ಸೋಮಿನಕೊಪ್ಪದಲ್ಲಿ ಕಲ್ಲು ತೂರಿದ ಕುಡುಕರು, ಬಾರ್ ಸಿಬ್ಬಂದಿ ಮೇಲೂ ದಾಳಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಫೆಬ್ರವರಿ 2022

ಬಾರ್ ಒಂದರಲ್ಲಿ ಮದ್ಯ ಸೇವಿಸಿದ ಯುವಕರು ಇತರೆ ಗ್ರಾಹಕರ ಜೊತೆಗೆ ಜಗಳವಾಡಿದ್ದಾರೆ. ಬಾರ್ ಮುಂದೆ ನಿಂತು ಕಲ್ಲು ತೂರಾಟ ಮಾಡಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ಬಾರ್ ಸಿಬ್ಬಂದಿಯತ್ತಲೂ ಕಲ್ಲು ತೂರಿ, ಹೊಡೆದಿದ್ದಾರೆ. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಸೋಮಿನಕೊಪ್ಪದ ಬ್ಲೂ ಸ್ಟಾರ್ ಬಾರ್ ಅಂಡ್ ರೆಸ್ಟೋರೆಂಟ್’ನಲ್ಲಿ ಘಟನೆ ಸಂಭವಿಸಿದೆ. ಈ ಸಂಬಂಧ ಬಾರ್ ಮಾಲೀಕರು ಯುವಕರ ವಿರುದ್ಧ ದೂರು ನೀಡಿದ್ದಾರೆ.

ಏನಿದು ಬಾರ್ ಗಲಾಟೆ ಕೇಸ್?

ಜನವರಿ 26ರಂದು ಅನಿಲ್ ಎಂಬಾತ ಬಾರ್ ಮುಂದೆ ಬಂದು ಗಲಾಟೆ ಮಾಡಿದ್ದಾನೆ. ಗ್ರಾಹಕರ ಜೊತೆ ಕ್ಯಾತೆ ತೆಗೆದಿದ್ದಾನೆ. ಬಾರ್ ಮಾಲೀಕ ವೆಂಕಟೇಶ್ ಶೆಟ್ಟಿ ಅವರಿಗೆ ಚಾಕು ತೋರಿಸಿ ಜೀವ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ. ಪೊಲೀಸರಿಗೆ ವಿಚಾರ ತಿಳಿದು ಅನಿಲನನ್ನು ಠಾಣೆ ಎಳೆದೊಯ್ದಿದ್ದರು.

ಜನವರಿ 30ರಂದು ಅನಿಲ, ಮುನ್ನಾ ಮತ್ತಿತರೆ ಯುವಕರನ್ನು ಇದೆ ಬಾರ್’ಗೆ ಕರೆದುಕೊಂಡು ಬಂದಿದ್ದ. ಎಲ್ಲರೂ ಮದ್ಯ ಸೇವಿಸಿ ಬಾರ್’ನಲ್ಲಿ ಗಲಾಟೆ ಆರಂಭಿಸಿದ್ದಾರೆ. ಗ್ರಾಹಕರ ಜೊತೆಗೂ ಜಗಳ ಮಾಡಿದ್ದಾರೆ. ಬಳಿಕ ಬರ್ ಮುಂದೆ ನಿಂತು ದಾರಿಯಲ್ಲಿ ಹೋಗಿ ಬರುವವರು ಮತ್ತು ಬಾರ್’ನಿಂದ ಹೊರಗೆ ಹೋಗುತ್ತಿದ್ದ ಗ್ರಾಹಕರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನು ಪ್ರಶ್ನಿಸಲು ಹೋದ ಬಾರ್ ಸಿಬ್ಬಂದಿ ಮೇಲೂ ಕಲ್ಲು ತೂರಿದ್ದಾರೆ. ಅಲ್ಲದೆ ಕೆಲವರ ಮೇಲೆ ಕೈ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

about smg live readers

Shimoga PoliceAbout Shivamogga Live

Leave a Comment