ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 28 MAY 2023
SHIKARIPURA : ಜನರ ಆಶೀರ್ವಾದದಿಂದ 71 ಸಾವಿರ ಮತಗಳನ್ನು ಪಡೆದಿದ್ದೇನೆ. ಸೋಲು – ಗೆಲುವು ಮುಖ್ಯವಲ್ಲ. ನಾನು ಸದಾ ನಿಮ್ಮೆಲ್ಲರ ಜೊತೆಗೆ ಇರುತ್ತೇನೆ ಎಂದು ಶಿಕಾರಿಪುರ ಕ್ಷೇತ್ರದ ಪರಾಜಿತ ಪಕ್ಷೇತರ (Independent) ಅಭ್ಯರ್ಥಿ ನಾಗರಾಜ ಗೌಡ ಘೋಷಿಸಿದರು.

ಸ್ವಾಭಿಮಾನಿ ಬಳಗದ ವತಿಯಿಂದ ತರಳಬಾಳು ಭವನದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ನಾಗರಾಜ ಗೌಡ, ಸದಾ ಜನರೊಂದಿಗೆ ಇದ್ದು ನೋವು, ನಲಿವುಗಳಿಗೆ ಸ್ಪಂದಿಸುತ್ತೇನೆ. ಮುಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಲೋಕಸಭೆ ಚುನಾವಣೆಗಳಿವೆ. ಜನರು ನಮ್ಮ ಕೈ ಹಿಡಿಯಲಿದ್ದಾರೆ ಎಂದು ನಂಬಿದ್ದೇನೆ ಎಂದರು.
ನೂತನ ಶಾಸಕರು ಬಿಜೆಪಿಗೆ ಸೀಮಿತರಲ್ಲ. ಅವರು ಕ್ಷೇತ್ರದ ಎಲ್ಲ ಜನರಿಗೆ ಶಾಸಕರು. ಎಲ್ಲರನ್ನು ಸಮಾನವಾಗಿ ಕಾಣಬೇಕು. ಲೋಕಸಭೆ ಸದಸ್ಯರು ಕೂಡ ಎಲ್ಲಾ ಯೋಜನೆಗಳನ್ನು ಎಲ್ಲರಿಗು ತಲುಪಿಸಬೇಕು. ನಮ್ಮ ಕಾರ್ಯಕರ್ತರಿಗೆ ಸಣ್ಣ ತೊಂದರೆಯಾದರು ನಾನು ಮುಂದೆ ನಿಲ್ಲುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ – ಸಚಿವ ಸಂಪುಟದಲ್ಲಿ ಶಿವಮೊಗ್ಗಕ್ಕೆ ಸಿಕ್ತು ಪ್ರಾತಿನಿಧ್ಯ, ಮಧು ಬಂಗಾರಪ್ಪಗೆ ಯಾವ ಖಾತೆ ಸಿಗಲಿದೆ?
ಸ್ವಾಭಿಮಾನಿ ಬಳಗದಿಂದ ನಾಗರಾಜ ಗೌಡ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಶಿವರಾಮ್, ರಾಜಣ್ಣ, ರವಿ, ಉಮೇಶ್ ಮಾರವಳ್ಳಿ, ರಾಘವೇಂದ್ರ ನಾಯ್ಕ್, ಶಿವು ಹುಲ್ಮಾರ್, ಗಂಗಾನಾಯ್ಕ್ ಸೇರಿದಂತೆ ಹಲವರು ಇದ್ದರು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
LATEST NEWS
- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು















