ಶಿವಮೊಗ್ಗದಲ್ಲಿ ಸರ್ಕಾರಿ ನೌಕರರಿಗೆ ನವ ಸಂವತ್ಸರ ಕಾರ್ಯಕ್ರಮ, ಬರಲಿದ್ದಾರೆ ಸರಿಗಮಪ ಖ್ಯಾತಿಯ ಗಾಯಕರು

CS Shadakshari about new year ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

SHIVAMOGGA LIVE NEWS | 25 DECEMBER 2022

ಶಿವಮೊಗ್ಗ : ಸರ್ಕಾರಿ ನೌಕರರ ವಿಕಾಸ ಕೇಂದ್ರದಿಂದ ಹೊಸ ವರ್ಷಾಚರಣೆ (new year celebration) ನಿಮಿತ್ತ ಡಿ. 31ರಂದು ಬಸವನಗುಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆಫೀಸರ್‌ ಕ್ಲಬ್‌ನಲ್ಲಿ ನವ ಸಂವತ್ಸರ ಆಚರಿಸಲಾಗುವುದು ಎಂದು ಸಿ.ಎಸ್. ಷಡಾಕ್ಷರಿ ಹೇಳಿದರು.

Shimoga nanjappa hospital

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಷಡಾಕ್ಷರಿ ಅವರು, ಎರಡೂವರೆ ಎಕರೆ ಜಾಗದಲ್ಲಿ ಹೈಟೆಕ್ ಕ್ಲಬ್ ನಿರ್ಮಿಸಿದ್ದು, ಹೊಸ ವರ್ಷಾಚರಣೆಯನ್ನು (new year celebration) ಕ್ಲಬ್‌ನಲ್ಲೇ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎನ್.ಡಿ. ಪ್ರಕಾಶ್ ಪಾಲ್ಗೊಳ್ಳುವರು ಎಂದರು.

ಇದನ್ನೂ ಓದಿ – ಎನ್.ಪಿ.ಎಸ್ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಸಮಯ ಫಿಕ್ಸ್, ಅಖಾಡಕ್ಕಿಳಿಯಲು ಸಿದ್ಧವಾಗಿದೆ ಸಂಘ, ಯಾವಾಗ?

ನವ ಸಂವತ್ಸರ ಕಾರ್ಯಕ್ರಮದಲ್ಲಿ ರಾತ್ರಿ 7ರಿಂದ 12ರವರೆಗೆ ವಿಶೇಷ ಗಾಯನ, ಸಂಗೀತ ರಸ ಸಂಜೆ ಏರ್ಪಡಿಸಲಾಗಿದೆ. ಗಾನಕೋಗಿಲೆ ಯುವರಾಜ್, ಸರಿಗಮಪ ಖ್ಯಾತಿಯ ಸುಬ್ರಹ್ಮಣ್ಯ ಪೊಲೀಸ್, ದರ್ಶನ್, ಅಂಕಿತಾ ಕೊಂಡು, ಸ್ಯಾಕ್ಸೋಫೋನ್ ಸಂದೀಪ್ ಭಾಗವಹಿಸಲಿದ್ದಾರೆ ಎಂದು ಷಡಾಕ್ಷರಿ ತಿಳಿಸಿದರು.

ಕ್ಲಬ್ ಮನೋರಂಜನಾ ಕೇಂದ್ರ, ಷಟಲ್ ಬ್ಯಾಡ್ಮಿಂಟನ್, ಕೇರಂ, ಚೆಸ್, ಟೇಬಲ್ ಟೆನ್ನಿಸ್, ಮಲ್ಟಿ ಜಿಮ್, ಮಕ್ಕಳ ಕ್ರೀಡೆಗಳು, ಚಾಟ್ಸ್, ರೆಸ್ಟೋರೆಂಟ್, ಅತಿಥಿಗೃಹ ಮತ್ತು ಮಿನಿ ಪಾರ್ಟಿ ಹಾಲ್ ಹೊಂದಿದೆ. ಕ್ಲಬ್‌ನಲ್ಲಿ ಪ್ರತಿದಿನ ಬೆಳಗ್ಗೆ 5.30ರಿಂದ 6.30ರವರೆಗೆ ಯೋಗ, ಧ್ಯಾನ ಇರಲಿದೆ ಎಂದು ತಿಳಿಸಿದರು.

Shimoga Nanjappa Hospital

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment