ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 13 JANUARY 2023
SORABA : ತಾಲೂಕಿನ ಜಡೆ ಗ್ರಾಮದ ಶ್ರೀ ಸಿದ್ದ ವೃಷಭೇಂದ್ರ ಸಂಸ್ಥಾನ ಮಠದಲ್ಲಿ (mutt) ಹಾಡ ಹಗಲೆ ಕಾಣಿಕೆ ಹುಂಡಿ ಕಳ್ಳತನವಾಗಿದೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಠದ (mutt) ಒಳಗೆ ಶ್ರೀ ಕುಮಾರಪ್ರಭು ಸ್ವಾಮೀಜಿ ಗುದ್ದುಗೆ ಮುಂಭಾಗ ಇದ್ದ ಹುಂಡಿ ಕಳ್ಳತನವಾಗಿದೆ. ಜ.11ರಂದು ಬೆಳಗ್ಗೆ 10.30ಕ್ಕೆ ಮುಖ್ಯ ಅರ್ಚಕ ಗುರುಪಾದಯ್ಯ ಅವರು ಪೂಜೆ ಮುಗಿಸಿ ಮಠದಿಂದ ಮನೆಗೆ ಹೋಗಿದ್ದರು. ಮಧ್ಯಾಹ್ನ ಮಠಕ್ಕೆ ಹಿಂತಿರುಗಿದಾಗ ಗದ್ದುಗೆ ಮುಂದೆ ಇದ್ದ ಕಾಣಿಕೆ ಹುಂಡಿ ಕಳ್ಳತನವಾಗಿತ್ತು.
ಇದನ್ನೂ ಓದಿ – ಆನವೇರಿಯಿಂದ ಬಸ್ಸಲ್ಲಿ ಬಂದು ಶಿವಮೊಗ್ಗ ಗುರುಪುರದ ಬಳಿ ತನ್ನ ಬ್ಯಾಗ್ ಪರಿಶೀಲಿಸಿದ ವ್ಯಕ್ತಿಗೆ ಆಘಾತ
ಮಠದ ಆವರಣ ಮತ್ತು ಸುತ್ತುಮುತ್ತ ಹುಡುಕಾಡಿದರು ಹುಂಡಿ ಪತ್ತೆಯಾಗಿಲ್ಲ. ಹುಂಡಿಯಲ್ಲಿ ಅಂದಾಜು 30 ಸಾವಿರ ರೂ. ಕಾಣಿಕೆ ಇತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಆನವಟ್ಟಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು


CLICK HERE TO JOIN SHIVAMOGGA LIVE WHATSAPP GROUP



