ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 26 ನವೆಂಬರ್ 2021
ಹಣಗೆರೆ ದೇವಸ್ಥಾನದ ಡಿ ದರ್ಜೆ ನೌಕರನ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ತೀರ್ಥಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಐವರು ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಡೂರಿನ ತಿಮ್ಮಣ್ಣ (61), ಸಾಗರದ ರಾಮನಗರದ ಅಪ್ಸರ್ (38), ಶಿವಮೊಗ್ಗ ಬೊಮ್ಮನಕಟ್ಟೆಯ ನರಸಿಂಹ (45). ಕಿರಣ್ (26), ನ್ಯೂ ಮಂಡ್ಲಿಯ ಸತ್ತಾರ್ ಅಬ್ದುಲ್ (50) ಬಂಧಿತರು.
ಏನಿದು ಪ್ರಕರಣ?
ತೀರ್ಥಹಳ್ಳಿ ತಾಲೂಕು ಹಣಗೆರೆ ಕಟ್ಟೆಯ ಸಯ್ಯದ ಸಾದತ್ ದರ್ಗಾ, ಭೂತಪ್ಪ ಚೌಡಮ್ಮ ದೇವಸ್ಥಾನದಲ್ಲಿ ಸೀನಪ್ಪ ಎಂಬುವವರು ಡಿ ದರ್ಜೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೆಪ್ಟೆಂಬರ್ 27ರಂದು ಸೀನಿಪ್ಪ ಅವರು ತಮ್ಮ ಕುಟುಂಬದವರೊಂದಿಗೆ ಶಿವಮೊಗ್ಗದ ಪುರದಾಳು ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಹಿಂತಿರುಗಿದಾಗ ಸೀನಪ್ಪ ಅವರ ಮನೆಯಲ್ಲಿ ಕಳ್ಳತನವಾಗಿತ್ತು.
ಚಿನ್ನಾಭರಣ, ಬೆಳ್ಳಿ ವಸ್ತುಗಳು ನಾಪತ್ತೆ
ಸೀನಪ್ಪ ಅವರ ಮನೆಯಲ್ಲಿ ಇದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಕಳುವಾಗಿದೆ ಎಂದು ಸೀನಪ್ಪ ಅವರು ದೂರಿನಲ್ಲಿ ತಿಳಿಸಿದ್ದರು. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಶೇಷ ತಂಡ ರಚನೆ
ಕಳ್ಳತನ ಪ್ರಕರಣದ ತನಿಖೆಗೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್, ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್, ತೀರ್ಥಹಳ್ಳಿ ಡಿವೈಎಸ್’ಪಿ ಅವರು ವಿಶೇಷ ತಂಡ ರಚಿಸಿದ್ದರು. ತನಿಖೆ ನಡೆಸಿದ ಪೊಲೀಸರು ಐವರನ್ನು ಬಂಧಿಸಿದೆ. ಬಂಧಿತರಿಂದ 8.17 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದಿದೆ.
ಮಾಳೂರು ವೃತ್ತದ ಸಿಪಿಐ ಪ್ರವೀಣ್ ನೀಲಮ್ಮನವರ್, ಆಗುಂಬೆ ಠಾಣೆ ಪಿಎಸ್ಐ ಶಿವಕುಮಾರ್, ಮಾಳೂರು ಪಿಎಸ್ಐ ಜಯಪ್ಪನಾಯ್ಕ, ಸಿಬ್ಬಂದಿಗಳಾದ ಸುರಕ್ಷಿತ, ವೀರೇಂದ್ರ, ರಾಮಪ್ಪ, ವಿವೇಕ, ಸಂದೀಪ, ಅಭಿ, ವಿನಯ, ರಮೇಶನಾಯ್ಕ, ಡಿಸಿಐಬಿ ಸಿಬ್ಬಂದಿ ವಸಂತ, ಎ.ಎನ್.ಸಿ. ಸಿಬ್ಬಂದಿ ಗುರುರಾಜ್, ಇಂದ್ರೇಶ, ವಿಜಯ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಐವರನ್ನು ಬಂಧಿಸಿರುವ ತಂಡ, ತನಿಖೆ ಮುಂದುವರೆಸಿದ್ದಾರೆ.