ದೂರು ದುಮ್ಮಾನ | ಶಿವಮೊಗ್ಗ ಡಿಸಿ ಮನೆ ಕಾಂಪೌಂಡ್ ಪಕ್ಕದಲ್ಲೇ ಪಾರ್ಟಿ, ಶಾಲೆ ಎದುರಲ್ಲೆ ಬಿದ್ದಿರ್ತವೆ ಬಾಟಲಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಜನವರಿ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಹೇಳುವುದಕ್ಕೆ ಇದು ಹೈಪ್ರೊಫೈಲ್ ಏರಿಯಾ. ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಮನೆಗಳು ಇಲ್ಲಿವೆ. ಆದರೆ ಕತ್ತಲಾಗುತ್ತಿದ್ದಂತೆ ಈ ಜಾಗ ರಂಗು ಪಡೆದುಕೊಳ್ಳುತ್ತದೆ. ಕಾರು, ಬೈಕುಗಳಲ್ಲಿ ಬಂದು ನಿಂತು ಪಾರ್ಟಿ ಮಾಡುವವರಿಗೆ ಇದು ಸುರಕ್ಷಿತ ತಾಣವಾಗುತ್ತಿದೆ. ಅದಕ್ಕೆ ಸಾಕ್ಷಿ ಇಲ್ಲಿ ಬಿದ್ದಿರುವ ಬಾಟಲಿಗಳು, ಮದ್ಯದ ಪೌಚುಗಳು.

AVvXsEgvkqR5na6VBgyQ7GpgkZA0SK3TnlX05prWtKfmX8meEFOtOAl

ಇದು ಶಿವಮೊಗ್ಗದ ಬಸವನಗುಡಿ ಮುಖ್ಯ ರಸ್ತೆಯಲ್ಲಿನ ದುಸ್ಥಿತಿ. ಈ ಕುರಿತು ಶಿವಮೊಗ್ಗ ಲೈವ್.ಕಾಂಗೆ ಶಿವಾನಂದ ಎಂಬುವವರು ವಿಡಿಯೋ ಸಹಿತ ಮಾಹಿತಿ ನೀಡಿದ್ದಾರೆ.

ಡಿಸಿ ಕಾಂಪೌಂಡು, ಸ್ಕೂಲು, ಸ್ಟೇಡಿಯಂ

ಬಸವನಗುಡಿ ಮುಖ್ಯರ ರಸ್ತೆಯು ಇಲ್ಲಿ ತಿರುವು ಪಡೆಯುತ್ತದೆ. ಒಂದೆಡೆ ಸರ್ವೋದಯ ಶಾಲೆ, ಮತ್ತೊಂದೆಡೆ ನೆಹರೂ ಸ್ಟೇಡಿಯಂ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಜಿಲ್ಲಾಧಿಕಾರಿ ಮನೆ  ಕಾಂಪೌಂಡ್ (ಡಿಸಿ ಕಾಂಪೌಂಡ್) ಇದೆ. ಇಂತಹ ಜಾಗ ಕುಡುಕರ ಅಡ್ಡೆಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಡಿಸಿ ಕಾಂಪೌಂಡ್ ಪಕ್ಕದಲ್ಲಿ ಕತ್ತಲಾಗುತ್ತಿದ್ದಂತೆ ಕೆಲವರು ಕಾರು, ಬೈಕುಗಳಲ್ಲಿ ಬಂದು ನಿಂತು ಮದ್ಯ ಸೇವಿಸುತ್ತಾರೆ ಎಂದು ಆರೋಪಿಸಲಾಗಿದೆ. ಈ ಜಾಗದಲ್ಲಿ ಅಂಗಡಿ, ಮನೆಗಳಿಲ್ಲ. ಹಾಗಾಗಿ ಇಲ್ಲಿ ಯಾರೆ ಬಂದು ನಿಂತರೂ ಪ್ರಶ್ನಿಸುವವರಿಲ್ಲ. ಹಾಗಾಗಿ ಕಾರುಗಳನ್ನು ತಂದು ನಿಲ್ಲಿಸಿಕೊಂಡು ಸಲೀಸಾಗಿ ಪಾರ್ಟಿಗಳನ್ನು ನಡೆಸುತ್ತಿದ್ದಾರೆ ಎಂದು ಜನ ಆರೋಪಿಸುತ್ತಾರೆ.

Dooru Dummana Logo

ಸಾಕ್ಷಿ ಹೇಳುತ್ತವೆ ಬಾಟಲಿಗಳು

ಮದ್ಯ ಸೇವಿಸಿದವರು ಬಾಟಲಿಗಳನ್ನು ಅಲ್ಲಿಯೇ ಇಟ್ಟು ಹೋಗುತ್ತಿದ್ದಾರೆ. ಬೆಳಗ್ಗೆ ವಾಕಿಂಗ್, ಜಾಗಿಂಗ್ ಬರುವವರಿಗೆ ಈ ಬಾಟಲಿಗಳು ದರ್ಶನ ನೀಡುತ್ತವೆ. ಇನ್ನು, ಸರ್ವೋದಯ ಶಾಲೆಗೆ ಬರುವ ಮಕ್ಕಳು ಕೂಡ ಬಾಟಲಿಗಳನ್ನು ನೋಡಿಕೊಂಡೆ ತರಗತಿಗೆ ತೆರಳುವ ದುಸ್ಥಿತಿ ಎದುರಾಗಿದೆ.

ಶಾಲೆಯಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಮದ್ಯ, ಗುಟ್ಕಾ, ಸಿಗರೇಟು ಮಾರಾಟ ನಿಷೇಧವಿದೆ. ಆದರೆ ಮದ್ಯ ಸೇವಿಸಿ ಬಾಟಲಿಗಳನ್ನು ಬಿಸಾಡಿದರೆ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲವೆ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.

ಈ ಜಾಗದಿಂದ ನೂರು ಮೀಟರ್ ಒಳಗೆ ಜಯನಗರ ಪೊಲೀಸ್ ಠಾಣೆ ಇತ್ತು. ಆಗ ಇಂತಹ ಸಮಸ್ಯೆ ಇರಲಿಲ್ಲ. ಈಗ ಮದ್ಯೆ ಸೇವಿಸುವವರಿಗೆ ಇದು ಸುರಕ್ಷಿತ ತಾಣವಾಗಿ ಮಾರ್ಪಾಡಾಗಿದೆ.

AVvXsEg81PhY0ZQpMEqgfjVyCWxP cH4GEPqF6cfINiwCKTgqqaiLj5wXApT28m0ACVQTNs9gX epYwO

AVvXsEj4F62qLmBC6On9lbumynRs2rFu1Y CeEGC5c8s2qVyeYXy2ztVrSuttEEq4OITkuTpwG5osiZUwj0GVkn5k2vcStS70YphtF85pja7JXU6uwGv5vIqMrdnaGjWHqEV ptPwoFJosvBdIVoDCD2yRq6zXV76j4kkdj3uM6 dtIAzVbE6VfY

AVvXsEgYcVg8w799TYYxhkvGPVF7DFvUJvOLi7ebLDvEMERXvJARd9zDpAyd MJtjAeCfTMNffzFhqZwEyfmo 9G6cu d6w8KNyi7Fz0 FTebrGHyhvq6NeZNLmAlVuxOuDhrO7Cq1A G a5yeEpmbTcrIIItKzxHwKKDuY dF9QrPVXCcwnrkGNGhYsVeDV7Q=s926

AVvXsEiAXXwAT g8Bk9Qa8kiWVsT2fn1Dq06eOAtfZJYtX3tUpc4V5CxCkfZskXsIXxCIuSgXz1hi3yiizdqY8 jV4R2u6mJw7dWE77 0PzQLZOLU9a47NT5r4blEpiEA5T4w1FFKSs MhcABaJUJDBmp ilE2ubUlwS KsySMXH4h nmFlrR7rNYr2BgXVlMQ=s926

ABOUT NEW DEC 2021 REPORT

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment