ಹಂದಿ ಅಣ್ಣಿ ಬರ್ಬರ ಹತ್ಯೆಗೆ ಇತ್ತು 2 ಕಾರಣ, ಏನದು? ಆರೋಪಿಗಳು ಬಾಯಿ ಬಿಟ್ಟಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA | 25 ಜುಲೈ 2022

ರೌಡಿ ಶೀಟರ್ ಅಣ್ಣಪ್ಪ ಅಲಿಯಾಸ್ ಹಂದಿ ಅಣ್ಣಿ (HANDI ANNI) ಬರ್ಬರ ಹತ್ಯೆ (MURDER) ಪ್ರಕರಣದ ತನಿಖೆ (INVESTIGATION) ಬಿರುಸುಗೊಂಡಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳ ವಿಚಾರಣೆ ತೀವ್ರಗೊಂಡಿದೆ. ಈಗಾಗಲೇ ಹತ್ಯೆಗೆ ಎರಡು ಕಾರಣವನ್ನು ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

Shimoga Nanjappa Hospital

ಜುಲೈ 14ರಂದು ವಿನೋಬನಗರ (VINOBANAGARA) ಪೊಲೀಸ್ ಚೌಕಿ ಸರ್ಕಲ್’ನಲ್ಲಿ (POLICE CHOWKI) ರೌಡಿ ಶೀಟರ್ ಹಂದಿ ಅಣ್ಣಿ ಬರ್ಬರ ಹತ್ಯೆಯಾಗಿತ್ತು. ಘಟನೆ ಸಂಬಂಧ ಎಂಟು ಆರೋಪಿಗಳು ಚಿಕ್ಕಮಗಳೂರು (CHIKKAMAGALURU) ಪೊಲೀಸರ ಮುಂದೆ ಶರಣಾಗಿದ್ದರು. ಬಳಿಕ ಶಿವಮೊಗ್ಗ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿ ಆರೋಪಿಗಳು

ಪ್ರಮುಖ ಆರೋಪಿ ಕಾಡ ಕಾರ್ತಿಕ್ ಸೇರಿದಂತೆ ಎಂಟು ಆರೋಪಿಗಳು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಜುಲೈ 27ರವರೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

ಕಾರ್ತಿಕ್’ಗೆ ಮಾತ್ರ ದ್ವೇಷ

ಪ್ರಮುಖ ಆರೋಪಿ ಕಾಡ ಕಾರ್ತಿಕ್ ಮತ್ತು ಹಂದಿ ಅಣ್ಣಿ ನಡುವಿನ ದ್ವೇಷವೆ ಹತ್ಯೆಗೆ (MURDER) ಪ್ರಮುಖ ಕಾರಣ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಉಳಿದ ಏಳು ಆರೋಪಿಗಳು ಕಾಡ ಕಾರ್ತಿಕ್’ನ ಸಹಚರರಾಗಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ. ಹಂದಿ ಅಣ್ಣಿ ಹತ್ಯೆಗೆ ಎರಡು ಪ್ರಮುಖ ಕಾರಣವನ್ನು ಕಾಡ ಕಾರ್ತಿಕ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.

Handi Anni Case Arrest

ಏನದು ಎರಡು ಕಾರಣ?

ಕಾರಣ 1 – ರೌಡಿ ಶೀಟರ್ ಬಂಕ್ ಬಾಲು ಹತ್ಯೆ

2018ರ ಡಿಸೆಂಬರ್ ತಿಂಗಳಲ್ಲಿ ಶಿವಮೊಗ್ಗದ ಹರಿಗೆ ಸಮೀಪದ ಹಾತಿ ನಗರದಲ್ಲಿ ರೌಡಿ ಶೀಟರ್ ಬಂಕ್ ಬಾಲು ಬರ್ಬರ ಹತ್ಯೆಯಾಗಿತ್ತು. ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ಸಂದರ್ಭ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಬಂಕ್ ಬಾಲು ಹತ್ಯೆ ಮಾಡಲಾಗಿತ್ತು.

‘ಹಂದಿ ಅಣ್ಣಿ ಹತ್ಯೆಗೆ ಬಂಕ್ ಬಾಲು (BUNK BALU) ಕೊಲೆ ಪ್ರಕರಣದ ಪ್ರಮುಖ ಕಾರಣವಾಗಿತ್ತು. ಅವತ್ತು ಹತ್ಯೆ ಆಗುವ ಸಂದರ್ಭ ಕಾರ್ತಿಕ್ ಕೂಡ ಸ್ಥಳದಲ್ಲಿ ಇದ್ದ. ವಿಚಾರಣೆ ಸಂದರ್ಭ ಇದನ್ನು ಬಾಯಿ ಬಿಟ್ಟಿದ್ದಾನೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್ (LAKSHMI PRASAD IPS) ತಿಳಿಸಿದ್ದಾರೆ.

ಕಾರಣ 2 – ತಂಗಿ ಮದುವೆಗೆ ಬರಲು ಬಿಟ್ಟಿರಲಿಲ್ಲ

ಬಂಕ್ ಬಾಲು ಹತ್ಯೆ ಪ್ರಕರಣದ ಬಳಿಕ ಕಾಡ ಕಾರ್ತಿಕ್ ಶಿವಮೊಗ್ಗ ತೊರೆದಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಇದ್ದ. ಕಾರ್ತಿಕ್ ಶಿವಮೊಗ್ಗ ಬಂದರೆ ಹತ್ಯೆ ಮಾಡುವುದಾಗಿ ಹಂದಿ ಅಣ್ಣಿ ಬೆದರಿಕೆ ಒಡ್ಡಿದ್ದ.

‘ಶಿವಮೊಗ್ಗ ಬಂದರೆ ಹತ್ಯೆ (MURDER) ಮಾಡುತ್ತೀನಿ ಎಂದು ಬೆದರಿಕೆ ಒಡ್ಡಿದ್ದ. ಇದೆ ಕಾರಣಕ್ಕೆ ಕಾರ್ತಿಕ್ ತನ್ನ ತಂಗಿಯ ಮದುವೆಗು ಬರಲು ಸಾದ್ಯವಾಗಿರಲಿಲ್ಲ. ಹಾಗಾಗಿ ಕೊಲೆ ಮಾಡಿದ್ದಾಗಿ ಕಾರ್ತಿಕ್ ಈಗ ವಿಚಾರಣೆ ವೇಳೆ ಹೇಳಿದ್ದಾನೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.

ಸಿಸಿಟಿವಿಯಿಂದ ಆರೋಪಿಗಳ ಸುಳಿವು

ಹಂದಿ ಅಣ್ಣಿ ಹತ್ಯೆಯಾದ ಸಂದರ್ಭ ಸಿಸಿಟಿವಿಯಲ್ಲಿ (CCTV) ದಾಖಲಾಗಿದ್ದ ದೃಶ್ಯಗಳ ಸಹಾಯದಿಂದ ಆರೋಪಿಗಳ ಸುಳಿವು ಪತ್ತೆಯಾಗಿತ್ತು. ಹಾಗಾಗಿ ಶಿವಮೊಗ್ಗ ಪೊಲೀಸರು ಆರೋಪಿಗಳ ಬೆನ್ನು ಬಿದ್ದಿದ್ದರು. ತನಿಖೆಗೆ ರಚನೆಯಾಗಿದ್ದ ನಾಲ್ಕು ತಂಡಗಳು ಬೆಂಗಳೂರು, ಕೊಡಗು, ಕಾರವಾರದಲ್ಲಿ ಹುಡುಕಾಟ ನಡೆಸಿತ್ತು ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ಅವರು ತಿಳಿಸಿದ್ದಾರೆ.

Shimoga Nanjappa Hospital

ನಾಲ್ವರು ಮಾತ್ರ ಬಂಕ್ ಬಾಲು ಸಹಚರರು

ಹಂದಿ ಅಣ್ಣಿ ಬರ್ಬರ ಹತ್ಯೆ ಮಾಡಿದ ಎಂಟು ಮಂದಿಯ ತಂಡದಲ್ಲಿ ನಾಲ್ವರು ಮಾತ್ರ ರೌಡಿ ಶೀಟರ್ ಬಂಕ್ ಬಾಲು ಸಹಚರರಾಗಿದ್ದಾರೆ. ಕಾಡ ಕಾರ್ತಿಕ್, ಫಾರೂಕ್, ನಿತಿನ್ ಮತ್ತು ಮಧು ಎಂಬುವವರು ಬಂಕ್ ಬಾಲು ಸಹಚರರು. ಉಳಿದ ನಾಲ್ವರು ಈಚೆಗಷ್ಟೆ ಈ ತಂಡ ಸೇರಿದ್ದರು.

ಮದನ್ ಎಂಬಾತ ಒಂದು ವರ್ಷದಿಂದ ಈಚೆಗೆ ಕಾರ್ತಿಕ್’ಗೆ ಪರಿಚಯವಾಗಿದ್ದ. ಆತನಿಂದ ಮಧು, ಆಂಜನೇಯ ಮತ್ತು ಚಂದನ್ ಎಂಬುವವರು ಪರಿಚಯವಾಗಿದ್ದರು. ಈಗ ಆರೋಪಿಗಳ ವಿಚಾರಣೆ ತೀವ್ರಗೊಂಡಿದ್ದು ಮತ್ತಷ್ಟು ಸಂಗತಿ ಬಾಯಿ ಬಿಡುವ ಸಾದ್ಯತೆ ಇದೆ.

ಇದನ್ನೂ ಓದಿ – ಹಂದಿ ಅಣ್ಣಿ ಬರ್ಬರ ಹತ್ಯೆ ಮಾಡಿದವರ ಫೋಟೊ ವೈರಲ್, ಆರೋಪಿಗಳು ಪೊಲೀಸ್ ಕಸ್ಟಡಿಗೆ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 25, 2022

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

Leave a Comment