ಶಿವಮೊಗ್ಗ ಆಟೋ ಕಾಂಪ್ಲೆಕ್ಸ್’ನಲ್ಲಿ ರಾತ್ರೋರಾತ್ರಿ ಕಾರು ಕಳ್ಳತನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA AIRPORT | 19 ಏಪ್ರಿಲ್ 2022

ಆಟೋ ಕಾಂಪ್ಲೆಕ್ಸ್’ನ ಶೆಡ್’ನಲ್ಲಿ ನಿಲ್ಲಿಸಿದ್ದ ಕಾರು ರಾತ್ರೋರಾತ್ರಿ ನಾಪತ್ತೆಯಾಗಿದೆ. ಎಲ್ಲೆಡೆ ಹುಡುಕಿದ ಮಾಲೀಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವೆಂಕಟೇಶ್ ಎಂಬುವವರಿಗೆ ಸೇರಿದ ಮಾರುತಿ ಓಮ್ನಿ ಕಾರು ಕಳ್ಳತನವಾಗಿದೆ. ಆಟೋ ಕಾಂಪ್ಲೆಕ್ಸ್’ನಲ್ಲಿರುವ ಕಾಂಕ್ರಿಟ್ ಬಾಕ್ಸ್ ತಯಾರಿಸುವ ಶೆಡ್’ನಲ್ಲಿ ಯಾವಾಗಲೂ ಕಾರು ನಿಲ್ಲಿಸುತ್ತಿದ್ದರು. ಸಂಜೆ ವೆಂಕಟೇಶ್ ಅವರು ಕಾರನ್ನು ತಂದು ನಿಲ್ಲಿಸಿದ್ದರು. ಮರುದಿನ ಬೆಳೆಗ್ಗೆ ಹೋಗಿ ನೋಡಿದಾಗ ಕಾರು ನಾಪತ್ತೆಯಾಗಿತ್ತು.

ಎಲ್ಲೆಡೆ ಹುಡುಕಿದ ಬಳಿಕ ವೆಂಕಟೇಶ್ ಅವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 19, 2022

Leave a Comment