ಕಾಗೋಡು ಕುಟುಂಬದ ಸಂಸ್ಥೆಯ ಹಿಂಬಾಗಿಲಿನ ಬೀಗಿ ಮುರಿದ ಕಳ್ಳರು, ಸಾಕ್ಷಿ ನಾಶಕ್ಕೆ ಸಿಸಿಟಿವಿಯನ್ನೂ ಹೊತ್ತೊಯ್ದರು

SHIVAMOGGA LIVE NEWS | 16 MAY 2023

SAGARA : ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಕುಟುಂಬಕ್ಕೆ ಸೇರಿದ ಸಂಸ್ಥೆಯೊಂದರ ಕಟ್ಟಡದ ಹಿಂಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಕೃತ್ಯ ಎಸಗಿದವರು ಸುಳಿವು ಸಿಗಬಾರದು ಎಂದು ಸಿಸಿಟಿವಿ (CCTV) ಕ್ಯಾಮರಾ ಮತ್ತು ಡಿವಿಆರ್‌ಗಳನ್ನೂ ಕದ್ದೊಯ್ದಿದ್ದಾರೆ.

Theft-at-United-Company-owned-by-Kagodu-Thimmappa-family

ಸಾಗರದ ಮಾರುಕಟ್ಟೆ ರಸ್ತೆಯ ಸೊರಬ ಸರ್ಕಲ್‌ನಲ್ಲಿರುವ ಯುನೈಟೆಡ್‌ ಟ್ರೇಡಿಂಗ್‌ ಕಂಪನಿ ಕಟ್ಟಡದ ಹಿಂಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. 17 ಲಕ್ಷ ರೂ. ಮೌಲ್ಯದ ಸಿಗರೇಟ್‌ ಪೆಟ್ಟಿಗೆಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕಳ್ಳರು ಸಿಸಿಟಿವಿ (CCTV) ಕ್ಯಾಮರಾ ಮತ್ತು ಡಿವಿಆರ್‌ ಕೂಡ ಹೊತ್ತೊಯ್ದಿದ್ದಾರೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ವಿಚಾರ ತಿಳಿಯುತ್ತಿದ್ದಂತೆ ಸಾಗರ ನಗರ ಠಾಣೆಯ ಇನ್ಸ್‌ಪೆಕ್ಟರ್‌ ಸೀತಾರಾಮ್‌ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಶಿವಮೊಗ್ಗದಿಂದ ‍ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ತಪಾಸಣೆ ನಡೆಸಿದರು.

ಇದನ್ನೂ ಓದಿ – ಶಿವಮೊಗ್ಗದ ಪುರಾಣ ಪ್ರಸಿದ್ಧ ದೇವಸ್ಥಾನದಲ್ಲಿ ಹುಂಡಿ ಒಡೆದ ಕಳ್ಳರು, ರಥೋತ್ಸವ ನಡೆದ ರಾತ್ರಿಯೇ ಖದೀಮರ ಎಂಟ್ರಿ

Kalleshwara-Enterprises.webp

ಸಂಸ್ಥೆಯ ಮುಖ್ಯಸ್ಥೆ ಅನುರಾಧಾ ಕಾಗೋಡು ಅವರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment