೆಗಳು, ವಿವಿಗಳನ್ನೂ ಕಾರ್ಯಕ್ರಮದಲ್ಲಿ ಜೋಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಪರಿಸರ ಅಧ್ಯಯನ ಕೇಂದ್ರದ ಮೂಲಕ ಕಳೆದ 20 ವರ್ಷಗಳಿಂದ ಶಿಕ್ಷಣ ಮತ್ತು ಪರಿಸರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಎಫ್‌ಎಂ ಕೇಂದ್ರಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ವಿಶೇಷ ಪ್ರಯತ್ನ ನಡೆಸಲಾಗಿತ್ತು. ಇದೀಗ ಆಗಸ್ಟ್ 23ರಂದು ಕೇಂದ್ರ ಸರ್ಕಾರ ಕೇಂದ್ರ ಆರಂಭಿಸಲು ಅನುಮತಿ ನೀಡಿರುವುದು ನಮ್ಮ ಕಾರ್ಯಕ್ಕೆ ಶಕ್ತಿ ತುಂಬಿದಂತಾಗಿದೆ ಎಂದರು.
ಸದಸ್ಯತ್ವ ಶುಲ್ಕ ಸಾವಿರ ರೂ.
ಜಿಲ್ಲೆಯ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಸ್ಥಳೀಯ ಸಂಸ್ಥೆಗಳು ರೇಡಿಯೋ ಶಿವಮೊಗ್ಗದ ಸದಸ್ಯತ್ವ ಪಡೆಯಬಹುದು. ಒಂದು ಸಾವಿರ ರೂ. ಸದಸ್ಯತ್ವ ಶುಲ್ಕ ನಿಗದಿ ಮಾಡಲಾಗಿದೆ. ಸದಸ್ಯತ್ವ ಪಡೆಯುವವರ ಬಗ್ಗೆ ವರ್ಷದಲ್ಲಿ ಒಂದು ದಿನ 30 ನಿಮಿಷದ ಕಾರ್ಯಕ್ರಮವನ್ನು ಎಫ್‌ಎಂ ಮೂಲಕ ಉಚಿತವಾಗಿ ಪ್ರಸಾರ ಮಾಡಲಾಗುವುದು ಎಂದು ಜಿ.ಎಲ್.ಜನಾರ್ದನ ತಿಳಿಸಿದರು.
ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಪ್ರೊ. ಎ.ಎಸ್.ಚಂದ್ರಶೇಖರ್, ಪ್ರೊ. ಪಿ.ಎಸ್.ಹೂವಯ್ಯಗೌಡ ಇತರರಿದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200