SHIVAMOGGA LIVE NEWS | 24 DECEMBER 2022
ಶಿವಮೊಗ್ಗ : ವೇತನ ಆಯೋಗ ರಚನೆ ಸರ್ಕಾರಿ ನೌಕರರ ಸಂಘದ ಮೊದಲ ಆದ್ಯತೆಯಾಗಿತ್ತು. ಆ ಬಳಿಕ ಹೊಸ ಪಿಂಚಣಿ ನೀತಿ (ಎನ್.ಪಿ.ಎಸ್) ವಿರುದ್ಧ ಸಂಘ ಕ್ರಮಬದ್ಧವಾಗಿ, ನಿರ್ಣಾಯಕ ಹೋರಾಟ ನಡೆಸಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು. (New Pension Scheme)
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಎಸ್.ಷಡಾಕ್ಷರಿ ಅವರು, ಎನ್.ಪಿ.ಎಸ್ ವಿರುದ್ಧ ಹೋರಾಟದ ವಿಚಾರವಾಗಿ ಕೆಲವರು ತಮ್ಮನ್ನು ಸರ್ಕಾರದ ಏಜೆಂಟ್ ಎಂದು ಆರೋಪಿಸಿದ್ದಾರೆ. ಇದು ತಮ್ಮನ್ನು ವಿಚಲಿತಗೊಳಿಸಲ್ಲ. ಬದಲಾಗಿ, ವೇತನ ಆಯೋಗದ ಬಳಿಕ ಮುಂದಿನ ಹೋರಾಟದ ರೂಪುರೇಷ ಸಿದ್ಧಪಡಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
(New Pension Scheme)
ಷಡಾಕ್ಷರಿ ಹೇಳಿದ ಪ್ರಮುಖ 5 ವಿಚಾರ
1 ವೇತನ ಆಯೋಗ ಮತ್ತು ಎನ್.ಪಿ.ಎಸ್ (New Pension Scheme) ರದ್ಧತಿ ನಮ್ಮ ಪ್ರಮುಖ ಬೇಡಿಕೆ. ಆದರೆ ಎರಡನ್ನು ಒಟ್ಟಿಗೆ ಸರ್ಕಾರದ ಮುಂದಿಡಲು ಸಾಧ್ಯವಾಗುವುದಿಲ್ಲ. ಇದು ನಮ್ಮ ಸಂಘದ ಸಭೆಯಲ್ಲಿಯು ಚರ್ಚೆಯಾಗಿತ್ತು. ಸರ್ಕಾರವು ಎರಡು ಬೇಡಿಕೆ ಒಟ್ಟಿಗೆ ಈಡೇರಿಸಲು ಅಸಾಧ್ಯ ಎಂದು ತಿಳಿಸಿತ್ತು. ಒಮ್ಮೆಲೆ ಸರ್ಕಾರದ ಮೇಲೆ 40 ಸಾವಿರ ಕೋಟಿ ರೂ. ಹೊರೆ ಬೀಳಲಿದೆ. ಇದೆ ಕಾರಣಕ್ಕೆ ಮೊದಲು ವೇತನ ಆಯೋಗದತ್ತ ಗಮನ ಹರಿಸಿದ್ದೇವೆ.ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಕುಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯಕ್ಕೆ ಪ್ಲಾನ್, ಹಳ್ಳಿಗಳನ್ನು ಜನರೆ ಸೂಚಿಸಬಹುದು
3 ರಾಜ್ಯದಲ್ಲಿ 87 ಕೇಡರ್ ಗಳಿವೆ. ಎಲ್ಲಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸಭೆ ನಡೆಸಿದ್ದೇವೆ. ಮೊದಲು ವೇತನ ಆಯೋಗದತ್ತ ಗಮನ ಹರಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ಇಲ್ಲಿ ಷಡಾಕ್ಷರಿ ಒಬ್ಬರೆ ಎಲ್ಲವನ್ನು ತೀರ್ಮಾನಿಸಲು ಸಾಧ್ಯವಿಲ್ಲ.ಇದನ್ನೂ ಓದಿ –7ನೇ ವೇತನ ಆಯೋಗ ಸಂಪೂರ್ಣ ವಿಭಿನ್ನ, ಹಿಂದಿನಂತಿಲ್ಲ ಹೊರೆ, ಹೇಗಿರುತ್ತೆ ಆಯೋಗದ ಕೆಲಸ?
4 ಎನ್.ಪಿ.ಎಸ್ ನೌಕರರು ಕೂಡ ನಮ್ಮಲ್ಲಿ ಒಬ್ಬರು. ಎನ್.ಪಿ.ಎಸ್ ಸಮಸ್ಯೆ 16 ವರ್ಷದಿಂದ ಇದೆ. ಆಗ ಷೇರು ಮಾರುಕಟ್ಟೆ ಚನ್ನಾಗಿತ್ತು. ಈಗ ಪರಿಸ್ಥಿತಿ ಬೇರೆಯಾಗಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಹಲವು ಬಾರಿ ಚರ್ಚೆ ಮಾಡಿದ್ದೇನೆ. ಯಾವ ರಾಜ್ಯದಲ್ಲಿ ಏನಾಗಿದೆ ಎಂಬುದನ್ನು ಗಮನಿಸೋಣ ಎಂದಿದ್ದಾರೆ. ಮೂರು ರಾಜ್ಯದಲ್ಲಿ ಎನ್.ಪಿ.ಎಸ್ ರದ್ಧತಿಗೆ ಆದೇಶವಾಗಿದೆ. ಆದರೆ ಹಳೆ ಪಿಂಚಣಿ ನೀತಿ ಜಾರಿಗೊಂಡಿಲ್ಲ. ಕೇಂದ್ರ ಸರ್ಕಾರ ಎನ್.ಪಿ.ಎಸ್. ರದ್ಧತಿಯನ್ನು ತಿರಸ್ಕರಿಸಿದೆ. 5 ಎನ್.ಪಿ.ಎಸ್ ರದ್ಧತಿಗೆ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ವಿರೋಧವಿಲ್ಲ. ದೊಡ್ಡ ಮಟ್ಟದ ಹೋರಾಟ ಆದರಷ್ಟೆ ಸರ್ಕಾರ ಗಮನ ಹರಿಸುತ್ತದೆ. ಹೋರಾಟಗಳನ್ನು ಯೋಜನ ಬದ್ಧವಾಗಿ ರೂಪಿಸಬೇಕು. ಮೊದಲು ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ, ಸಮಯ ಪಡೆಯಬೇಕು. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಬೇಕು. ಆ ಬಳಿಕ ಹೋರಾಟ ನಡೆಸಬೇಕು. ರಾಜ್ಯದ 3.5 ಲಕ್ಷ ಎನ್.ಪಿ.ಎಸ್ ನೌಕರರು ಯಾವುದೆ ಯೋಚನೆ ಮಾಡುವ ಅಗತ್ಯವಿಲ್ಲ. ಸರ್ಕಾರಿ ನೌಕರರ ಸಂಘ ಹೋರಾಟ ನಡೆಸಲಿದೆ.