ಬೆಂಗಳೂರು – ಶಿವಮೊಗ್ಗ ರೈಲು, ಬಸ್ಸುಗಳು ಮೂರು ದಿನ ಫುಲ್, ಹೇಗಿದೆ ಪರಿಸ್ಥಿತಿ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

 SHIVAMOGGA LIVE NEWS 

SHIMOGA | ದೀಪಾವಳಿ ಹಬ್ಬ ಮತ್ತು ಸಾಲು ಸಾಲು ರಜೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ನಿವಾಸಿಗಳು ತಮ್ಮೂರಿಗೆ ಮರಳುತ್ತಿದ್ದಾರೆ. ರೈಲು, ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಲ್ಲಿ ಟಿಕೆಟ್ (DEEPAVALI RUSH) ಸಿಗದ ಪರಿಸ್ಥಿತಿಯಾಗಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Shimoga Nanjappa Hospital

(DEEPAVALI RUSH)

ರೈಲಲ್ಲಿ ಸೀಟ್ ಸಿಗೋದು ಅನುಮಾನ

ಹಬ್ಬದ ಹಿನ್ನೆಲೆ ಶಿವಮೊಗ್ಗಕ್ಕೆ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಹಾಗಾಗಿ ಶಿವಮೊಗ್ಗಕ್ಕೆ ಒಂದು ವಿಶೇಷ ರೈಲು ಸೇವೆ ಒದಗಿಸಲಾಗಿದೆ. ಹಾಗಿದ್ದೂ ಎಲ್ಲಾ ರೈಲುಗಳಲ್ಲಿ ಸೀಟುಗಳು ಬುಕ್ ಆಗಿದ್ದು, ವೆಯ್ಟಿಂಗ್ ಲಿಸ್ಟ್ 100ಕ್ಕಿಂತಲೂ ಹೆಚ್ಚಾಗಿದೆ.

ಬೆಂಗಳೂರು – ಶಿವಮೊಗ್ಗ ಜನ ಶತಾಬ್ದಿ ಅ.21 ರಿಂದ 23ರವರೆಗೆ ಎಲ್ಲಾ ಬಗೆಯ ಕೋಚ್ ಗಳ ಟಿಕೆಟ್ ಬುಕ್ ಆಗಿವೆ. ಸಕೆಂಡ್ ಕ್ಲಾಸ್ ಸಿಟಿಂಗ್, ಎಸಿ ಚೇರ್ ಕಾರ್ ಎರೆಡರಲ್ಲು ಮೂರು ದಿನ ವೇಯ್ಟಿಂಗ್ ಲಿಸ್ಟ್ ನೂರರ ಮೇಲಿದೆ. ಇನ್ನು, ಬೆಂಗಳೂರು – ತಾಳಗುಪ್ಪ ಎಕ್ಸ್ ಪ್ರೆಸ್ ರೈಲಿನಲ್ಲಿಯು ಇದೆ ಸ್ಥಿತಿ.

Shimoga Nanjappa Hospital

ಯಶವಂತಪುರ ಶಿವಮೊಗ್ಗ ಇಂಟರ್ ಸಿಟಿ ರೈಲಿನಲ್ಲಿ ಸೋಮವಾರದವರೆಗೆ ಸೀಟುಗಳು ಬುಕ್ ಆಗಿವೆ. ವೇಯ್ಟಿಂಗ್ ಲಿಸ್ಟ್ ಎಂದು ಪ್ರಕಟಿಸಲಾಗಿದೆ.

ಮೈಸೂರು ತಾಳಗುಪ್ಪ ರಾತ್ರಿ ರೈಲಿನಲ್ಲಿ ಅ.21 ರಿಂದ ಅ.23ರವರೆಗೆ ಸೀಟುಗಳು ಸಂಪೂರ್ಣ ಬುಕ್ ಆಗಿವೆ. ಸಕೆಂಡ್ ಕ್ಲಾಸ್ ಸಿಟಿಂಗ್ ಇವತ್ತಿಗೆ ಸೀಟ್ ಫುಲ್. ಇನ್ನೆರಡು ಮೂರು ದಿನ ವೇಯ್ಟಿಂಗ್ ಲಿಸ್ಟ್ ಇದೆ. ಸ್ಲೀಪರ್, ಎಸಿ ಕೋಚುಗಳು ಭರ್ತಿಯಾಗಿವೆ.

(DEEPAVALI RUSH)

ವಿಶೇಷ ರೈಲಿಗು ಡಿಮಾಂಡಪ್ಪೋ ಡಿಮಾಂಡ್

ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಕಡೆಗೆ ರೈಲ್ವೆ ಇಲಾಖೆ ವಿಶೇಷ ರೈಲು ಸೇವೆ ಒದಗಿಸಿದೆ. ಯಶವಂತಪುರದಿಂದ ಶಿವಮೊಗ್ಗಕ್ಕು ಒಂದು ವಿಶೇಷ ರೈಲು ಸೇವೆ ಆರಂಭಿಸಲಾಗಿದೆ. ಅ.22ರಂದು ಒಂದು ದಿನ ಮಾತ್ರ ಈ ರೈಲು ಸಂಚರಿಸಲಿದೆ. ಬೆಳಗ್ಗೆ 10.30ಕ್ಕೆ ಯಶವಂತಪುರದಿಂದ ಹೊರಡಲಿದೆ. ಈಗಾಗಲೆ ಇದರ ಸ್ಲೀಪರ್ ಕ್ಲಾಸ್ ಸೀಟುಗಳು ವೇಯ್ಟಿಂಗ್ ಲಿಸ್ಟ್ ಹಂತಕ್ಕೆ ಬಂದಿದೆ. 3ಎ ಕೋಚ್ ಆರ್.ಎ.ಸಿ, 2ಎ ಕೋಚ್ ನಲ್ಲಿ ಬೆರಳೆಣಿಕೆ ಸೀಟುಗಳು ಲಭ್ಯವಿವೆ.

ಬಸ್ಸುಗಳು ಫುಲ್ ಫುಲ್

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವ KSRTC ಬಸ್ಸುಗಳಲ್ಲಿಯು ಕಾಯ್ದಿರಿಸುವ ಸೀಟುಗಳು ಭರ್ತಿಯಾಗಿವೆ. ಇವತ್ತು ರಾತ್ರಿ ಹೊರಡುವ ಬಹುತೇಕ ಬುಸ್ಸುಗಳಲ್ಲಿ ಸೀಟುಗಳು ರಿಜರ್ವ್ ಆಗಿವೆ. ನಿತ್ಯ ಸಂಚರಿಸುವ ಐರಾವತ ಬಸ್ಸುಗಳ ಜೊತೆಗೆ, KSRTC ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಿದೆ. ಅವುಗಳ ಟಿಕೆಟ್ ಕೂಡ ಸಂಪೂರ್ಣ ಭರ್ತಿಯಾಗಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಎಲ್ಲಾ ಬಸ್ಸುಗಳಲ್ಲಿ ಸೀಟುಗಳು 0 ಎಂದು ಪ್ರಕಟಿಸಲಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಬೆಂಗಳೂರು, ಮೈಸೂರು ಹೊರತು ಶಿವಮೊಗ್ಗದಿಂದ ಉಳಿದೆಲ್ಲಿಗೆಲ್ಲ ರೈಲುಗಳು ಸಂಚರಿಸಲಿವೆ?

ಸ್ಲೀಪರ್ ಕೋಚ್, ರಾಜಹಂಸ, ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿಯು ಕಾಯ್ದಿರಿಸುವ ಸೀಟುಗಳು ಬಹುತೇಕ ಭರ್ತಿಯಾಗಿದೆ. ಹಾಗಾಗಿ ಟಿಕೆಟ್ ರಿಜರ್ವ್ ಮಾಡದ ಪ್ರಯಾಣಿಕರು ಸೀಟಿಗಾಗಿ ತೀವ್ರ ಸಂಕಷ್ಟ ಅನುಭವಿಸ ಬೇಕಾಗುತ್ತದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ? ಯಾವೆಲ್ಲ ಸಮಯದಲ್ಲಿ ಸಂಚರಿಸುತ್ತವೆ?

ಖಾಸಗಿ ಬಸ್ಸುಗಳಲ್ಲಿಯು ಟಿಕೆಟ್ ಬುಕಿಂಗ್ ಬಹುತೇಕ ಮುಗಿದಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಅವುಗಳ ದರ ತುಸು ದುಬಾರಿಯಾಗುವ ಸಂಭವವಿದೆ.

jnnce college shimoga

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment