ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 12 DECEMBER 2022
ಭದ್ರಾವತಿ : ಬೆಂಗಳೂರು – ತಾಳಗುಪ್ಪ ಇಂಟರ್ ಸಿಟಿ ರೈಲಿನ ಇಂಜಿನ್ ನಲ್ಲಿ (engine problem) ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಭದ್ರಾವತಿ ನಿಲ್ದಾಣದಿಂದ ಸ್ವಲ್ಪ ದೂರ ಬಂದು ರೈಲು ನಿಂತಿತ್ತು. ಪ್ರಯಾಣಿಕರು ಗೊಂದಲಕ್ಕೀಡಾಗಿದ್ದರು.

ಭದ್ರಾವತಿ ನಿಲ್ದಾಣಕ್ಕೆ 7.26ಕ್ಕೆ ಆಗಮಿಸಿದ್ದ ರೈಲು 7.27ಕ್ಕೆ ಹೊರಟಿತ್ತು. ಕಡದಕಟ್ಟೆ ಬಳಿ ರೈಲ್ವೆ ಇಂಜಿನ್ ಫೇಲ್ ಆಗಿ ನಿಂತಿತ್ತು. ಹಾಗಾಗಿ ಮುಂದೇನು ಎಂದು ತೋಚದೆ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದರು. ಕೆಲವು ಪ್ರಯಾಣಿಕರು ರೈಲು ಇಳಿದು ಭದ್ರವತಿ ಬೈಪಾಸ್ ತನಕ ನಡೆದು, ಬಳಿಕ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ತೆರಳಿದರು. ಸಾಗರ, ತಾಳಗುಪ್ಪ ಹೋಗುವ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದರು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಿಂದ ರಾಜ್ಯದ ಯಾವೆಲ್ಲ ಜಿಲ್ಲೆಗಳಿಗೆ ರೈಲ್ವೆ ಸಂಪರ್ಕವಿದೆ ಗೊತ್ತಾ?
ಸುಮಾರು ಒಂದು ಗಂಟೆ ನಿಂತಿದ್ದ ರೈಲು ಪುನಃ ಪ್ರಯಾಣ ಆರಂಭಿಸಿದೆ ಎಂದು ತಿಳಿದು ಬಂದಿದೆ. ಇದೆ ಕಾರಣಕ್ಕೆ ಶಿವಮೊಗ್ಗ ನಿಲ್ದಾಣಕ್ಕೆ ನಿಗದಿಗಿಂತಲೂ 1 ಗಂಟೆ 21 ನಿಮಿಷ ತಡವಾಗಿ ರೈಲು ಆಗಮಿಸಿತು. ಈಗ ತಾಳಗುಪ್ಪದ ಕಡೆಗೆ ಪ್ರಯಾಣ ಮುಂದುವರೆಸಿದೆ.

LATEST NEWS
- ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

About The Editor
ನಿತಿನ್ ಆರ್.ಕೈದೊಟ್ಲು

CLICK & JOIN – SHIVAMOGGA LIVE COMMUNITY














