ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ನವೆಂಬರ್ 2021
ಸ್ಮಾರ್ಟ್ ಸಿಟಿ ಕಾಮಗಾರಿಯ ನಿಧಾನಗತಿಗೆ ಶಿವಮೊಗ್ಗದಲ್ಲಿ ವಾಹನ ಚಾಲಕರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಪ್ರತಿ ರಸ್ತೆಯೂ ಗುಂಡಿಮಯವಾಗಿದೆ. ಈ ಮಧ್ಯೆ ಸಂಚಾರಿ ಪೊಲೀಸರೆ ಗುಂಡಿಗಳಿಗೆ ಮಣ್ಣು ಹಾಕಿ ವಾಹನ ಸವಾರರಿಗೆ ನೆರವಾಗಿದ್ದಾರೆ. ಇದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೈಲ್ ಸರ್ಕಲ್’ನಲ್ಲಿ ಕುವೆಂಪು ರಸ್ತೆಗೆ ಅಡ್ಡಲಾಗಿ ಗುಂಡಿ ತೋಡಲಾಗಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಸರಿಯಾಗಿ ಮಣ್ಣು ಮುಚ್ಚಿಸದೆ ಇರುವುದರಿಂದ ವಾಹನ ಸವಾರರು ಇಲ್ಲಿ ಸಂಚರಿಸಲು ಪರದಾಡುತ್ತಿದ್ದರು. ಇದನ್ನು ಸಂಚಾರಿ ಠಾಣೆ ಪೊಲೀಸರು ತಾವೆ ಮಣ್ಣು ಹಾಕಿದರು.
ಸಂಚಾರಿ ಠಾಣೆ ಎಎಸ್ಐ ಮಂಜುನಾಥ್, ಚಾಲಕ ಪ್ರಕಾಶ್, ಸಿಬ್ಬಂದಿ ಹನುಮಂತಪ್ಪ ಅವರು ಜೈಲ್ ಸರ್ಕಲ್’ನಲ್ಲಿ ಗುಂಡ ಮುಚ್ಚಿದ್ದಾರೆ. ಪಕ್ಕದಲ್ಲಿದ್ದ ಮಣ್ಣು ತಂದು ತಾವೆ ಗುಂಡಿಗೆ ಸುರಿದು ಸಮತಟ್ಟು ಮಾಡಿದ್ದಾರೆ.
ಗುಂಡಿಗಳು ಸಾರ್ ಬರಿ ಗುಂಡಿಗಳು
ಕುವೆಂಪು ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕೆಲಸ ಆರಂಭಿಸಿದಾಗಿನಿಂದ ವಾಹನ ಸವಾರರು ನಿತ್ಯ ನರಕ ದರ್ಶನ ಮಾಡುತ್ತಿದ್ದಾರೆ. ಒಮ್ಮೆ ಗುಂಡಿ ತೋಡಿ ಮುಚ್ಚಲಾಗಿತ್ತು. ಈಗ ಪುನಃ ಗುಂಡಿ ಅಗೆಯಲಾಗಿದೆ. ಜೈಲ್ ಸರ್ಕಲ್ ಕಡೆಯಿಂದ ನಂಜಪ್ಪ ಆಸ್ಪತ್ರೆ ಕಡೆಗೆ ಹೋಗುವ ಮಾರ್ಗದಲ್ಲಿ ರಸ್ತೆಗೆ ಅಡ್ಡಲಾಗಿ ಗುಂಡಿ ತೋಡಲಾಗಿದೆ. ಈ ಗುಂಡಿಯಿಂದಾಗಿ ಹಲವು ವಾಹನ ಸವಾರರು ಗಾಯಗೊಂಡಿದ್ದಾರೆ. ವಾಹನಗಳು ಕೂಡ ಹಾನಿಯಾಗಿವೆ.
ಸ್ಮಾರ್ಟ್ ಸಿಟಿ ಅಧಿಕಾರಿಗಳು ಗುಂಡಿಗೆ ಸರಿಯಾಗಿ ಮಣ್ಣು ಮುಚ್ಚಿರಲಿಲ್ಲ. ಹಾಗಾಗಿ ವಾಹನಗಳು ಓಡಾಡುವಾಗ ಗುಂಡಿಯ ಆಳ ಹೆಚ್ಚಾಗಿ ವಾಹನಗಳು ಹಾನಿಯಾಗುತ್ತಿದ್ದವು. ಇದನ್ನು ಗಮನಿಸಿದ ಪೊಲೀಸರು ತಾವೆ ಮಣ್ಣು ಮುಚ್ಚಿದ್ದಾರೆ.
ಗುಂಡಿಗೆ ಬಿದ್ದು ಗಾಯಗೊಂಡಿವರಿದ್ದಾರೆ
ಗುಂಡಿ ತೋಡಿ ತಿಂಗಳುಗಟ್ಟಲೆ ಹಾಗೆ ಬಿಡುವುದರಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೆಸರುವಾಸಿ. ಕುವೆಂಪು ರಸ್ತೆಯಲ್ಲಿ ಈ ಗುಂಡಿಗೆ ಬಿದ್ದು ಹಲವರು ಗಾಯಗೊಂಡಿದ್ದಾರೆ. ಎರಡು ತಿಂಗಳ ಹಿಂದೆ ಬೈಕ್ ಸವಾರರೊಂದು ಬೈಕ್ ಸಹಿತ ಗುಂಡಿಗೆ ಬಿದ್ದು ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ಆರೈಕೆ ಮಾಡಿದ್ದರು.
ನಿಧಾನಗತಿ ಮತ್ತು ಪ್ಲಾನ್ ಮಾಡದೆ ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಜನರು ಸ್ಮಾರ್ಟ್ ಸಿಟಿ ಯೋಜನೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200