ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | Ambergris | 12 ಏಪ್ರಿಲ್ 2022
ಬೆಲೆಬಾಳುವ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕೆಳದಿ ರಸ್ತೆಯ ರಾಮಪ್ಪ (40), ಕಾರ್ಗಲ್’ನ ಸಂದೀಪ್ ಜಾನ್ (49), ಸಾಗರ ನೆಹರೂ ನಗರದ ರೋಹಿತ್ (42) ಬಂಧಿತರು. ಸಾಗರ ರೈಲ್ವೆ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ ತಿಮಿಂಗಿಲ ವಾಂತಿ (ಅಂಬರ್ಗ್ರೀಸ್) ವಶಕ್ಕೆ ಪಡೆಯಲಾಗಿದೆ.
ಅರ್ಧ ಕೆ.ಜಿ ಅಂಬರ್ಗ್ರೀಸ್ ವಶಕ್ಕೆ
ಖಚಿತ ಮಾಹಿತಿ ಮೇರೆಗೆ ಸಾಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಅಂಬರ್ಗ್ರೀಸ್ (Ambergris ) ಮಾಹಿತಿಯನ್ನು ಬಾಯಿ ಬಿಟ್ಟಿದ್ದಾರೆ. ಇವರಿಂದ ಅರ್ಧ ಕೆ.ಜಿ.ಯಷ್ಟು ಅಂಬರ್ಗ್ರೀಸ್ ವಶಕ್ಕೆ ಪಡೆಯಲಾಗಿದೆ. ಇದರ ಮಾರುಕಟ್ಟೆ ಮೌಲ್ಯ 50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸಾಗರದಿಂದ ಮಂಗಳೂರಿಗೆ ಕೊಂಡೊಯ್ದು ಮಾರಾಟಕ್ಕೆ ಇವರು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ತಿಮಿಂಗಿಲ ವಾಂತಿಗೇಕೆ ಇಷ್ಟು ಡಿಮಾಂಡ್?
ತಿಮಿಂಗಿಲ ವಾಂತಿ ಅಥವಾ ಅಂಬರ್ಗ್ರೀಸ್’ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಸ್ಪರ್ಮ್ ತಿಮಿಂಗಲ ಎನ್ನುವ ಪ್ರಭೇದದ ಕರುಳಿನಲ್ಲಿ ಹುಟ್ಟುವ ಘನ ಮೇಣದಂತಹ ಅಂಬರ್ಗ್ರೀಸ್’ಗೆ ಹೆಚ್ಚು ಬೇಡಿಕೆ. ಇದನ್ನು ಸುಗಂಧ ದ್ರವ್ಯ ಮತ್ತು ಮಾದಕ ವಸ್ತು ತಯಾರಿಕೆ ಬಳಕೆ ಮಾಡಲಾಗುತ್ತದೆ. ಆದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂಬರ್ಗ್ರೀಸ್’ಗೆ ಹೆಚ್ಚು ಬೇಡಿಕೆ ಇದೆ.
ಮಾರಾಟ, ಸಾಗಣೆ ಅಕ್ರಮ
ಅರಣ್ಯ ಕಾಯ್ದೆ ಅಡಿ ಅಂಬರ್ಗ್ರೀಸ್ ಸಾಗಣೆ ಮತ್ತು ಮಾರಾಟ ನಿಷೇಧ. ಹೀಗಿದ್ದೂ ಸಾಗರದಲ್ಲಿ ಅಂಬರ್ಗ್ರೀಸ್ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇದರ ಹಿಂದೆ ದೊಡ್ಡ ಜಾಲ ಇರುವ ಕುರಿತು ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ.
ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾರ್ಗದರ್ಶನದಲ್ಲಿ ಸಾಗರ ವಿಭಾಗದ ಎಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಸಾಗರ ನಗರ ಠಾಣೆ ಇನ್ಸ್ ಪೆಕ್ಟರ್ ಕೃಷ್ಣಪ್ಪ, ಪಿಎಸ್ಐ ಟಿ.ಡಿ.ಸಾಗರಕರ್, ಕಾರ್ಗಲ್ ಪಿಎಸ್ಐ ತಿರುಮಲೇಶ್, ಸಿಬ್ಬಂದಿ ಸಂತೋಷ್ ನಾಯ್ಕ್, ಹಜರತ್ ಅಲಿ, ಪ್ರವೀಣ್ ಕುಮಾರ್, ರತ್ನಾಕರ್, ಮಲ್ಲೇಶ್, ಶ್ರೀಧರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ | ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಎಂಜಿನಿಯರ್ ಬೈಕ್’ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200