ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 17 DECEMBER 2022
ಶಿವಮೊಗ್ಗ : ಬಸ್ ಹತ್ತುವ ಭರದಲ್ಲಿ ವ್ಯಕ್ತಿಯೊಬ್ಬರ ಕಾಲಿಗೆ ಸೂಟ್ ಕೇಸ್ (suit case) ತಾಗಿದೆ. ಇದೆ ವಿಚಾರವಾಗಿ ಎರಡು ಕಡೆಯವರು ಕೈ ಕೈ ಮಿಲಾಯಿಸಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು, ಪ್ರತಿದೂರು ದಾಖಲಾಗಿದೆ.

ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ತಾಹೀರ್ ಪರ್ವೀನ್ ಮತ್ತು ಅವರ ಮಗ ದಾವಣಗೆರೆ ಬಸ್ ಹತ್ತಲು ತೆರಳುತ್ತಿದ್ದರು. ತಾಹೀರ್ ಪರ್ವಿನ್ (60) ಅವರ ಮಗ ಹಿಡಿದುಕೊಂಡಿದ್ದ ಸೂಟ್ ಕೇಸ್ (suit case) ಕೇಶವಮೂರ್ತಿ (70) ಎಂಬುವವರ ಕಾಲಿಗೆ ತಾಗಿದೆ. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸಿದ್ದಾರೆ.
(suit case)
ಕೇಶವಮೂರ್ತಿ ಆರೋಪವೇನು?
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಶವಮೂರ್ತಿ ಅವರು ದೂರು ನೀಡಿದ್ದಾರೆ. ‘ಸೂಟ್ ಕೇಸ್ ಕಾಲಿಗೆ ತಾಗಿತು. ಸರಿಯಾಗಿ ನೋಡಿಕೊಂಡು ಬಾರಯ್ಯ ಎಂದಿದ್ದಕ್ಕೆ ಆ ವ್ಯಕ್ತಿ ಅವಾಚ್ಯವಾಗಿ ಬೈದು, ಹೊಡೆಯಲು ಆರಂಭಿಸಿದ. ಇದೆ ಹೊತ್ತಿಗೆ ಇನ್ನೂ ಮೂವರು ಯುವಕರು ಆತನ ಜೊತೆಯಾಗಿ ತನ್ನ ಮೇಲೆ ಹಲ್ಲೆ ಮಾಡಿ, ಬಟ್ಟೆ ಹರಿದಿದ್ದಾರೆ. ತನ್ನ ಬಳಿ ಇದ್ದ 3500 ರೂ. ನಗದು, 8 ಗ್ರಾಂ ತೂಕದ ಬಂಗಾರದ ಚೈನ್ ಕಿತ್ತುಕೊಂಡು ಹೋಗಿದ್ದಾರೆ. ತಾಹೀರ್ ಪರ್ವಿನ್ ಎಂಬ ಮಹಿಳೆ ಯುವಕರಿಗೆ ಕುಮ್ಮಕ್ಕು ನೀಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ತಾಹೀರ್ ಪರ್ವೀನ್ ದೂರಿನಲ್ಲಿ ಏನಿದೆ?
ಘಟನೆ ಸಂಬಂಧ ತಾಹೀರ್ ಪರ್ವೀನ್ ಕೂಡ ದೂರು ನೀಡಿದ್ದಾರೆ. ‘ಸೂಟ್ ಕೇಸ್ ತಾಗಿದ್ದಕ್ಕೆ ಆ ವ್ಯಕ್ತಿ ಅವಾಚ್ಯವಾಗಿ ಬೈದಿದ್ದಾರೆ. ಗೊತ್ತಾಗಿಲ್ಲ ಎಂದು ತಾನು ಮತ್ತು ಮಗ ಹೇಳಿದೆವು. ಇದಕ್ಕೆ ಸುಮ್ಮನಾಗದ ಆ ವ್ಯಕ್ತಿ ಅವಾಚ್ಯವಾಗಿ ನಿಂದಿಸಿ, ತನ್ನ ಮಗನಿಗೆ ಹೊಡೆದರು. ಬಿಡಿಸಲು ಹೋದಾಗ ತನ್ನನ್ನು ಎಳೆದಾಡಿ, ಬಟ್ಟೆ ಹರಿದಿದ್ದಾರೆ. ಈ ಹೊತ್ತಿಗೆ ಸಾರ್ವಜನಿಕರು ಜಗಳ ಬಿಡಿಸಿದ್ದಾರೆ. ಆಗ ಆ ವ್ಯಕ್ತಿಯ ಬಟ್ಟೆ ಹರಿದಿದೆ’ ಎಂದು ದೂರಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ 20 ಚೆಕ್ ಪೋಸ್ಟ್, ಪೊಲೀಸರಿಂದ ದಿಢೀರ್ ಕಾರ್ಯಾಚರಣೆ, 46 ಜನರ ವಿರುದ್ಧ ಕೇಸ್
ಘಟನೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LATEST NEWS
- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು

CLICK & JOIN – SHIVAMOGGA LIVE COMMUNITY














