ಶಿವಮೊಗ್ಗದ ಈ ಬ್ರ್ಯಾಂಡ್ ಭಾರಿ ಫೇಮಸ್, ವಿದೇಶಕ್ಕು ತಲುಪುತ್ತಿದೆ ಮಲೆನಾಡ ಟೇಸ್ಟ್, MN ಪಿಕಲ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | MADE IN SHIMOGA

SHIKARIPURA : ಆವತ್ತು ಉಪ್ಪಿನಕಾಯಿ ಮಾರಾಟಕ್ಕೆ ಹೋಗುತ್ತಿದ್ದ ವ್ಯಕ್ತಿಯನ್ನು ಕಂಡು ಗೇಲಿ MADE IN SHIMOGA1 jpgಮಾಡಿದವರು, ಆಡಿಕೊಂಡವರು, ತಿರಸ್ಕರಿಸಿದವರು ಒಬ್ಬಿಬ್ಬರಲ್ಲ. ಇವತ್ತು ಅದೆ ಉಪ್ಪಿನಕಾಯಿ ದೊಡ್ಡ ಉದ್ಯಮವಾಗಿದೆ. ಹೆಸರಾಂತ ಬ್ರಾಂಡ್ ಆಗಿ ಬೆಳೆದು ನಿಂತಿದೆ. ತಾಲೂಕು, ಜಿಲ್ಲೆ, ರಾಜ್ಯ, ದೇಶದ ಗಡಿ ದಾಟಿ, ಕೋಟ್ಯಂತರ ಜನರ ಬಾಯಲ್ಲಿ ನೀರೂರಿಸುತ್ತಿದೆ. ಈ ಉಪ್ಪಿನಕಾಯಿ (Pickles) ಬ್ರಾಂಡ್ ನಮ್ಮ ಜಿಲ್ಲೆಯದ್ದು ಎಂಬುದು ನಮ್ಮ ಹೆಮ್ಮೆ.

ಶಿರಾಳಕೊಪ್ಪದ ಎಂ.ಎನ್.ಪಿಕಲ್ಸ್ (Pickles) ಇವತ್ತು ದೇಶಾದ್ಯಂತ ಬ್ರಾಂಡ್ ಆಗಿದೆ. ರಾಜ್ಯದ ವಿವಿಧೆಡೆ ಶೋ ರೂಂಗಳನ್ನು ಹೊಂದಿದೆ. ದೊಡ್ಡ ದೊಡ್ಡ ಕಂಪನಿಯ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ಒಡ್ಡುತ್ತಿದೆ.

MN-Pickles-Shiralakoppa-made-in-Shivamogga

 ನಮ್ಮೂರಿನದ್ದೆ ಬ್ರಾಂಡ್ 

ಎಂ.ಎನ್.ಪಿಕಲ್ಸ್ ಮೂಲತಃ ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ಉತ್ಪನ್ನ. ಆರಂಭವಾಗಿದ್ದು 1982ರಲ್ಲಿ. ಮಾಸೂರು ನಾರಾಯಣಪ್ಪ ಅವರು ಇದರ ಸಂಸ್ಥಾಪಕರು. ಆರಂಭದಲ್ಲಿ ನಾರಾಯಣಪ್ಪ ಅವರು ಮನೆಯಲ್ಲೆ ಉಪ್ಪಿನಕಾಯಿ ತಯಾರಿಸಿ ನೆರಹೊರೆ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಆಗ ಅವರ ಕೆಲಸ ಕಂಡು ಶಹಬ್ಬಾಸ್ ಅಂದವರು ಇದ್ದರು. ಹಾಗೆಯೇ ಆಡಿಕೊಂಡು, ಗೇಲಿ ಮಾಡಿ, ತಿರಸ್ಕರಿಸಿದವರು ಇದ್ದರು. ಇವೆಲ್ಲವನ್ನ ಎದುರಿಸಿ ಎಂ.ಎನ್.ಪಿಕಲ್ಸ್ ಸ್ಥಾಪನೆ ಮಾಡಲಾಯಿತು.

ನಾಲ್ಕು ದಶಕದಲ್ಲಿ ಹೆಮ್ಮರ

40 ವರ್ಷದಲ್ಲಿ ಎಂ.ಎನ್.ಪಿಕಲ್ಸ್ ಹೆಮ್ಮರವಾಗಿ ಬೆಳೆದು ನಿಂತಿದೆ. ಹಲವು ವೆರೈಟಿ ಉಪ್ಪಿನಕಾಯಿಗಳನ್ನು ಉತ್ಪಾದಿಸಲಾಗುತ್ತಿದೆ. ಮಾವಿನ ಕಾಯಿ, ಲಿಂಬು, ಮಿಕ್ಸೆಡ್, ಎರಳೇ ಕಾಯಿ, ಹಾಟ್ ಅಂಡ್ ಸ್ವೀಟ್ ಲಿಂಬು, ಮಿಡಿ ಮಾವಿನ ಕಾಯಿ, ಅಪ್ಪೆ ಮಿಡಿ, ಮಾವಿನ ಶುಂಠಿ ಉಪ್ಪಿನಕಾಯಿಗಳು ಲಭ್ಯವಿದೆ. ಸಣ್ಣ ಬಾಟಲಿಯಿಂದ 5 ಕೆ.ಜಿ.ವರೆಗೆ ಉಪ್ಪಿನಕಾಯಿ ಸಿಗಲಿದೆ.

mn%20pickles5

‘ರಾಜ್ಯದಲ್ಲಿ ಉಪ್ಪಿನಕಾಯಿ ಉತ್ಪಾದನೆಗೆ ಒಂದೆರಡು ಕಂಪನಿಗಳಿವೆ. ಅದರಲ್ಲಿ ನಮ್ಮದು ಒಂದು. ಸ್ಥಳೀಯ ಟೇಸ್ಟ್ ಗೆ ತಕ್ಕ ಹಾಗೆ ಉತ್ಪಾದನೆ ಮಾಡಿದರೆ, ಮಾರುಕಟ್ಟೆಯಲ್ಲಿ ಕ್ಲಿಕ್ ಆಗಲಿದೆ. ನಮ್ಮದು ಮಲೆನಾಡಿನ ಟೇಸ್ಟ್. ಹಾಗಾಗಿ ಜನಕ್ಕೆ ಹತ್ತಿರವಾಗಿದೆ’ಎಂ.ಆರ್.ಸತೀಶ್, ಎಂ.ಎನ್.ಪಿಕಲ್ಸ್ ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್ನರ್

ಉಪ್ಪಿನಕಾಯಿ ಮಾತ್ರವಲ್ಲ, ಇನ್ನಷ್ಟು ವೆರೈಟಿ ಇದೆ

ಕಾಲಕ್ಕೆ ತಕ್ಕ ಹಾಗೆ ಹೊಸ ಆಲೋಚನೆ ಮತ್ತು ಯೋಜನೆಗಳು ರೂಪಿಸಬೇಕು ಅನ್ನುವುದು ಬಿಸ್ನೆಸ್ ಮಂತ್ರ. ಎಂ.ಎನ್.ಪಿಕಲ್ಸ್ ಸಂಸ್ಥೆಯು ಇದೆ ತಂತ್ರ ಅನುಸರಿಸುತ್ತಿದೆ. ಎಂ.ಎನ್.ಪಿಕಲ್ಸ್ ಸಂಸ್ಥೆ ಉಪ್ಪಿನಕಾಯಿಗೆ ಸೀಮಿತವಾಗದೆ ಇತರೆ ಆಹಾರ ಪದಾರ್ಥಗಳ ಉತ್ಪಾದನೆಯತ್ತಲು ಹೆಜ್ಜೆ ಹಾಕಿದೆ.

‘ಉಪ್ಪಿನಕಾಯಿ ಜೊತೆಗೆ ನಾವು ಮಸಾಲೆ ಪುಡಿ, ಕಷಾಯ ಪುಡಿ, ಪುಳಿಯೊಗರೆ ಗೊಜ್ಜು, ಪುಳಿಯೊಗರೆ ಪುಡಿ, ಮಜ್ಜಿಗೆ ಮೆಣಸು ಸೇರಿದಂತೆ ಹಲವು ಬಗೆಯ ಆಹಾರ ಪದಾರ್ಥಗಳನ್ನು ಸ್ಥಳೀಯವಾಗಿ ಉತ್ಪಾದನೆ ಮಾಡುತ್ತಿದ್ದೇವೆ’ ಅನ್ನುತ್ತಾರೆ ಎಂ.ಆರ್.ಸತೀಶ್.

mn%20pickles2

ಎಂ.ಎನ್.ಪಿಕಲ್ಸ್ ಸಂಸ್ಥೆಯು ಇವತ್ತು 72 ವಿವಿಧ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಚಟ್ನಿ ಪುಡಿ, ಮಸಾಲೆ ಪುಡಿ, ಉಪ್ಪಿನಕಾಯಿ, ಹಪ್ಪಳ, ಕಷಾಯ ಪುಡಿಗಳನ್ನು ಈ ಬ್ರಾಂಡ್ ನೇಮ್ ನಲ್ಲಿ ಹೊರ ತರಲಾಗುತ್ತಿದೆ. ಲೋಕಲ್ ಟೇಸ್ಟ್ ಮತ್ತು ಫ್ಲೇವರ್ ಇರುವುದರಿಂದ ಎಂ.ಎನ್.ಪಿಕಲ್ಸ್ ಬ್ರಾಂಡ್ ಆಹಾರ ಪದಾರ್ಥಕ್ಕೆ ರಾಜ್ಯಾದ್ಯಂತ ಉತ್ತಮ ರೆಸ್ಪಾನ್ಸ್ ಇದೆ.

mn%20pickles1

ಹೊರ ರಾಜ್ಯ, ದೇಶದವರು ರುಚಿ ಕಂಡಿದ್ದಾರೆ

ಎಂ.ಎನ್.ಪಿಕಲ್ಸ್ ಕರ್ನಾಟಕಕ್ಕಷ್ಟೆ ಸೀಮಿತವಲ್ಲ. ಹೊರ ರಾಜ್ಯದ ಜನರು ಇದರ ರುಚಿ ನೋಡಿದ್ದಾರೆ. ವಿದೇಶಗಳಿಗು ಎಂ.ಎನ್.ಪಿಕಲ್ಸ್ ತಲುಪಿದ್ದಿದೆ. 1999ರಲ್ಲಿ 3 ಕ್ವಿಂಟಾಲ್ ಮಾವಿನ ಮಿಡಿ ಅಮೆರಿಕ ದೇಶಕ್ಕೆ ರವಾನೆಯಾಗಿತ್ತು. ಅಮೆರಿಕ, ಕೆನಡಾ, ಬ್ರಿಟನ್, ಮಲೇಷಿಯಾ, ಸಿಂಗಪೂರ್, ಅರಬ್ ರಾಷ್ಟ್ರಗಳು, ನ್ಯೂಜಿಲ್ಯಾಂಡ್ ಸೇರಿ ಹಲವು ದೇಶಗಳಿಗು ಎಂ.ಎನ್.ಪಿಕಲ್ಸ್ ತಲುಪಿದೆ. ‘ಗುಣಮಟ್ಟ, ಶುಚಿ, ರುಚಿಗೆ ಆದ್ಯತೆ ನೀಡುವುದರಿಂದಲೆ ನಮ್ಮ ಉತ್ಪನ್ನಗಳನ್ನು ಜನರು ಪದೇ ಪದೆ ಖರೀದಿ ಮಾಡಲು ಕಾರಣ’ ಅನ್ನುತ್ತಾರೆ ಎಂ.ಆರ್.ಸತೀಶ್.

mn%20pickles3

ವಿವಿಧೆಡೆ ಶೋ ರೂಂ ಸ್ಥಾಪನೆ

ನಮ್ಮೂರಿನ ಈ ಬ್ರಾಂಡ್ ರಾಜ್ಯದ ಎಲ್ಲಾ ಅಂಗಡಿಗಳಿಗು ತಲುಪುತ್ತಿದೆ. ಅಷ್ಟೆ ಅಲ್ಲ, ಎಂ.ಎನ್.ಸಂಸ್ಥೆಯ ಉತ್ಪನ್ನಗಳು ಒಂದೇ ಕಡೆ ಸಿಗುವಂತಾಗಲಿ ಎಂದು ಶೋ ರೂಂಗಳನ್ನೆ ಸ್ಥಾಪಿಸಲಾಗಿದೆ. ಶಿರಾಳಕೊಪ್ಪದ ಎಸ್.ಎಸ್.ಎಸ್ ರೋಡ್, ಶಿವಮೊಗ್ಗ ಬಿ.ಹೆಚ್.ರಸ್ತೆಯ ಚರ್ಚ್ ಕಾಂಪ್ಲೆಕ್ಸ್, ಸವಳಂಗ ರಸ್ತೆಯ ವಿಜಯಾ ಕಾಂಪ್ಲೆಕ್ಸ್, ಸಾಗರದ ಜೆ.ಸಿ.ರೋಡ್ ಸಾಗರ ಹೊಟೇಲ್ ಕಾಂಪ್ಲೆಕ್ಸ್, ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಎಂ.ಎನ್.ಪಿಕಲ್ಸ್ ಶೋರೂಂಗಳಿವೆ.

mn%20pickles%201213

ಮನಸಿದ್ದರೆ ಮಾರ್ಗ

ಮಾಸೂರು ನಾರಾಯಣಪ್ಪ ಅವರ ದೃಢ ನಿರ್ಧಾರ, ಶ್ರಮ ವಹಿಸಿ ಸ್ಥಾಪಿಸಿದ ಸಂಸ್ಥೆಯನ್ನು ಅವರ ಕುಟುಂಬದವರು ಮುನ್ನಡೆಸುತ್ತಿದ್ದಾರೆ. ನಾರಾಯಣಪ್ಪ ಅವರ ಮೊಮ್ಮಕ್ಕಳು ಸಂಸ್ಥೆ ನಡೆಸುತ್ತಿದ್ದಾರೆ. ಈಗ ಎಂ.ಎನ್.ಪಿಕಲ್ಸ್ ದೊಡ್ಡ ಸಂಖ್ಯೆ ಗ್ರಾಹಕರನ್ನು ಹೊಂದಿದೆ. ಉದ್ಯಮ ಸ್ಥಾಪನೆಯ ಕನಸು ಹೊತ್ತವರಿಗೆ ನಮ್ಮೂರಿನ ಎಂ.ಎನ್.ಪಿಕಲ್ಸ್ ಮಾದರಿಯಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 16, 2023

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

Leave a Comment