ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 MAY 2023
SHIMOGA : ಮನೆ ಒಳಗಡೆ ಇಟ್ಟಿದ್ದ ವ್ಯಾನಿಟಿ ಬ್ಯಾಗ್ (Vanity Bag), ಚಿನ್ನಾಭರಣ, ನಗದು ಕಳ್ಳತನವಾಗಿದೆ. ಪಾರಿವಾಳ ಮಾರಾಟಕ್ಕೆ ಬಂದವರೆ ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಶಿವಮೊಗ್ಗದ ಕಾಂಗ್ರೆಸ್ ನಾಯಕಿಯೊಬ್ಬರು ದೂರು ನೀಡಿದ್ದಾರೆ.
ಕಾಂಗ್ರೆಸ್ ನಾಯಕಿ ಫಾತೀಮಾ ಬೇಗಂ ಅವರ ಬುದ್ದಾ ನಗರದ ಮನೆಯಲ್ಲಿ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದೆ. ಚುನಾವಣೆ ಹಿನ್ನೆಲೆ ಫಾತೀಮಾ ಬೇಗಂ ಅವರು ಪ್ರಚಾರ ಕಾರ್ಯದಲ್ಲಿ ತೊಡಿಗಿಸಿಕೊಂಡಿದ್ದರು. ಏ.29ರಂದು ಪ್ರಚಾರ ಮುಗಿಸಿ ಮನೆಗೆ ಬಂದಾಗ, ಮೂವರು ಯವಕರು ಮನೆ ಬಳಿ ಬಂದು ಪಾರಿವಾಳ ಬೇಕಾ ಎಂದು ವಿಚಾರಿಸಿದ್ದಾರೆ. ಬೇಡ ಎಂದು ಫಾತೀಮಾ ಬೇಗಂ ತಿಳಿಸಿ, ಶೌಚಾಲಯಕ್ಕೆ ಹೋಗಿ ಬಂದಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಮೂವರು ಶಾಸಕರ ಪೈಕಿ ಯಾರಾಗ್ತಾರೆ ಮಿನಿಸ್ಟರ್?
ಮನೆ ಒಳಗೆ ಇಟ್ಟಿದ್ದ ವ್ಯಾನಿಟಿ ಬ್ಯಾನ್ (Vanity Bag) ಕಾಣೆಯಾಗಿತ್ತು. ಪಾರಿವಾಳ ಮಾರಾಟಕ್ಕೆ ಬಂದಿದ್ದ ಯುವಕರು ನಾಪತ್ತೆಯಾಗಿದ್ದರು. ಫಾತಿಮಾ ಬೇಗಂ ಅವರು ವ್ಯಾನಿಟಿ ಬ್ಯಾಗಿನಲ್ಲಿ ಓಲೆ, ಉಂಗುರ, ಮಾಂಗಲ್ಯ ಸರ, 500 ರೂ. ನಗದು ಇಟ್ಟಿದ್ದರು. ಒಟ್ಟು 1 ಲಕ್ಷ ರು. ಮೌಲ್ಯದ ಚಿನ್ನಾಭರಣ, ನಗದು ಇತ್ತು. ಪಾರಿವಾಳ ಮಾರಾಟ ಮಾಡಲು ಬಂದವರೆ ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422