ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |10 JANUARY 2023
ಸೊರಬ : ಮನೆಯೊಂದರ ಟೆರೇಸ್ ಮೇಲೆ ಒಣಗಿಸಲು ಹಾಕಿದ್ದ ಅಡಕೆ (adike theft) ಕಳ್ಳತನವಾಗಿದೆ. ಪಟ್ಟಣದ ರಾಜೀವ್ ನಗರದಲ್ಲಿ ಘಟನೆ ಸಂಭವಿಸಿದೆ.
ನಡಹಳ್ಳಿ ಗ್ರಾಮದ ರಾಜೀವ್ ಎಂಬುವವರು ತಮ್ಮ ತೋಟದಲ್ಲಿ ಬೆಳೆದ ಅಡಕೆಯನ್ನು (adike theft) ಬೇಯಿಸಿ, ರಾಜೀವ್ ನಗರದ ಮನೆಯ ಟೆರೇಸ್ ಮೇಲೆ ಒಣಗಿಸಿದ್ದರು. ಜ.4ರಂದು ಸಂಜೆ ಅಡಕೆಗೆ ಟಾರ್ಪಲ್ ಮುಚ್ಚಿದ್ದರು. ಮರುದಿನ ಬೆಳಗ್ಗೆ ಬಂದು ಟಾರ್ಪಲ್ ತೆಗೆದಾಗ ಅಡಕೆ ನಾಪತ್ತೆಯಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ಅಡಕೆ ಧಾರಣೆ | 9 ಜನವರಿ 2023 | ಚೇತರಿಕೆಯತ್ತ ರಾಶಿ ಅಡಕೆ ರೇಟ್
70 ಸಾವಿರ ರೂ. ಮೌಲ್ಯದ ಸುಮಾರು 1.60 ಕ್ವಿಂಟಾಲ್ ಅಡಕೆ ಕಳ್ಳತನವಾಗಿದೆ ಎಂದು ರಾಜೀವ್ ದೂರಿನಲ್ಲಿ ಆರೋಪಿಸಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.