ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 APRIL 2023
SHIMOGA : ಪಾರ್ಟ್ ಟೈಮ್ (Part Time Job Fraud) ಉದ್ಯೋಗದ ಹೆಸರಿನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ವಿಡಿಯೋ ನೋಡಿ ಅದಕ್ಕೆ ಲೈಕ್ ಕೊಟ್ಟು ಹಣ ಸಂಪಾದಿಸಬಹುದು ಎಂದು ನಂಬಿಸಿ ಶಿವಮೊಗ್ಗದ ಯುವಕನೊಬ್ಬನಿಗೆ ಎಂಟು ಲಕ್ಷ ರೂ. ವಂಚನೆ ಮಾಡಲಾಗಿದೆ.
ಶಿವಮೊಗ್ಗ ತಾಲೂಕಿನ ಗ್ರಾಮವೊಂದರ 29 ವರ್ಷದ ಯುವಕ (ಹೆಸರು ಗೌಪ್ಯ) ವಂಚನೆಗೊಳಗಾಗಿದ್ದಾನೆ. ಟಿಲಿಗ್ರಾಂ ಆಪ್‍ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿದ ಯುವಕ ಮೋಸ ಹೋಗಿದ್ದಾನೆ.
ಇದನ್ನೂ ಓದಿ – ಬ್ಯಾಂಕಿನಲ್ಲಿ ಹಣ ಬಿಡಿಸಲು ಚೆಕ್ ನೀಡಿದ ಶಿವಮೊಗ್ಗದ ನೌಕರನಿಗೆ ಕಾದಿತ್ತ ಶಾಕ್, SMS ತಂದ ಸಂಕಷ್ಟ
ಹೇಗಾಯ್ತು ವಂಚನೆ?
ಯುವಕನ ಟೆಲಿಗ್ರಾಂ ಖಾತೆಗೆ ಮೆಸೇಜ್ ಬಂದಿದ್ದು, ಅದರಲ್ಲಿ ಪಾರ್ಟ್ ಟೈಮ್ ಉದ್ಯೋಗದ (Part Time Job Fraud) ಕುರಿತು ಮಾಹಿತಿ ಒದಗಿಸಲಾಗಿತ್ತು. ಅಲ್ಲದೆ ಲಿಂಕ್‍ಗಳು ಕೂಡ ಬಂದಿದ್ದವು. ಲಿಂಕ್ ಕ್ಲಿಕ್ ಮಾಡಿದಾಗ ಯು ಟ್ಯೂಬ್ ವಿಡಿಯೋಗಗಳು ಬಂದವು. ವಿಡಿಯೋ ನೋಡಿ, ಲೈಕ್ ಮಾಡಿದರೆ ಪ್ರತಿ ವಿಡಿಯೋಗೆ 50 ರೂ. ಬರಲಿದೆ ಎಂದು ತಿಳಿಸಲಾಗಿತ್ತು. ಅದರಂತೆ ಮೂರು ವಿಡಿಯೋ ನೋಡಿ ಲೈಕ್ ಮಾಡಿದ್ದಕ್ಕೆ 150 ರೂ. ಯುವಕನ ಖಾತೆಗೆ ಬಂದಿತ್ತು.
ಇದೆ ರೀತಿ ಮೂರ್ನಾಲ್ಕು ಬಾರಿ ಯುವಕನ ಖಾತೆಗೆ ಹಣ ಬಂದಿತ್ತು. ಅದೆ ರೀತಿ, ಏ.14 ಮತ್ತು 15ರಂದು ಟೆಲಿಗ್ರಾಂನಲ್ಲಿ ಪುನಃ ಮೆಸೇಜ್ ಬಂದಿತ್ತು. ಹಣ ಹೂಡಿಕೆ ಮಾಡಿ ಟಾಸ್ಕ್ ಪೂರೈಸಬೇಕು. ಇದಕ್ಕೆ ಉತ್ತಮ ಕಮಿಷನ್ ಬರಲಿದೆ ಎಂದು ನಂಬಿಸಲಾಯಿತು. ಇದನ್ನು ನಂಬಿದ ಯುವಕ 8,85,400 ರೂ.ಗಳನ್ನು ಹಂತ ಹಂತವಾಗಿ ಕಳುಹಿಸಿದ್ದಾನೆ. ಕಮಿಷನ್ ಹಣ ಬಾರದಿದ್ದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಕೂಡಲೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಹಣ ಹೂಡಿಕೆ ಮಾಡುವಾಗ ಎಚ್ಚರ
ಪಾರ್ಟ್ ಟೈಮ್ ಉದ್ಯೋಗ, ಹೆಚ್ಚು ಸಂಪಾದನೆ ಆಮಿಷವೊಡ್ಡಿ ವಂಚಿಸುವ ಜಾಲ ಸಕ್ರಿಯವಾಗಿದೆ. ಮೆಸೇಜುಗಳ ಮೂಲಕೆವೇ ವಂಚನೆ ಮಾಡಲಾಗುತ್ತಿದೆ. ಗುರುತು, ಪರಿಚಯವಿಲ್ಲದೆ, ಆಧಾರ ರಹಿತವಾಗಿ ಹಣ ಹೂಡಿಕೆ ಮಾಡುವ ಮುನ್ನ ಎಚ್ಚರ ವಹಿಸಬೇಕಿದೆ. ಇಲ್ಲದಿದ್ದರೆ ಲಕ್ಷ ಲಕ್ಷ ರೂ. ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.
ಇದನ್ನೂ ಓದಿ – ಅಮೆರಿಕಾದಿಂದ ಬಂದ ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಶಿವಮೊಗ್ಗದ ಯುವಕನಿಗೆ ಕಾದಿತ್ತು ಶಾಕ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422