ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಜನವರಿ 2022
ಅರಸಿಕೆರೆ – ತುಮಕೂರು ನಡುವೆ ರೈಲ್ವೆ ಹಳಿ ಡಬ್ಲಿಂಗ್ ಕೆಲಸ ನಡೆಯುತ್ತಿದೆ. ನಿಟ್ಟೂರು ಸಂಪಿಗೆ ರಸ್ತೆ ಭಾಗದಲ್ಲಿ ಡಬ್ಲಿಂಗ್ ಕಾಮಗಾರಿಗೆ ದಿನಾಂಕ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ತಾಳುಗಪ್ಪದಿಂದ ಬೆಂಗಳೂರು ನಡುವಿನ ಒಂದು ರೈಲಿನ ಸಂಚಾರದಲ್ಲೂ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾವ ರೈಲು ಸಂಚಾರ ವ್ಯತ್ಯಯವಾಗಲಿದೆ?
ಐದು ದಿನ ಬೆಂಗಳೂರು – ತಾಳಗುಪ್ಪ ರೈಲು (ಸಂಖ್ಯೆ 20651) ಸ್ಥಗಿತವಾಗಲಿದೆ. ಜನವರಿ 2, ಜ.7, ಜ.10, ಜ.16, ಜ.21ರಂದು ಈ ರೈಲು ಸಂಚಾರವಿರಲ್ಲ.
ಇನ್ನ, ತಾಳುಗಪ್ಪ – ಬೆಂಗಳೂರು ರೈಲು (ಸಂಖ್ಯೆ 20652) ಕೂಡ ಈ ತಿಂಗಳಲ್ಲಿ ಐದು ದಿನ ಸಂಚರಿಸುವುದಿಲ್ಲ. ಜನವರಿ 3, ಜ.8, ಜ.11, ಜ.17, ಜ.22ರಂದು ಈ ರೈಲು ಸಂಚಾರವಿರಲ್ಲ.
ಇದನ್ನೂ ಓದಿ | ಶಿವಮೊಗ್ಗದಿಂದ ಭಾಗಶಃ ರದ್ದಾಗಿದ್ದ ರೈಲು ಸಂಚಾರ ಪುನಾರಂಭ, ಜ.3ರಿಂದ ಮರು ಸಂಚಾರ
ಇದನ್ನೂ ಓದಿ | ಶಿವಮೊಗ್ಗಕ್ಕೆ ಬಂತು ವಿಸ್ಟೋಡಾಮ್ ರೈಲು ಬೋಗಿ , ವಿಶೇಷತೆ ಏನು? ಮೊದಲ ದಿನ ಎಷ್ಟು ಜನ ಪ್ರಯಾಣಿಸಿದರು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422