ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 MARCH 2023
SHIMOGA : ಇನ್ನೊಂದು ವಾರದಲ್ಲಿ ಶಿವಮೊಗ್ಗದಿಂದ ವಿಮಾನಯಾನ (Flight Service) ಸೇವೆ ಆರಂಭವಾಗುವ ನಿರೀಕ್ಷೆಯಿದೆ. ಮೊದಲಿಗೆ ಶಿವಮೊಗ್ಗ – ಬೆಂಗಳೂರು ನಡುವೆ ನಿತ್ಯ ವಿಮಾನ ಹಾರಾಡಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಇಂಡಿಗೋ ವಿಮಾನಯಾನ ಕಂಪನಿಯೊಂದಿಗೆ ದೆಹಲಿಯಲ್ಲಿ ಮಾತುಕತೆ ನಡೆಯುತ್ತಿದೆ. ನೀತಿ ಸಂಹಿತೆ ಜಾರಿಗು ಮುನ್ನ ವಿಮಾನ ಹಾರಾಟ (Flight Service) ಆರಂಭವಾಗಬೇಕು ಎಂಬ ಒತ್ತಾಸೆ ಇತ್ತು. ಅದರಂತೆ ಇನ್ನೊಂದು ವಾರದೊಳಗೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಶುರುವಾಗುವ ಸಂಭವವಿದೆ ಎಂದು ತಿಳಿಸಿದರು.
ಪ್ರತಿ ಪ್ರಯಾಣಿಕನಿಗೆ 500 ರೂ. ಸಬ್ಸಿಡಿ
ಪ್ರಸ್ತುತ ಶಿವಮೊಗ್ಗ – ಬೆಂಗಳೂರು ನಡುವೆ ಪ್ರತಿದಿನ ವಿಮಾನ ಹಾರಾಟ ಆರಂಭವಾಗಲಿದೆ. ಮುಂದೆ ಸರ್ವೆ ನಡೆಸಿ, ಬೇರೆ ಪ್ರದೇಶಗಳಿಗೆ ವಿಮಾನಯಾನ ಪ್ರಾರಂಭಿಸುವ ನಿರೀಕ್ಷೆ ಇದೆ ಎಂದು ರಾಘವೇಂದ್ರ ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮತ್ತೆ ಬರುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ, ಕಾರಣವೇನು?
ಶಿವಮೊಗ್ಗ – ಬೆಂಗಳೂರು ನಡುವೆ ವಿಮಾನಯಾನ ಸೇವೆಗೆ ಪ್ರತಿ ಪ್ರಯಾಣಿಕನ ಟಿಕೆಟ್ ಗೆ 500 ರೂ. ಸಬ್ಸಿಡಿ ನೀಡಬೇಕು ಎಂಬ ಒತ್ತಾಯವಿದೆ. ಇದರಿಂದ ಪ್ರತಿದಿನ 73 ಸಾವಿರ ರೂ. ಹೊರೆಯಾಗಲಿದೆ. ವಾರ್ಷಿಕ ಅಂದಾಜು ಎರಡೂವರೆ ಕೋಟಿ ರೂ. ಹಣವನ್ನು ವಿಮಾನಯಾನ ಸಂಸ್ಥೆಗೆ ರಾಜ್ಯ ಸರ್ಕಾರ ನೀಡಬೇಕಾಗುತ್ತದೆ ಎಂದರು.
ಮೂರು ಹೈಟೆಕ್ ಅಗ್ನಿಶಾಮಕ ವಾಹನ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಕೆಲವು ಮಾರ್ಪಾಡುಗಳು, ಸೂಚನೆಗಳನ್ನು ನೀಡಿ, ಒಂದು ತಿಂಗಳು ಗಡುವು ನೀಡಿತ್ತು. ಆ ಸೂಚನೆಗಳನ್ನು ಪಾಲಿಸಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಾತ್ಕಾಲಿಕವಾಗಿ ಅಗ್ನಿಶಾಮಕ ವಾಹನಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ಡಿಜಿಸಿಎ ಸೂಚನೆ ಬಳಿಕ ಮೂರು ಅಗ್ನಿಶಾಮಕ ವಾಹನಗಳನ್ನು ಖರೀದಿಸಲಾಗಿದೆ. ಪ್ರತಿ ವಾಹನಕ್ಕೆ ಐದರಿಂದ ಆರು ಕೋಟಿ ರೂ. ಆಗಲಿದೆ. ದುಬೈನಿಂದ ಈ ವಾಹನಗಳನ್ನು ಖರೀದಸಲಾಗಿದೆ ಎಂದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422