ಮೈಸೂರು -ತಾಳಗುಪ್ಪ ಎಕ್ಸ್ ಪ್ರೆಸ್ ಸೇರಿ ಶಿವಮೊಗ್ಗದ 6 ರೈಲುಗಳ ಸಮಯದಲ್ಲಿ ಬದಲಾವಣೆ, ಯಾವೆಲ್ಲ ರೈಲುಗಳು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 DECEMBER 2022

ಶಿವಮೊಗ್ಗ : ಬೆಂಗಳೂರು ವಿಭಾಗದ ವಿವಿಧ ನಿಲ್ದಾಣಗಳಿಗೆ ರೈಲುಗಳು ತಲುಪುವ ಮತ್ತು ಹೊರಡುವ ಸಮಯವನ್ನು ಬದಲಾವಣೆ (Timing Change) ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗದ ಕೆಲವು ರೈಲುಗಳು ಕೂಡ  ಈ ಪಟ್ಟಿಯಲ್ಲಿದೆ.

Shimoga Nanjappa Hospital

(Timing Change)

ಯಾವ್ಯಾವ ರೈಲುಗಳ ಸಮಯ ಬದಲಾಗಿದೆ?

ರೈಲು ಸಂಖ್ಯೆ 06513 : ತುಮಕೂರು – ಶಿವಮೊಗ್ಗ ಟೌನ್ ಡೆಮು ಎಕ್ಸ್ ಪ್ರೆಸ್ : ಈವರೆಗೂ ಗುಬ್ಬಿ ನಿಲ್ದಾಣಕ್ಕೆ ಬೆಳಗ್ಗೆ 8.26ಕ್ಕೆ ತಲುಪಿ 8.27ಕ್ಕೆ ಹೊರಡುತ್ತಿತ್ತು. ಇನ್ಮುಂದೆ 8.24ಕ್ಕೆ ತಲುಪಲಿದೆ. 8.25ಕ್ಕೆ ಹೊರಡಲಿದೆ. (2023ರ ಜನವರಿ 2ರಿಂದ ಹೊಸ ಸಮಯ ಜಾರಿಯಾಗಲಿದೆ)

ರೈಲು ಸಂಖ್ಯೆ 06514 : ಶಿವಮೊಗ್ಗ ಟೌನ್ – ತುಮಕೂರು ಡೆಮು ಎಕ್ಸ್ ಪ್ರೆಸ್ : ಈವರೆಗೂ ಗುಬ್ಬಿ ನಿಲ್ದಾಣಕ್ಕೆ ಸಂಜೆ 4.50ಕ್ಕೆ ತಲುಪುತ್ತಿತ್ತು 4.51ಕ್ಕೆ ಹೊರಡುತ್ತಿತ್ತು. ಇನ್ಮುಂದೆ ಸಂಜೆ 4.43ಕ್ಕೆ ತಲುಪಲಿದ್ದು, 4.44ಕ್ಕೆ ನಿಲ್ದಾಣದಿಂದ ಹೊರಡಲಿದೆ. ತುಮಕೂರಿಗೆ ಸಂಜೆ 5.30ಕ್ಕೆ ತಲುಪುತ್ತಿತ್ತು. ಇನ್ಮುಂದೆ ಸಂಜೆ 5.25ಕ್ಕೆ ತಲುಪಲಿದೆ. (2023ರ ಜನವರಿ 2ರಿಂದ ಹೊಸ ಸಮಯ ಜಾರಿಯಾಗಲಿದೆ)

ರೈಲು ಸಂಖ್ಯೆ 16227 : ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ : ಮಂಡ್ಯ, ಬೆಂಗಳೂರು, ಯಶವಂತಪುರ ಮತ್ತು ತುಮಕೂರು ನಿಲ್ದಾಣಗಳಲ್ಲಿ ಸಮಯ ಬದಲಾವಣೆಯಾಗಿದೆ. (2023ರ ಜನವರಿ 1ರಿಂದ ಹೊಸ ಸಮಯ ಜಾರಿಯಾಗಲಿದೆ)

ನಿಲ್ದಾಣಹಿಂದಿನ ಸಮಯಬದಲಾದ ಸಮಯ
ಮಂಡ್ಯರಾತ್ರಿ 8.16ಕ್ಕೆ ತಲುಪುತ್ತಿತ್ತು

ರಾತ್ರಿ 8.18ಕ್ಕೆ ಹೊರಡುತ್ತಿತ್ತು

ರಾತ್ರಿ 8.17ಕ್ಕೆ ತಲುಪಲಿದೆ

ರಾತ್ರಿ 8.18ಕ್ಕೆ ಹೊರಡಲಿದೆ

ಬೆಂಗಳೂರುರಾತ್ರಿ 10.55ಕ್ಕೆ ತಲುಪುತ್ತಿತ್ತು

ರಾತ್ರಿ 11.15ಕ್ಕೆ ಹೊರಡುತ್ತಿತ್ತು

ರಾತ್ರಿ 10.30ಕ್ಕೆ ತಲುಪಲಿದೆ

ರಾತ್ರಿ 11ಕ್ಕೆ ಹೊರಡಲಿದೆ

ಯಶವಂತಪುರರಾತ್ರಿ 11.28ಕ್ಕೆ ತಲುಪುತ್ತಿತ್ತು

ರಾತ್ರಿ 11.30ಕ್ಕೆ ಹೊರಡುತ್ತಿತ್ತು

ರಾತ್ರಿ 11.23ಕ್ಕೆ ತಲುಪಲಿದೆ

ರಾತ್ರಿ 11.25ಕ್ಕೆ ಹೊರಡಲಿದೆ

ತುಮಕೂರುರಾತ್ರಿ 12.13ಕ್ಕೆ ತಲುಪುತ್ತಿತ್ತು

ರಾತ್ರಿ 12.15ಕ್ಕೆ ಹೊರಡುತ್ತಿತ್ತು

ರಾತ್ರಿ 12.18ಕ್ಕೆ ತಲುಪಲಿದೆ

ರಾತ್ರಿ 12.20ಕ್ಕೆ ಹೊರಡಲಿದೆ

ರೈಲು ಸಂಖ್ಯೆ 16568 : ಶಿವಮೊಗ್ಗ – ತುಮಕೂರು : ಈವರೆಗೂ ತುಮಕೂರು ನಿಲ್ದಾಣಕ್ಕೆ ಬೆಳಗ್ಗೆ 9.25ಕ್ಕೆ ತಲುಪುತ್ತಿತ್ತು. ಇನ್ಮುಂದೆ ಬೆಳಗ್ಗೆ 9.10ಕ್ಕೆ ತಲುಪಲಿದೆ. (2023ರ ಜನವರಿ 1ರಿಂದ ಹೊಸ ಸಮಯ ಜಾರಿಯಾಗಲಿದೆ)

ರೈಲು ಸಂಖ್ಯೆ 16581 : ಯಶವಂತಪುರ – ಶಿವಮೊಗ್ಗ ಟೌನ್ : ಈವರೆಗೂ ಯಶವಂತಪುರದಿಂದ ರಾತ್ರಿ 11.58ಕ್ಕೆ ಹೊರಡುತ್ತಿತ್ತು. ಇನ್ಮುಂದೆ 11.50ಕ್ಕೆ ಹೊರಡಲಿದೆ. ತುಮಕೂರಿಗೆ ರಾತ್ರಿ 12.55 ತಲುಪಿ, 12.57ಕ್ಕೆ ಹೊರಡುತ್ತಿತ್ತು. ಇನ್ಮುಂದೆ 12.38ಕ್ಕೆ ತಲುಪಿ, 12.40ಕ್ಕೆ ಹೊರಡಲಿದೆ. (2023ರ ಜನವರಿ 2ರಿಂದ ಹೊಸ ಸಮಯ ಜಾರಿಯಾಗಲಿದೆ)

ಇದನ್ನೂ ಓದಿ – ಶಿವಮೊಗ್ಗ – ಮೈಸೂರು ನಡುವೆ ಎಷ್ಟು ರೈಲುಗಳಿವೆ, ಎಲ್ಲೆಲ್ಲಿ ಸ್ಟಾಪ್ ಇದೆ, ಟೈಮಿಂಗ್ ಏನು?

ರೈಲು ಸಂಖ್ಯೆ 16582 : ಶಿವಮೊಗ್ಗ ಟೌನ್ – ಯಶವಂತಪುರ : ಈವರೆಗೂ ಯಶವಂತಪುರಕ್ಕೆ ಬೆಳಗ್ಗೆ 5.10ಕ್ಕೆ ತಲುಪುತ್ತಿತ್ತು. ಇನ್ಮುಂದೆ ಬೆಳಗ್ಗೆ 5 ಗಂಟೆಗೆ ತಲುಪಲಿದೆ. ತುಮಕೂರಿಗೆ ಬೆಳಗ್ಗೆ 3.38ಕ್ಕೆ ತಲುಪುತ್ತಿತ್ತು. ಇನ್ಮುಂದೆ 3.10ಕ್ಕೆ ತಲುಪಲಿದೆ. 3.12ಕ್ಕೆ ಹೊರಡಲಿದೆ. (2023ರ ಜನವರಿ 3ರಿಂದ ಹೊಸ ಸಮಯ ಜಾರಿಯಾಗಲಿದೆ)

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 28, 2022

Leave a Comment