ಕಳೆದು ಹೋಗಿದ್ದ ಕತ್ತೆಗಳು ಸಕ್ರೆಬೈಲಲ್ಲಿ ಪತ್ತೆ, ಹೊಡೆದುಕೊಂಡು ಬರುವಾಗ ಸಂಭವಿಸಿತು ದುರ್ಘಟನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 NOVEMBER 2022

ಶಿವಮೊಗ್ಗ :  ಕಳೆದು ಹೋಗಿದ್ದ ಕತ್ತೆಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಮನೆ ಕಡೆಗೆ ಹೊಡೆದುಕೊಂಡು ಬರುವಾಗ ಬಸ್ ಡಿಕ್ಕಿ ಹೊಡೆದಿದೆ. ಐದು ಕತ್ತೆಗಳು (donkey death) ಸ್ಥಳದಲ್ಲೆ ಸಾವನ್ನಪ್ಪಿದ್ದು, ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

Shimoga Nanjappa Hospital

ಮಿಳಘಟ್ಟದ ಶಿವಣ್ಣ ಎಂಬುವವರಿಗೆ ಸೇರಿದ 5 ಕತ್ತೆಗಳು ಸಾವನ್ನಪ್ಪಿವೆ. ಗಾಜನೂರು ಕ್ಯಾಂಪ್ ಗ್ರಾಮದ ಬಳಿ ಘಟನೆ ಸಂಭವಿಸಿದೆ.

(donkey death)

ಕಳೆದು ಹೋಗಿದ್ದ ಕತ್ತೆಗಳು

ಶಿವಣ್ಣ ಅವರು ಐದು ಕತ್ತೆಗಳನ್ನು ಸಾಕಿಕೊಂಡಿದ್ದರು. ಅವುಗಳ ಹಾಲು ಮತ್ತು ಗೊಬ್ಬರ ಮಾರಾಟ ಮಾಡಿ LIC HOUSIN FINANCE SHIMOGA jpgಜೀವನ ನಡೆಸುತ್ತಿದ್ದರು. ಕಳೆದ ಮೂರ್ನಾಲ್ಕು ದಿನದಿಂದ ಕತ್ತೆಗಳು ಕಣ್ಮರೆಯಾಗಿದ್ದವು. ಸಕ್ರೆಬೈಲು ಬಳಿ ಕತ್ತೆ ಇರುವುದು ಗೊತ್ತಾಗಿ, ಶಿವಣ್ಣ, ಮಾವ ಶೇಖರ, ಸ್ನೇಹಿತ ಮಂಜು ಅಲ್ಲಿಗೆ ತೆರಳಿದ್ದರು. ಬೆಳಗಿನ ಜಾವ 3.45ರ ಹೊತ್ತಿಗೆ ಕತ್ತೆಗಳನ್ನು ಅಲ್ಲಿಂದ ಹೊಡೆದುಕೊಂಡು ಬರುತ್ತಿದ್ದರು.

(donkey death)

ಕತ್ತೆಗಳಿಗೆ ಬಸ್ ಡಿಕ್ಕಿ

ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಕತ್ತೆಗಳನ್ನು ಹೊಡೆದುಕೊಂಡು ಬರುತ್ತಿದ್ದರು. ಆಗ ತೀರ್ಥಹಳ್ಳಿ ಕಡೆಯಿಂದ ಬಂದ ಖಾಸಗಿ ಬಸ್ ಕತ್ತೆಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂರು ಗಂಡು, ಎರಡು ಹೆಣ್ಣು https://chat.whatsapp.com/KChu2C1bGTM2v9HmZlfIkSಕತ್ತೆಗಳು ಸ್ಥಳದಲ್ಲೆ ಸಾವನ್ನಪ್ಪಿವೆ.

ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಸ್ ಚಾಲನೆ ಮಾಡಿ, ಕತ್ತೆಗಳಿಗೆ ಡಿಕ್ಕಿ ಹೊಡೆಸಿದ ಚಾಲಕ ಶ್ರೀಧರ ಎಂಬಾತನ ವಿರುದ್ಧ ಶಿವಣ್ಣ ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 28, 2022

Leave a Comment