ಆನವೇರಿಯಲ್ಲಿ ಜಾತ್ರೆ ಹಿನ್ನೆಲೆ, ಮೆಸ್ಕಾಂ ವತಿಯಿಂದ ಜನರಿಗೆ ಎಚ್ಚರಿಕೆ, ಕಾರಣವೇನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | ELECTRICITY | 4 ಜೂನ್ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಆನವೇರಿ ಗ್ರಾಮದಲ್ಲಿ ಜೂನ್ 5 ರಿಂದ ಜೂನ್ 9ರವರೆಗೆ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ವತಿಯಿಂದ ಎಚ್ಚರಿಕೆ ಸಂದೇಶ ಪ್ರಕಟಿಸಲಾಗಿದೆ.

Shimoga Nanjappa Hospital

ಮೆಸ್ಕಾಂ ಎಚ್ಚರಿಕೆ ಏನು?

ಈ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ಔತಣ ಕೂಟ ಏರ್ಪಡಿಸುವವರು, ವಿದ್ಯುತ್ ಲೈನ್, ಕಂಬಗಳಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸುವವರು, ಜಾತ್ರೆಗೆ ಮಳಿಗೆ ಹಾಕುವ ವರ್ತಕರು, ಮನೋರಂಜನಾ ಆಟಿಕೆಯವರು, ಸರ್ಕಸ್, ನಾಟಕ ಕಂಪನಿಯವರು ಇತ್ಯಾದಿಯವರು ಮೆಸ್ಕಾಂನ ಪೂರ್ವಾನುಮತಿ ಇಲ್ಲದೇ ಯಾವುದೇ ಕಾರಣಕ್ಕೂ ಮೆಸ್ಕಾಂ ವಿದ್ಯುತ್ ಜಾಲದಿಂದ ವಿದ್ಯುತ್‍ನ್ನು ಉಪಯೋಗಿಸಬಾರದು.

ಒಂದು ವೇಳೆ ಬಳಸಿದ್ದಲ್ಲಿ, ಇದರಿಂದ ಸಾರ್ವಜನಿಕ ಆಸ್ತಿ ಪಾಸ್ತಿಗೆ, ಜೀವ ಹಾನಿಯಂತಹ ಘಟನೆಗಳು ಸಂಭವಿಸಿದಲ್ಲಿ ಮೆಸ್ಕಾಂ ಹೊಣೆಯಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪೂರ್ವಾನುಮತಿ ಪಡೆಯದೆ ವಿದ್ಯುತ್ ಬಳಸುವವರ ವಿರುದ್ಧ ವಿದ್ಯುತ್ ದುರ್ಬಳಕೆ, ಕಳ್ಳತನ ಪ್ರಕರಣ ದಾಖಲಿಸಿ, ವಿದ್ಯುಚ್ಛಕ್ತಿ ನಿಯಮಾವಳಿಗಳ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೊಳೆಹೊನ್ನೂರು ಮೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂನಿಜಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ – 24 ವರ್ಷದ ಬಳಿಕ ಜಾತ್ರೆ, ಸಿದ್ಧತೆ ಕುರಿತು ಮಹತ್ವದ ಸಭೆ

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment