ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ನವೆಂಬರ್ 2021
ನಿರಂತರ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಯ್ಲಿಗೆ ಬಂದಿರುವ ಭತ್ತ, ಜೋಳದ ಬೆಳೆ ಕೈ ತಪ್ಪುವ ಆತಂಕ ಎದುರಾಗಿದೆ. ಇದೆ ರೀತಿ ಮಳೆ ಮುಂದುವರೆದರೆ ಈ ಭಾರಿ ಜಿಲ್ಲೆಯ ದೊಡ್ಡ ಸಂಖ್ಯೆಯ ರೈತರು ಸಂಪೂರ್ಣ ಬೆಳೆ ಕಳೆದುಕೊಳ್ಳುವ ಸಾಧ್ಯತೆ ಇದೆ.
ಆರು ತಿಂಗಳಿಂದ ಬಂಡವಾಳ ಹಾಕಿ, ಕಷ್ಟಪಟ್ಟು ಬೆಳೆ ಬೆಳೆದಿದ್ದ ರೈತರು, ಈ ಭಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಈಗ ಕೊಯ್ಲು ಮಾಡುವ ಸಮಯ ಬಂದಿದೆ. ಆದರೆ ನಿರಂತರ ಮಳೆಯಿಂದಾಗಿ ಗದ್ದೆಗಿಳಿಯುವುದೆ ಕಷ್ಟವಾಗಿದೆ.
ಶಿವಮೊಗ್ಗ ಜಿಲ್ಲೆಯ 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. 51 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ.
ನೆಲಕ್ಕೊರಗಿದ ಭತ್ತ, ಜೋಳದ ಬೆಳೆ
ನಿರಂತರ ಮಳೆಯಿಂದಾಗಿ ಹೊಲದಲ್ಲಿ ತೇವಾಂಶವಿದೆ. ಗದ್ದೆಯಲ್ಲಿ ನೀರು ನಿಂತಿರುವುದರಿಂದ ಕೊಯ್ಲು ಯಂತ್ರಗಳನ್ನು ಇಳಿಸುವುದು ಕಷ್ಟವಾಗಲಿದೆ. ಒಂದು ವೇಳೆ ಕೂಲಿ ಕಾರ್ಮಿಕರನ್ನು ಬಳಸಿ ಕೊಯ್ಲು ಮಾಡಿದರೂ ಬೆಳೆಯನ್ನು ಒಣಗಿಸುವುದು ಸವಾಲಾಗಿದೆ. ಹಾಗಾಗಿ ಭತ್ತ, ಮೆಕ್ಕೆಜೋಳದ ಬೆಳೆ ನೆಲಕ್ಕೊರಗಿವೆ.
ಬಿಸಿಲು ನೆಲ ಮುಟ್ಟಬೇಕು
ಬೆಳೆ ಕೊಯ್ಲು ಮಾಡಿದರೂ ಅದನ್ನು ಒಣಗಿಸಬೇಕು. ನಿರಂತರ ಮೋಡ, ಮಳೆಯಿಂದಾಗಿ ಬಿಸಿಲು ನೆಲ ಮುಟ್ಟುತ್ತಿಲ್ಲ. ಈ ಸಂದರ್ಭದಲ್ಲಿ ಬೆಳೆ ಒಣಗಿಸುವುದು ಅತಿದೊಡ್ಡ ಸವಾಲಾಗಿದೆ. ಒಂದು ವೇಳೆ ಬೆಳೆಯನ್ನು ಸರಿಯಾಗಿ ಒಣಗಿಸದೆ ಇದ್ದರೆ ಕಾಳು ಬಣ್ಣ ಕಳೆದುಕೊಂಡು, ಮುಗ್ಗಲು ಹಿಡಿಯಲಿದೆ.

ಪರಿಹಾರಕ್ಕೆ ಹೆಚ್ಚಿದ ಆಗ್ರಹ
ಅಕ್ಟೋಬರ್ ಮೊದಲ ವಾರದಿಂದ ಶುರುವಾದ ಮಳೆ ಚಳಿಗಾಲ ಆರಂಭವಾದರೂ ನಿರಂತರವಾಗಿ ಸುರಿಯುತ್ತಿದೆ. ಇನ್ನಷ್ಟು ದಿನ ಮಳೆ ಸುರಿದರೆ ಬೆಳೆ ನಷ್ಟ ನಿಶ್ಚಿತ. ಹಾಗಾಗಿ ಪರಿಹಾರ ನೀಡಬೇಕು ಎಂದು ರೈತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇನ್ನೂ ಒಂದು ವಾರ ಮಳೆ ಆತಂಕ
ರಾಜ್ಯಾದ್ಯಂತ ಇನ್ನೂ ಒಂದು ವಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ರೈತರಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ. ಮಳೆ ಇದೆ ರೀತಿ ಮುಂದುವರೆದರೆ ಕೊಯ್ಲು ಮತ್ತು ಒಕ್ಕಲು ಮಾಡುವುದು ಕಷ್ಟಕರ. ಬೆಳೆ ಸಂಪೂರ್ಣ ಹಾನಿಯಾಗುವ ಸಾಧ್ಯತೆ ಇದೆ. ಇದು ರೈತರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.
LATEST NEWS
- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು
















