ಶಿವಮೊಗ್ಗದಲ್ಲಿ ಜಗಳ ಬಿಡಿಸಲು ಹೋದ ಯುವಕನಿಗೆ ಚಾಕುವಿನಿಂದ ತಿವಿದರು

SHIVAMOGGA LIVE NEWS | 26 ಮಾರ್ಚ್ 2022

ಕ್ಷುಲಕ ವಿಚಾರಕ್ಕೆ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಒಬ್ಬಾತನಿಗೆ ಚಾಕುವಿನಿಂದ ತಿವಿಯಲಾಗಿದೆ. ಗಾಯಗೊಂಡಿದ್ದ ಯುಕವನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.

ಟ್ಯಾಂಕ್ ಮೊಹಲ್ಲಾ ರಂಗನಾಥ (21) ಚಾಕು ಇರಿತಕ್ಕೆ ಒಳಗಾದವನು. ಸುದೀಪ್ (21) ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ.

ಗಲಾಟೆಗೆ ಕಾರಣವೇನು?

ಶುಕ್ರವಾರ ರಾತ್ರಿ ಟ್ಯಾಂಕ್ ಮೊಹಲ್ಲಾದ ಸರ್ಕಾರಿ ಆಸ್ಪತ್ರೆ ಸಮೀಪ ಶಿವದರ್ಶನ್ ನಡೆದು ಹೋಗುತ್ತಿದ್ದಾಗ ನಾಲ್ವರು ಯುವಕರು ಅಡ್ಡಗಟ್ಟಿದ್ದಾರೆ. ಸುದೀಪ್ ಎಂಬಾತನ ಅಕ್ಕನ ಮಗಳು ಇದ್ದ ಫ್ಲೆಕ್ಸ್ ಹರಿದಿದ್ದೇಕೆ ಎಂದು ಶಿವದರ್ಶನ್’ಗೆ ಪ್ರಶ್ನೆ ಮಾಡಿ, ಹಲ್ಲೆ ಮಾಡಲು ಆರಂಭಿಸಿದ್ದಾರೆ.

ಜಗಳ ಬಿಡಿಸಲು ಹೋದ ರಂಗನಾಥ್ ಅವರಿಗೆ ಸುದೀಪ್ ಚಾಕುವಿನಿಂದ ತಿವಿದಿದ್ದಾನೆ. ಭುಜದ ಕೆಳ ಭಾಗದಲ್ಲಿ ಚಾಕು ತಿವಿತದಿಂದ ಗಾಯವಾಗಿದ್ದು, ರಂಗನಾಥ ಜೋರಾಗಿ ಕೂಗಿಕೊಂಡಿದ್ದಾನೆ. ಕೂಡಲೆ ಜನ ಸೇರಿದ್ದು, ರಂಗನಾಥ ಮತ್ತು ಶಿವದರ್ಶನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಗಲಾಟೆ ಸಂದರ್ಭ ರಂಗನಾಥನ ಕೊರಳಲ್ಲಿ ಇದ್ದ ಬೆಳ್ಳಿ ಸರ, ಮೊಬೈಲ್ ನಾಪತ್ತೆಯಾಗಿದೆ. ಘಟನೆ ಸಂಬಂಧ ಟ್ಯಾಂಕ್ ಮೊಹಲ್ಲಾದ ಸುದೀಪ್, ಶರತ್, ಆಕಾಶ್, ರಾಹೀಲ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೋಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 27, 2022 at 8:26 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 27, 2022

Leave a Comment