SHIVAMOGGA LIVE NEWS | 14 NOVEMBER 2022
SHIMOGA | ಆಟೋ ಚಾಲಕರು ಮೀಟರ್ (auto rate) ಹಾಕುವುದಿಲ್ಲ, ಯದ್ವ ತದ್ವ ಹಣ ಕೇಳುತ್ತಾರೆ ಎಂದು ಸಾಮಾನ್ಯ ಜನರು ಆರೋಪಿಸುತ್ತಾರೆ. ಈ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಾರೆ. ಆದರೆ, ಇದೆ ಪರಿಸ್ಥಿತಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗೆ ಒಟ್ಟಿಗೆ ಅನುಭವಕ್ಕೆ ಬಂದರೆ..!
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಆಟೋ ಪ್ರಯಾಣ ದರ ಏರಿಕೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು, ಶಿವಮೊಗ್ಗದಲ್ಲಿ ಆಟೋ ಚಾಲಕನೊಬ್ಬ ಮೀಟರ್ ಹಾಕದೆ, 200 ರೂ. ಕೊಡಿ ಎಂದು ಡಿಮಾಂಡ್ ಮಾಡಿದ್ದನ್ನು ಸ್ಮರಿಸಿಕೊಂಡರು.
(auto rate)
‘ನಾನು, ಎಸ್.ಪಿ ಒಟ್ಟಿಗೆ ಇದ್ದೆವು’
ಆಟೋ ಚಾಲಕರು ಮನಸೋಯಿಚ್ಛೆ ಹಣ ವಸೂಲಿ ಮಾಡುತ್ತಾರೆ ಎಂದು ಜನ ಆರೋಪಿಸುತ್ತಿದ್ದಾರೆ. ಇದು ಬರಿ ಜನರ ಅಭಿಪ್ರಾಯವಲ್ಲ. ತಮ್ಮ ಅನುಭವಕ್ಕು ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸಭೆಯಲ್ಲಿ ತಿಳಿಸಿದರು.
‘ಹಿಂದಿನ ಎಸ್.ಪಿಯವರು ಮತ್ತು ನಾನು ಮೀನಾಕ್ಷಿ ಭವನದಿಂದ ಡಿ.ಸಿ. ಆಫೀಸಿಗೆ ಬರಲು ಆಟೋ ಹತ್ತಲು ಹೋದೆವು. ಆಟೋ ಚಾಲಕ 200 ರೂ. ಆಗಲಿದೆ ಎಂದು ತಿಳಿಸಿದೆ. ಮೀಟರ್ ಹಾಕೋದಿಲ್ಲವಾ ಎಂದರೆ, ಇಲ್ಲ ಎಂದು ಉತ್ತರಿಸಿದ. ಕೊನೆಗೆ, ನಾವಿಬ್ಬರು ನಮ್ಮ ಕಾರು ಕರೆಯಿಸಿ ಕಚೇರಿವರೆಗು ಬರಬೇಕಾಯಿತು’ ಎಂದು ಸಭೆಗೆ ತಿಳಿಸಿದರು.
(auto rate)
ಇನ್ಮುಂದೆ ಕಠಿಣ ಕ್ರಮದ ವಾರ್ನಿಂಗ್
ತಮ್ಮ ಅನುಭವ ಹಂಚಿಕೊಳ್ಳುವುದರ ಜೊತೆಗೆ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು, ಪ್ರಯಾಣ ದರ ಪರಿಷ್ಕರಣೆಯಾಗಿದೆ. ಎಲ್ಲಾ ಆಟೋಗಳಲ್ಲಿ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು ಮತ್ತು ಮೀಟರ್ ಬಳಸಬೇಕು. ಇದಕ್ಕೆ ಇನ್ನೊಂದು ತಿಂಗಳು ಗಡುವು ನೀಡಲಾಗುತ್ತದೆ ಎಂದು ತಿಳಿಸಿದರು.
(auto rate)
ರಜನಿ ಸ್ಟೈಲ್ ಎಲ್ಲಾ ಇಲ್ಲ
ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ
ಆಟೋಗಳಲ್ಲಿ ನಿಗದಿಗಿಂತಲೂ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಆಟೋದಲ್ಲಿ ಮುಂಬದಿಯಲ್ಲಿ ಚಾಲಕನ ಅಕ್ಕಪಕ್ಕ ಪ್ರಯಾಣಿಕರನ್ನು ಕೂರಿಸಿಕೊಳ್ಳುವುದು ಕಂಡು ಬಂದರೆ ದಂಡ ವಿಧಿಸಲಾಗುತ್ತದೆ. ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸೂಚನೆ ನೀಡಿದರು.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಲ್ಲಿ ಆಟೋ ಪ್ರಯಾಣ ದರ ಹೆಚ್ಚಳ, ಏರಿಕೆಯಾಗಿದ್ದೆಷ್ಟು? ಈವರೆಗೂ ಇದ್ದಿದ್ದೆಷ್ಟು?
ಇನ್ನು, ಆಟೋಗಳ ಪರ್ಮಿಟ್ ವ್ಯಾಪ್ತಿ ಹೆಚ್ಚಳ ಮಾಡುವಂತೆ ಚಾಲಕರು ಮನವಿ ಮಾಡಿದರು. ನಗರ ವ್ಯಾಪ್ತಿ ವಿಸ್ತಾರಗೊಂಡಿದೆ. ಆಟೋಗಳು ನಗರದ 15 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಬೇಕು. ಇದರಿಂದ ತಮ್ಮ ಜೀವನೋಪಾಯಕ್ಕೆ ಅನುಕೂಲ ಆಗಲಿದೆ ಎಂದು ಚಾಲಕರು ಮನವಿ ಮಾಡಿದರು. ಈ ಸಂಬಂಧ ಪರಿಶೀಲಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಸಾರಿಗೆ ಇಲಾಖೆ ಅಧಿಕಾರಿಗಳು, ಸಂಚಾರ ಠಾಣೆ ಇನ್ಸ್ ಪೆಕ್ಟರ್ ಸಂತೋಷ್, ವಿವಿಧ ಆಟೋ ಸಂಘಟನೆಗಳ ಪ್ರಮುಖರು, ಚಾಲಕರು, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.