ಮತ್ತೂರಿನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ ರಾತ್ರೋರಾತ್ರಿ ಮಾಯ, ಆಗಿದ್ದೇನು?

ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿದೆ. ರಾತ್ರಿ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಹಿರೋ ಡ್ಯುಯೆಟ್ ದ್ವಿಚಕ್ರ ವಾಹನ ಬೆಳಗ್ಗೆ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಚಂದ್ರಶೇಖರ್‌ ಅವರು ತಮ್ಮ ಅತ್ತೆಯ ಹೆಸರಿನಲ್ಲಿದ್ದ ಸ್ಕೂಟಿಯನ್ನು ಪಡೆದುಕೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಚಂದ್ರಶೇಖರ್ ಇದನ್ನು ಬಳಸುತ್ತಿದ್ದರು. ಈಚೆಗೆ ರಾತ್ರಿ ಬಂದು ಮನೆ ಮುಂದೆ ದ್ವಿಚಕ್ರ ವಾಹನ ನಿಲ್ಲಿಸಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಬೈಕ್‌ ಇರಲಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

Shivamogga-Police-Jeep

Shivamogga-Police-Jeep

ಕಳುವಾಗಿರುವ ಬಿಳಿ ಬಣ್ಣದ ವಾಹನದ ಮೌಲ್ಯ ₹30,000 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಮಂಗಳಮುಖಿಯ ದರೋಡೆ, 12 ಗಂಟೆಯಲ್ಲಿ ಆರೋಪಿ ಅರೆಸ್ಟ್‌

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment