ಅರ್ಧ ವರ್ಷದಲ್ಲಿ 6 ರೌಡಿಗಳ ಕಾಲಿಗೆ ಗುಂಡಿಟ್ಟ ಶಿವಮೊಗ್ಗ ಪೊಲೀಸರು, ಯಾರೆಲ್ಲರಿಗೆ ಫೈರ್ ಮಾಡಲಾಗಿದೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 19 DECEMBER 2022

ಶಿವಮೊಗ್ಗ : ಜೈಲ್ ರಸ್ತೆಯಲ್ಲಿ ಕಾರಿಗೆ ಬೆಂಕಿ ಹಚ್ಚಿದ್ದ ಪ್ರಕರಣದ ಆರೋಪಿಯ ಕಾಲಿಗೆ ಪೊಲೀಸರು ಗುಂಡು (police firing) ಹೊಡೆದಿದ್ದಾರೆ. ಈ ಮೂಲಕ ಅರ್ಧ ವರ್ಷದಲ್ಲಿ ಶಿವಮೊಗ್ಗ ಪೊಲೀಸರು ಆರನೆ ಬಾರಿ ತಮ್ಮ ಬಂದೂಕಿಗೆ ಕೆಲಸ ಕೊಟ್ಟಿದ್ದಾರೆ.

Shimoga Nanjappa Hospital

ಜೂನ್ ತಿಂಗಳಿಂದ ಯಾರೆಲ್ಲರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಅನ್ನುವುದರ ಪೂರ್ಣ ಮಾಹಿತಿ ಇಲ್ಲಿದೆ.

(police firing)

ಅರ್ಷದ್ ಖಾನ್ | ಜೂನ್ 3, 2022

ಶಿವಮೊಗ್ಗದ ಅನುಪಿನಕಟ್ಟೆ ಬಳಿ ದರೋಡೆ ಹೊಂಚು ಸಂಬಂಧ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ತುಂಗಾ ನಗರ ಠಾಣೆ ಪೊಲೀಸರು ದರೋಡೆಕೋರರ ಬಂಧನಕ್ಕೆ ತೆರಳಿದ್ದರು. ಕಾರ್ಯಾಚರಣೆ ವೇಳೆ ರೌಡಿ ಅರ್ಷದ್ ಖಾನ್, ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾನೆ. ಆಗ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ಹಾರಿಸಿದ ಗುಂಡು ಅರ್ಷದ್ ಖಾನ್ ಕಾಲನ್ನು ಸೀಳಿತ್ತು.

(police firing)

ಶಾಹಿದ್ ಖುರೇಶಿ | ಜೂನ್ 21, 2022

ರಾಬರಿ ಪ್ರಕರಣಗಳ ಪ್ರಮುಖ ಆರೋಪಿ ಶಾಹಿದ್ ಖುರೇಶಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಕೆ.ಆರ್.ಪುರಂ ಬಳಿ ಆತ ಇರುವ ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಠಾಣೆಯ ಕ್ರೈಮ್ ವಿಭಾಗದ ಸಿಬ್ಬಂದಿ ಗುರುನಾಯಕ್ ಮತ್ತು ರಮೇಶ್ ತೆರಳಿದ್ದರು. ಆತನನ್ನು ಹಿಡಿಯಲು ಹೋದಾಗ ರಮೇಶ್ ಅವರ ಕೈಗೆ ಮತ್ತು ಗುರುನಾಯಕ್ ಅವರ ಎದೆಗೆ ಚಾಕು ಹಾಕಿ ಪರಾರಿಯಾಗಿದ್ದ. ಕೆಲವೇ ಹೊತ್ತಿನಲ್ಲಿ ರಾಜೀವ್ ಗಾಂಧಿ ಬಡಾವಣೆಯಲ್ಲಿ ಶಾಹಿದ್ ಖುರೇಶಿ ಪತ್ತೆಯಾಗಿದ್ದಾನೆ. ಬಂಧಿಸಲು ತೆರಳಿದ್ದಾಗ, ಪುನಃ ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದ್ದಾನೆ. ಆತನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು.

(police firing)

Shimoga Nanjappa Hospital

ಮೊಹಮ್ಮದ್ ಜಬಿ | ಆಗಸ್ಟ್ 16, 2022

ಗಾಂಧಿ ಬಜಾರ್ ತರಕಾರಿ ಮಾರುಕಟ್ಟೆ ಬಳಿ ಆಗಸ್ಟ್ 15ರಂದು ಪ್ರೇಮ್ ಸಿಂಗ್ (20) ಎಂಬ ಯುವಕನಿಗೆ ಮಾರಕಾಸ್ತ್ರದಿಂದ ಇರಿಯಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಾರ್ನಮಿ ಬೈಲಿನ ಮೊಹಮ್ಮದ್ ಜಬಿ ಅಲಿಯಾಸ್ ಚರ್ಬಿ ಎಂಬಾತನನ್ನು ಬಂಧಿಸಲು ತೆರಳಿದ್ದರು. ಎನ್.ಟಿ.ರಸ್ತೆಯ ಫಲಕ್ ಪ್ಯಾಲೆಸ್ ಸಮೀಪ ಮೊಹಮ್ಮದ್ ಜಬಿ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ. ವಿನೋಬನಗರ ಠಾಣೆ ಪಿಎಸ್ಐ ಮಂಜುನಾಥ ಕುರಿ ಅವರು ಬಂದೂಕಿನಿಂದ ಹಾರಿಸಿದ ಗುಂಡು ಬಲಗಾಲಿಗೆ ತಗುಲಿತ್ತು.

(police firing)

ಜಬಿ | ಅಕ್ಟೋಬರ್ 26, 2022

ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿಜಯ್ ಎಂಬಾತನ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಬಿಯನ್ನು ಬಂಧಿಸಲಾಗಿತ್ತು. ಹರ್ಷ ಫರ್ನ್ ಹೊಟೇಲ್ ಸಮೀಪ ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನು ಬಚ್ಚಿಡಲಾಗಿತ್ತು. ಮಹಜರ್ ಗೆ ಕರೆದೊಯ್ದ ಸಂದರ್ಭ ಜಯನಗರ ಠಾಣೆ ಸಿಬ್ಬಂದಿ ರೋಷನ್ ಅವರ ಮೇಲೆ ಜಬಿ ಹಲ್ಲೆಗೆ ಮುಂದಾಗಿದ್ದಾನೆ. ಆಗ ಕುಂಸಿ ಠಾಣೆ ಇನ್ಸ್ ಪೆಕ್ಟರ್ ಹರೀಶ್ ಪಟೇಲ್ ಹಾರಿಸಿದ ಗುಂಡು ಜಬಿ ಕಾಲಿಗೆ ಹೊಕಿತ್ತು.

ಇದನ್ನೂ ಓದಿ – ಶಿವಮೊಗ್ಗ ಡಿವೈಎಸ್ಪಿಗೆ ಕೇಂದ್ರ ಗೃಹ ಮಂತ್ರಿ ಪದಕ

ಅಸ್ಲಾಂ | ನವೆಂಬರ್ 5, 2022

ಬಿ.ಹೆಚ್.ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಅಶೋಕ್ ಪ್ರಭು ಎಂಬುವವರ ಜೊತೆ ಕ್ಷುಲಕ ವಿಚಾರಕ್ಕೆ ಖ್ಯಾತೆ ತೆಗೆದು, ಹರಿತವಾದ ವಸ್ತುವಿನಿಂದ ಕೆನ್ನೆ ಭಾಗಕ್ಕೆ ಇರಿಯಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಅಸ್ಲಾಂ ಪುರುಲೆ ಸಮೀಪದ ಲೇಔಟ್ ಒಂದರಲ್ಲಿ ಅವಿತಿದ್ದ. ಬಂಧನಕ್ಕೆ ತೆರಳಿದ್ದಾಗ ದೊಡ್ಡಪೇಟೆ ಠಾಣೆ ಸಿಬ್ಬಂದಿ ರಮೇಶ್ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಆತ್ಮರಕ್ಷಣೆಗಾಗಿ ಪಿಎಸ್ಐ ವಸಂತ್ ಅವರು ಹಾರಿಸಿದ ಗುಂಡು ಅಸ್ಲಾಂನ ಕಾಲಿಗೆ ಹೊಕ್ಕಿದೆ.

Shimoga Police Shivaraj Injured

ಪ್ರವೀಣ | ಡಿಸೆಂಬರ್ 19, 2022

ಪ್ರಕರಣ ಒಂದನ್ನು ಹಿಂಪಡೆಯುವಂತೆ ಜೈಲ್ ರಸ್ತೆಯ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ, ಅವರ ಮಗಳ ಕಾರಿಗೆ ಬೆಂಕಿ ಹಚ್ಚಿಲಾಗಿತ್ತು. ಘಟನೆ ಸಂಬಂಧ ಪ್ರವೀಣ್ ಅಲಿಯಾಸ್ ಮೋಟು ಎಂಬಾತನ ಬಂಧನಕ್ಕೆ ಪೊಲೀಸರು ತೆರಳಿದ್ದರು. ಸಾಗರ ರಸ್ತೆಯ ವೀರಣ್ಣನ ಬೆನವಳ್ಳಿ ಗ್ರಾಮದ ಬಳಿ ಪ್ರವೀಣ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಗ್ರಾಮಾಂತರ ಠಾಣೆ ಸಿಬ್ಬಂದಿ ಶಿವರಾಜ್ ಅವರ ಮೇಲೆ ಹಲ್ಲೆ ಯತ್ನಿಸಿದ್ದಾನೆ. ಈ ವೇಳೆ ಪಿಎಸ್ಐ ರಮೇಶ್ ಅವರು ಗುಂಡು ಹಾರಿಸಿದ್ದಾರೆ.

Shimoga Nanjappa Hospital

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment