ಶಿವಮೊಗ್ಗ ಜಿಲ್ಲೆಯ ಗುಡಿ, ಚರ್ಚು, ಮಸೀದಿಗಳ ಮೈಕುಗಳ ಮೇಲೆ ಪೊಲೀಸ್ ನಿಗಾ, ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA | 23 ಜೂನ್ 2022

ನ್ಯಾಯಾಲಯದ ಸೂಚನೆ ಬೆನ್ನಿಗೆ ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್ (MIKE) ಬಳಕ ಬಗ್ಗೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಧಾರ್ಮಿಕ ಕೇಂದ್ರಗಳಲ್ಲಿ ಮೈಕ್’ಗಳಿಗೆ ಸೌಂಡ್ ಗವರ್ನರ್ ಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ರಾತ್ರಿ ವೇಳೆ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆ ಮಾಡದಂತೆ ನಿಷೇಧ ಮಾಡಲಾಗಿದೆ.

Shimoga Nanjappa Hospital

ಈಚೆಗೆ ದೇಶಾದ್ಯಂತ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆ ಸಂಬಂಧ ವಿವಾದ ಸೃಷ್ಟಿಯಾಗಿತ್ತು. ಅಲ್ಲದೆ ಮೈಕ್ ಬಳಕೆ ಕುರಿತು ನ್ಯಾಯಾಲಯ ಕೂಡ ಅದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕೈಗೊಂಡಿರುವ ಶಿವಮೊಗ್ಗ ಪೊಲೀಸರು ಸೌಂಡ್ ಗವರ್ನರ್ ಮೊರೆ ಹೋಗಿದ್ದಾರೆ.

ರಾತ್ರಿ ಮೈಕ್ ಬಳಕೆ ಕಡ್ಡಾಯ ನಿಷೇಧ

Shimoga-Live-Special-logoಕೋರ್ಟ್ ಆದೇಶಕ್ಕೂ ಮುನ್ನ ರಾತ್ರಿ ಹಗಲು ಎನ್ನದೆ ಎಲ್ಲ ಧಾರ್ಮಿಕ ಕೇಂದ್ರಗಳಲ್ಲೂ ಮೈಕ್ ಬಳಸಲಾಗುತಿತ್ತು. ಕೋರ್ಟ್ ಆದೇಶದ ಬಳಿಕ ಶಿವಮೊಗ್ಗ ಪೊಲೀಸರು ಜಿಲ್ಲೆಯಾದ್ಯಂತ ಧಾರ್ಮಿಕ ಕೇಂದ್ರಗಳ ಮೈಕ್ ಗಳಿಗೆ ಲಗಾಮು ಹಾಕಿದ್ದಾರೆ. ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆವರೆಗೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಈ ಹಿಂದೆ ಹಗಲು ಹೊತ್ತಲ್ಲಿ ಲೌಡ್ ಸ್ಪೀಕರ್ ಮೂಲಕ ಹೆಚ್ಚಿನ ಶಬ್ದ ಬರುವಂತೆ ಮೈಕ್ ಬಳಸಲಾಗುತಿತ್ತು. ಇದೀಗ ಹಗಲು ವೇಳೆ ಬಳಸುವ ಲೌಡ್ ಸ್ಪೀಕರ್ ಗಳಿಗೂ ಕಡಿವಾಣ ಹಾಕಲಾಗಿದೆ. ಹಗಲು ವೇಳೆಯಲ್ಲಿ 55 ಡೆಸಿಬಲ್ ಗಳಿಗಿಂತ ಕಡಿಮೆ ಶಬ್ದ ಬರುವಂತೆ ಮೈಕ್ ಬಳಸುವಂತೆ ಧಾರ್ಮಿಕ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ.

ಧಾರ್ಮಿಕ ಕೇಂದ್ರಗಳಿಂದ ಸೌಂಡ್ ಗವರ್ನರ್

ಮೈಕ್ ಗಳಿಗೆ ಆಯಾ ಧಾರ್ಮಿಕ ಕೇಂದ್ರಗಳೇ ಸೌಂಡ್ ಗವರ್ನರ್ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳ ಮೈಕ್ ಗಳಿಗೆ ಸೌಂಡ್ ಗವರ್ನರ್ ಅಳವಡಿಸಲಾಗುತ್ತಿದೆ.

ಶಬ್ದ ಮಾಲಿನ್ಯ ತಡೆಗಟ್ಟಲು ಪೊಲೀಸ್ ಇಲಾಖೆ ಈಗಾಗಲೇ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಶಿವಮೊಗ್ಗ ಜಿಲ್ಲೆಯ 700ಕ್ಕೂ ಅಧಿಕ ಧಾರ್ಮಿಕ ಕೇಂದ್ರಗಳಿಗೆ ಪೊಲೀಸ್ ಇಲಾಖೆ ಈ ಮೊದಲು ನೊಟೀಸ್ ನೀಡಿತ್ತು. ಇಂತಿಷ್ಟೆ ಡೆಸಿಬಲ್ ಶಬ್ದ ಬರುವ ಮೈಕ್ ಬಳಸಬೇಕು ಎಂದು ಸೂಚನೆ ನೀಡಿತ್ತು. ನೋಟೀಸ್ ನೀಡಿದ ಬಳಿಕ ಧಾರ್ಮಿಕ ಕೇಂದ್ರಗಳನ್ನು ಮಾನಿಟರಿಂಗ್ ಮಾಡಲಾಗುತ್ತಿದೆ.

ಮೊದಲು ನೊಟೀಸ್, ಆಮೇಲೆ ಕ್ರಮ

ನಿಯಮಗಳನ್ನು ಉಲ್ಲಂಘಿಸಿ ಹೆಚ್ಚು ಶಬ್ದ ಬರುವ ಮೈಕ್ ಅಳವಡಿಸಿದರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಿಯಮ ಮೀರಿದರೆ ಮೊದಲು ಧಾರ್ಮಿಕ ಕೇಂದ್ರಗಳಿಗೆ ತೆರಳಿ ಮುಖ್ಯಸ್ಥರಿಗೆ ಪೊಲೀಸರು ನೊಟೀಸ್ ನೀಡಲಿದ್ದಾರೆ. ಶಬ್ದಕ್ಕೆ ನಿರ್ಬಂಧ ಹೇರದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಮತ್ತೊಂದೆಡೆ 55 ಡೆಸಿಬಲ್ ಗಿಂತಲೂ ಹೆಚ್ಚು ಶಬ್ದ ಬರುವ ಮೈಕ್ ಅಳವಡಿಸಿದ್ದ ಜಿಲ್ಲೆಯ 90ಕ್ಕೂ ಹೆಚ್ಚು ಕಡೆ ಸೌಂಡ್ ಗವರ್ನರ್ ಅಳವಡಿಸಲು ಪೊಲೀಸರು ಸೂಚನೆ ನೀಡಿದ್ದಾರೆ.

ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು?

ಈ ಕುರಿತು ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು, ಮಸೀದಿಗಳವರು ಸ್ವಯಂ ಪ್ರೇರಣೆಯಿಂದ ಸೌಂಡ್ ಗವರ್ನರ್ ಅಳವಡಿಸಿಕೊಳ್ಳುತ್ತಿದ್ದಾರೆ.  ಇದಕ್ಕಾಗಿ ಡೆಸಿಬಲ್ ಕಂಡುಹಿಡಿಯುವ ಉಪಕರಣ ಬಳಸಿಕೊಳ್ಳಲಾಗಿದೆ. ಎಲ್ಲ ಧಾರ್ಮಿಕ ಕೇಂದ್ರಗಳ ಆಡಳಿತ ಮುಖ್ಯಸ್ಥರನ್ನು ಕರೆದು ಸೂಚನೆ ನೀಡಲಾಗಿತ್ತು. ಯಾರಿಗೆ ಅಗತ್ಯವಿತ್ತೋ ಅವರೆಲ್ಲ ಖರೀದಿ ಮಾಡುತ್ತಿದ್ದಾರೆ. ಈ ಹಿಂದೆ ಒಂದು ದೂರು ಬಂದಿತ್ತು. ಇನ್ಮುಂದೆ ಯಾವುದೇ ದೂರು ಬಂದರೆ ಡೆಸಿಬಲ್ ಚೆಕ್ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Shimoga-SP-Lakshmi-Prasad

ಹಗಲು ರಾತ್ರಿ ಎನ್ನದೆ ಧಾರ್ಮಿಕ ಕೇಂದ್ರಗಳಲ್ಲಿ ದೊಡ್ಡ ಶಬ್ದದ ಮೈಕ್ ಗಳನ್ನು ಬಳಸಲಾಗುತ್ತಿತ್ತು. ಇದರಿಂದಾಗಿ ವೃದ್ಧರು, ರೋಗಿಗಳು ಹಾಗೂ ಮಕ್ಕಳು ಸಮಸ್ಯೆ ಎದುರಿಸುವಂತಾಗಿತ್ತು. ಜೊತೆಗೆ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಮೈಕ್ ಗಳ ಶಬ್ದದಿಂದಾಗಿ ಸರಿಯಾಗಿ ವ್ಯಾಸಂಗ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಇದೀಗ ಮೈಕ್ ಗಳ ಶಬ್ದಕ್ಕೆ ಬ್ರೇಕ್ ಹಾಕಿದ್ದರಿಂದಾಗಿ ಜನ ನಿರಾಳರಾಗಿದ್ದಾರೆ.

Shimoga Nanjappa Hospital

ಇದನ್ನೂ ಓದಿ – ಮಹಿಳೆಯರೆ ಹುಷಾರ್, WORK FROM HOME ಹೆಸರಲ್ಲಿ ನಡೆಯುತ್ತಿದೆ ವಂಚನೆ, ಶಿವಮೊಗ್ಗದಲ್ಲಿ ಕೇಸ್

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 23, 2022

ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್‌ 2026

ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್‌ 2026

ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್‌

ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್‌

ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

ರಾತ್ರಿ 11:45ಕ್ಕೆ ಅಮೀರ್‌ ಅಹಮದ್‌ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

ರಾತ್ರಿ 11:45ಕ್ಕೆ ಅಮೀರ್‌ ಅಹಮದ್‌ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

Leave a Comment