ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 26 APRIL 2023
SHIMOGA : ಬೀಗ ಹಾಕಿದ್ದ ಮನೆಯೊಂದರ ಮುಂದೆ ಅನುಮಾನಾಸ್ಪದವಾಗಿ (Suspect) ನಿಂತಿದ್ದ ವ್ಯಕ್ತಿಯೊಬ್ಬನನ್ನು ರಾತ್ರಿ ಗಸ್ತು ಪೊಲೀಸರು ವಿಚಾರಣೆ ಮಾಡಿ, ಬಂಧಿಸಿದ್ದಾರೆ. ಶಿವಮೊಗ್ಗದ ವಿದ್ಯಾನಗರದಲ್ಲಿ ಘಟನೆ ಸಂಭವಿಸಿದೆ.
ವಿದ್ಯಾನಗರದ 2ನೇ ಅಡ್ಡರಸ್ತೆಯಲ್ಲಿ ಕೋಟೆ ಠಾಣೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಮನೆಯೊಂದರ ಮುಂದೆ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ (Suspect) ನಿಂತಿದ್ದ. ಪೊಲೀಸರನ್ನು ಕಂಡ ಕೂಡಲೆ ಮರೆಯಾಗಲು ಯತ್ನಿಸಿದ್ದಾನೆ. ಪೊಲೀಸರು ಆತನನ್ನು ಹಿಡಿದು ವಿಚಾರಣೆ ಮಾಡಿದಾಗ ಸ್ಪಷ್ಟ ಉತ್ತರ ಹೇಳಿಲ್ಲ. ಒಂದೊಂದು ಸರ್ತಿ ಒಂದೊಂದು ಹೆಸರು, ಊರು ತಿಳಿಸಿದ್ದಾನೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ, ನಿವೃತ್ತ ಅರಣ್ಯಾಧಿಕಾರಿ, ಹಿಂದಿನ ತಹಶೀಲ್ದಾರ್ ಸಂಬಂಧಿ ಮನೆಯಲ್ಲಿ ಶೋಧ
ಹೆಚ್ಚಿನ ವಿಚಾರಣೆ ಮಾಡಿದಾಗ ತಾನು ಭದ್ರಾವತಿ ಹೊಸಮನೆಯ ಧರ್ಮರಾಜ್ ಎಂದು ತಿಳಿಸಿದ್ದಾನೆ. ಮನೆ ಕಳ್ಳತನ ಮಾಡುವ ಸಂಶಯವಿದ್ದಿದ್ದರಿಂದ ಆತನ ವಿರುದ್ದ ಪ್ರಕರಣ ದಾಖಲು ಮಾಡಿದ್ದಾರೆ.