ಶಿವಮೊಗ್ಗ, ಭದ್ರಾವತಿಯಲ್ಲಿ ಪೊಲೀಸರ ದಾಳಿ, ಆರು ಮಂದಿ ಅರೆಸ್ಟ್

SHIVAMOGGA LIVE NEWS | 4 ಏಪ್ರಿಲ್ 2022

ದೊಡ್ಡಪೇಟೆ ಮತ್ತು ಭದ್ರಾವತಿ ಹಳೇನಗರ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಹೊಸಮನೆ ರಸ್ತೆ ಜಂಬಣ್ಣ ರೈಸ್ ಮಿಲ್ ಹತ್ತಿರ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ದೊಡ್ಡಪೇಟೆ ಠಾಣೆ ಪೊಲೀಸರು, ಬಂಧಿತರಿಂದ 1.100 ಕೆಜಿ ಗಾಂಜಾ, 3,670 ರೂ. ನಗದು, 1 ಬೈಕ್‌ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿವಮೊಗ್ಗ ಬನ್ನಿಕೆರೆಯ ಉಮೇಶ ನಾಯ್ಕ (48), ನವುಲೆಯ ನಿತಿನ್(23), ಬಾಪೂಜಿನಗರದ ರಾಹಿಲ್ ಖಾನ್ (23), ಹನುಮಂತನಗರದ ಶ್ರೇಯಸ್ (25), ನಿತಿನ್‌ಕುಮಾರ್ (26) . ಹಾಗೂ ಭದ್ರಾವತಿ ಇಂದಿರಾನಗರದ ಮಹಮ್ಮದ್ ಅರ್ಷಾನ್(23) ಬಂಧಿತರು.

ಮತ್ತೊಂದು ಪ್ರಕರಣದಲ್ಲಿ ಭದ್ರಾವತಿ ಹಳೇ ನಗರ ಠಾಣಾ ವ್ಯಾಪ್ತಿಯ ಜಟ್‌ಪಟ್‌ನಗರ ಕಡೆಯಿಂದ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಮಹಮ್ಮದ್ ಅರ್ಷಾನ್‌ನ್ನು ಬಂಧಿಸಿ 420 ಗ್ರಾಂ ಒಣ ಗಾಂಜಾ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

Ganja-Raid-in-Shimoga-Bhadravathi.

Leave a Comment