ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಡಿಸೆಂಬರ್ 2021
ಹೊಸ ಟ್ರಾಕ್ಟರ್ ಇಂಜಿನ್ ಟ್ರಯಲ್ ನೋಡುವಾಗ ಪಲ್ಟಿಯಾಗಿ ಯುವಕನೊಬ್ಬ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಹೊಸಕೊಪ್ಪ ತಾಂಡಾದ ಚಾನೆಲ್ ಬಳಿ ಘಟನೆ ಸಂಭವಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೊಸಕೊಪ್ಪ ತಾಂಡಾದ ಶಶಿನಾಯ್ಕ (30) ಮೃತ ಯುವಕ. ಹೊಸಾ ಟ್ರಾಕ್ಟರ್ ಖರೀದಿಸಿದ್ದು ಟ್ರಯಲ್ ನೋಡುವಾಗ ರಸ್ತೆಯಲ್ಲಿ ಎದುರಿಗೆ ಬಂದ ವಾಹನ ತಪ್ಪಿಸುವಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದಿದೆ. ಈ ವೇಳೆ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಶಶಿನಾಯ್ಕ ಟ್ರಾಕ್ಟರ್ ಅಡಿ ಸಿಲುಕಿಕೊಂಡು ಮೃತಪಟ್ಟಿದ್ದಾನೆ.
ತಕ್ಷಣವೇ ಸುತ್ತಮುತ್ತಲಿನ ಜನರು ಟ್ರಾಕ್ಟರ್ ಎತ್ತಿದರೂ ಪ್ರಯೋಜನವಾಗಿಲ್ಲ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.