ಶಿವಮೊಗ್ಗ ಲೈವ್
SHIVAMOGGA LIVE NEWS, 3 JANUARY 2024
ಸೊರಬ : ಮನೆಯವರು ತೋಟಕ್ಕೆ (Adike) ತೆರಳಿದ್ದ ಸಂದರ್ಭ ಬಾಗಿಲಿನ ಬೀಗ ಮುರಿದು ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿದೆ. ಸೊರಬ ತಾಲೂಕು ಅಂಬ್ಲಿಕೊಪ್ಪ ರಸ್ತೆಯ ಬೆನ್ನೂರು ಗ್ರಾಮದ ನಾಗರಾಜ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಶಿವಮೊಗ್ಗದಲ್ಲಿ ಅದ್ಧೂರಿ ಈದ್ ಮೆರವಣಿಗೆ, ಹೇಗಿತ್ತು? ಏನೆಲ್ಲ ಇತ್ತು?
ನಾಗರಾಜ ಅವರು ತಮ್ಮ ತೋಟದಲ್ಲಿ ಅಡಿಕೆ ಕೊಯ್ಲಿಗೆ ಮುಗಿಸಿ ಮನೆಗೆ ಮರಳಿದ್ದರು. ಆಗ ಮನೆಯ ಬಾಗಿಲು ತೆರದಿತ್ತು. ಒಳಗೆ ಹೋಗಿ ಪರಿಶೀಲಿಸಿದಾಗ ಬೀರು ಬೀಗ ಮುರಿದು ಕಳ್ಳತನ ಮಾಡಲಾಗಿತ್ತು. ಒಟ್ಟು 3.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮತ್ತು ನಗದು ಕಳುವಾಗಿದೆ ಎಂದು ಆರೋಪಿಸಲಾಗಿದೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ನೀರಿನ ಸಂಪರ್ಕ ಕಡಿತದ ವಾರ್ನಿಂಗ್, ಕಾರಣವೇನು?