RTO ಅಧಿಕಾರಿಗಳ ದಿಢೀರ್ ದಾಳಿ, ಲಕ್ಷ ಲಕ್ಷ ತೆರಿಗೆ ವಂಚಿಸಿದ್ದ ಖಾಸಗಿ ಬಸ್ ವಶಕ್ಕೆ, ಹಲವರಿಗೆ ದಂಡ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

 SHIVAMOGGA LIVE NEWS 

ಸಾಗರ | ತೆರಿಗೆ ಪಾವತಿ ಮಾಡದೆ ವಾಹನಗಳನ್ನು ರಸ್ತೆಗಿಳಿಸಿದ್ದ ಮಾಲೀಕರಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು (RTO RAID) ಬಿಸಿ ಮುಟ್ಟಿಸಿದ್ದಾರೆ. ಲಕ್ಷಾಂತರ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದ ಬಸ್ಸ ಒಂದನ್ನು ವಶಕ್ಕೆ ಪಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ.

➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

TODAY-LINK-NEWS-IMAGE.jpgಸಾಗರ ತಾಲೂಕಿನ ವಿವಿಧೆಡೆ ಆರ್.ಟಿ.ಒ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದರು. ಈ ವೇಳೆ ಹಲವು ವಾಹನಗಳು ತೆರಿಗೆ ಪಾವತಿ ಮಾಡದೆ ಸಂಚರಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಎರಡು ವರ್ಷದಿಂದ ತೆರಿಗೆ ವಂಚನೆ

ಖಾಸಗಿ ಬಸ್ ಒಂದರ ದಾಖಲೆ ಪರಿಶೀಲನೆ ವೇಳೆ ತೆರಿಗೆ ಪಾವತಿ ಮಾಡದೆ ಇರುವುದು ಬೆಳಕಿಗೆ ಬಂದಿದೆ. ಸುಮಾರು 5 ಲಕ್ಷ ರೂ. ತೆರಿಗೆ ಬಾಕಿ ಇರುವುದು ಗೊತ್ತಾಗಿದೆ. ಕೂಡಲೆ ಖಾಸಗಿ ಬಸ್ಸನ್ನು ವಶಕ್ಕೆ ಪಡೆದ ಆರ್.ಟಿ.ಒ ಅಧಿಕಾರಿಗಳು, ಶಿರಾಳಕೊಪ್ಪ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಜೆಸಿಬಿ ಒಂದಕ್ಕೆ ತೆರಿಗೆ ಕಟ್ಟದಿರುವುದು ಗೊತ್ತಾಗಿದೆ. ಜೆಸಿಬಿಯನ್ನು ತಡೆದು ದಂಡ ವಿಧಿಸಲಾಗಿದೆ. ಇನ್ನು ನಿಗದಿಗಿಂತಲೂ ಹೆಚ್ಚು ತೂಕ ಹೊತ್ತು ಸಾಗುತ್ತಿದ್ದ ವಾಹನಗಳಿಗೆ ದಂಡ ವಿಧಿಸಲಾಗಿದೆ.

Shimoga Nanjappa Hospital

ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಗಾಯತ್ರಿ ದೇವಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಯಿತು. ಆರ್.ಟಿ.ಒ ಅಧಿಕಾರಿ ರಾಕೇಶ್, ಮೋಟಾರ್ ವಾಹನ ಹಿರಿಯ ನಿರೀಕ್ಷಕ ವಾಸುದೇವ್, ಸಿಬ್ಬಂದಿ ಉಮೇಶ್, ಚಾಲಕ ಪಂಚಾಕ್ಷರಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ – ಮನೆ ಮುಂದೆ ಮರದ ಕೆಳಗೆ ನಿಲ್ಲಿಸಿದ್ದ ಮೂರು ಬೈಕುಗಳಿಗೆ ಬೆಂಕಿ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

Leave a Comment