ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 27 ಫೆಬ್ರವರಿ 2022
ನಿಷೇಧಾಜ್ಞೆ ಸಡಿಲಗೊಂಡ ಹಿನ್ನೆಲೆ ಎರಡನೆ ದಿನವು ಶಿವಮೊಗ್ಗ ನಗರದಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಅಗತ್ಯ ವಸ್ತುಗಳ ಖರೀದಿಗೆ ಬಿರುಸುಗೊಂಡಿದೆ.
ಬೆಳಗ್ಗೆ 6 ಗಂಟೆಯಿಂದ ನಿಷೇಧಾಜ್ಞೆಗೆ ರಿಲೀಫ್ ನೀಡಲಾಗಿದೆ. ಹೂವು, ಹಣ್ಣು, ತರಕಾರಿ, ದಿನಸಿ ಖರೀದಿ ಮಾಡುತ್ತಿದ್ದಾರೆ. ಭಾನುವಾರ ಆಗಿರುವುದರಿಂದ ಮೀನು, ಮಾಂಸ ಖರೀದಿ ಕೂಡ ಜೋರಿದೆ. ಸಂಜೆ 4 ಗಂಟೆಗೆ ಪುನಃ ನಿಷೇಧಾಜ್ಞೆ ಜಾರಿಗೊಳ್ಳಲಿದೆ. ಆದ್ದರಿಂದ ಮೀನು, ಮಾಂಸ ಖರೀದಿಗೆ ಬೆಳಗ್ಗೆಯಿಂದಲೆ ಜನ ಹೆಚ್ಚಿಗೆ ಸೇರಿದ್ದಾರೆ.
ಕೆಲವು ಸಿಟಿ ಬಸ್ಸುಗಳು ಇವತ್ತು ರಸ್ತೆಗಿಳಿದಿವೆ. ಆಟೋ, ಟ್ರಾಕ್ಸ್, ಕೆಎಸ್ಆರ್’ಟಿಸಿ ಮತ್ತು ಖಾಸಗಿ ಬಸ್ಸುಗಳ ಸಂಚಾರ ಎಂದಿನಂತೆ ಇದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ರಸ್ತೆಗಿಳಿದ ಸಿಟಿ ಬಸ್, ನಿಟ್ಟುಸಿರು ಬಿಟ್ಟ ಖಾಸಗಿ ಬಸ್ ಮಾಲೀಕರು
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






