ಹೊಳೆ ಬಸ್‌ ಸ್ಟಾಪ್‌, ಸಹ್ಯಾದ್ರಿ ಕಾಲೇಜು ಸುತ್ತಮುತ್ತ ಅಧಿಕಾರಿಗಳು, ಪೊಲೀಸರಿಂದ ದಾಳಿ, 19 ಕೇಸ್‌ ದಾಖಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 26 APRIL 2023

SHIMOGA : ಕೋಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಿವಿಧೆಡೆ ಪೊಲೀಸರು ಮತ್ತು ಅಧಿಕಾರಿಗಳು ದಾಳಿ (Cotpa Raid) ನಡೆಸಿ 19 ಪ್ರಕರಣಗಳನ್ನು ದಾಖಲಿಸಿ 2500 ರೂ. ದಂಡ ವಿಧಿಸಿದ್ದಾರೆ.

Cotpa-Act-Raid-in-Shimoga-Hole-bus-stop-and-near-sahyadri-college

ಹೊಳೆ ಬಸ್‌ ನಿಲ್ದಾಣ ಮತ್ತು ಸಹ್ಯಾದ್ರಿ ಕಾಲೆಜು ಸುತ್ತಮುತ್ತ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳು, ಗೂಡಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಕೋಟ್ಪಾ (Cotpa Raid) ಕಾಯ್ದೆ ಉಲ್ಲಂಘನೆ ಮಾಡಿದ್ದಕ್ಕೆ 19 ಪ್ರಕರಣ ದಾಖಲಿಸಿ 2500 ರೂ. ದಂಡ ಸಂಗ್ರಹ ಮಾಡಲಾಗಿದೆ.

ಇದನ್ನೂ ಓದಿ – ಪೊಲೀಸ್‌ ಕಂಡು ಮರೆಯಾಗಲು ಯತ್ನ, ವಿಚಾರಣೆ ವೇಳೆ ಕ್ಷಣಕ್ಕೊಂದು ಹೆಸರು ಹೇಳಿದ, ಕೇಸ್‌ ದಾಖಲು

ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಮಲ್ಲಪ್ಪ  ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಜಿಲ್ಲಾ ತಂಬಾಕು ನಿಯಂತ್ರಣ ಕೋಶ  ಹಾಗು ಪೊಲೀಸ್ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment