ಪ್ರತಿಷ್ಠಿತ ಶಾಪಿಂಗ್ ಆ್ಯಪ್ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿಗೆ 5 ಲಕ್ಷ ರೂ. ಟೋಪಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 8 FEBRUARY 2023

SHIMOGA : ಪ್ರತಿಷ್ಠಿತ ಆನ್ ಲೈನ್ ಶಾಪಿಂಗ್ ಆ್ಯಪ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 5 ಲಕ್ಷ ರೂ. ವಂಚನೆ ಮಾಡಲಾಗಿದೆ.  ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಮೊಗ್ಗ ಜಿಲ್ಲೆಯ ಗ್ರಾಮವೊಂದರ ವ್ಯಕ್ತಿಯ ಮಗಳ ಹೆಸರಿಗೆ MEESHO ONLINE SHOPPING ಹೆಸರಿನಲ್ಲಿ ಪೋಸ್ಟ್ ಬಂದಿತ್ತು. 13.50 ಲಕ್ಷ ರೂ. ಬಹುಮಾನ ಬಂದಿದೆ ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿತ್ತು. ಅದರಲ್ಲಿದ್ದ ಮೂರು ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ ಬಹುಮಾನ ಪಡೆಯಬಹುದು ಎಂದು ಸೂಚಿಸಲಾಗಿತ್ತು.

Online-Fraud-In-Shimoga

1 ಪರ್ಸೆಂಟ್ ಹಣ ಕಟ್ಟಬೇಕು

ಬಹುಮಾನದ ಆಸೆಗೆ ವ್ಯಕ್ತಿಯು ಪೋಸ್ಟ್ ನಲ್ಲಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿದ್ದಾರೆ. ಮಾತನಾಡಿದ ವ್ಯಕ್ತಿಯೊಬ್ಬ ಬಹುಮಾನ ಬೇಕಿದ್ದರೆ, ಬಹುಮಾನದ ಮೊತ್ತದ ಶೇ.1ರಷ್ಟು ಹಣವನ್ನು ನೀವು ಪಾವತಿಸಬೇಕು ಎಂದು ಸೂಚಿಸಿದರು. ಇದನ್ನು ನಂಬಿದ ವ್ಯಕ್ತಿ, ತನ್ನ ಬ್ಯಾಂಕ್ ಖಾತೆ ಮತ್ತು ಮಗಳ ಬ್ಯಾಂಕ್ ಖಾತೆಯಿಂದ ಹಣ ಪಾವತಿಸಿದ್ದಾರೆ. ಹಲವು ಭಾರಿ ವಿವಿಧ ಕಾರಣಗಳನ್ನು ನೀಡಿ ಒಟ್ಟು 5,35,200 ರೂ. ಹಣವನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಕೆಲಸದ ಹೆಸರಲ್ಲಿ ಮಹಾ ಮೋಸ, ದಾಖಲಾಯಿತು ಮೊದಲ ಕೇಸ್

ಕೊನೆಗೆ ತಾವು ವಂಚನೆಗೊಳಗಾದದ್ದು ಶಿವಮೊಗ್ಗದ ವ್ಯಕ್ತಿಗೆ ಅರಿವಾಗಿದೆ. ಬಳಿಕ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವಂಚಕರಿಗೆ ನೂರು ದಾರಿ

MEESHO ಆನ್ ಲೈನ್ ಶಾಪಿಂಗ್ ಆ್ಯಪ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸಲಾಗಿದೆ. ಇದೆ ರೀತಿ ಹಲವು ಪ್ರತಿಷ್ಠಿತ ಸಂಸ್ಥೆಗಳು, ಆಪ್ ಗಳ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ಪೋಸ್ಟ್ ಮಾಡಿ ಬಹುಮಾನದ ಆಸೆ ಹುಟ್ಟಿಸುವುದು, ಮೊಬೈಲ್ ಗೆ ಲಿಂಕ್ ಕಳುಹಿಸಿ ವಿವಿಧ ರೀತಿಯಲ್ಲಿ ಹಣ ಕದಿಯುವುದು ಸಾಮಾನ್ಯವಾಗಿದೆ. ಜನರು ಇಂತಹ ಗುರುತು ಪರಿಚಯವಿಲ್ಲದವರಿಗೆ ಹಣ ವರ್ಗಾಯಿಸುವುದು, ಒಟಿಪಿ ಕೊಡುವುದು, ಅಪರಿಚಿತ ಲಿಂಕ್ ಕ್ಲಿಕ್ ಮಾಡುವುದು ಅಪಾಯವನ್ನು ಆಹ್ವಾನಿಸಿದಂತಾಗಲಿದೆ.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರಿನ ಕುರಿತು ಮಹತ್ವದ ಘೋಷಣೆ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment