ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 1 JUNE 2023
SHIMOGA : ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಪ್ ರಿಕ್ವೆಸ್ಟ್ (Facebook Friend) ಕಳುಹಿಸಿದ್ದ ವ್ಯಕ್ತಿಯೊಬ್ಬ ಮಹಿಳೆಗೆ 16 ಲಕ್ಷ ರೂ. ವಂಚನೆ ಮಾಡಿದ್ದಾನೆ. ಉಡುಗೊರೆ ಕಳುಹಿಸುವ ನೆಪದಲ್ಲಿ ಹಣ ವಂಚನೆ ಮಾಡಿರುವ ಮತ್ತೊಂದು ಪ್ರಕರಣ ಇದಾಗಿದೆ.
ಹೊಸನಗರ ತಾಲೂಕಿನ ನರ್ಸ್ ಒಬ್ಬರಿಗೆ MARK DEEP ಎಂಬಾತ ಫೇಸ್‌ಬುಕ್‌ನಲ್ಲಿ (Facebook Friend) ಪರಿಚಯವಾಗಿದ್ದ. ಮೇ ತಿಂಗಳ ಮೊದಲ ವಾರದಲ್ಲಿ ಆತ ನರ್ಸ್‌ಗೆ ಉಡುಗೊರೆ ಮತ್ತು ಡಾಲರ್ ಕಳುಹಿಸುವುದಾಗಿ ತಿಳಿಸಿ ವಿಳಾಸ ಪಡೆದುಕೊಂಡಿದ್ದ. ನಂತರ ಉಡುಗೊರೆ ಕೊರಿಯರ್ ಮಾಡಿರುವ ರಿಸಿಪ್ಟ್ ಅನ್ನು ವಾಟ್ಸಪ್ ಮೂಲಕ ಕಳುಹಿಸಿ ನರ್ಸ್ ಅನ್ನು ನಂಬಿಸಿದ್ದ.
ಇದನ್ನೂ ಓದಿ – ಶಿವಮೊಗ್ಗದ ಮಹಿಳೆಗೆ ಇಂಗ್ಲೆಂಡ್‌ನಿಂದ ಫ್ರೆಂಡ್ ರಿಕ್ವೆಸ್ಟ್, ಏರ್‌ಪೋರ್ಟ್‌ನಿಂದ ಫೋನ್, ಕೊನೆಗೆ ಕಾದಿತ್ತು ಶಾಕ್
ಮೇ 8 ರಿಂದ ಮೇ 27ರವರೆಗೆ ಬೇರೆ ಬೇರೆ ಮೊಬೈಲ್ ನಂಬರ್‌ಗಳಿಂದ ನರ್ಸ್‌ಗೆ ಕರೆ ಬಂದಿದೆ. ಡಾಲರ್ ಸೀಜ್ ಆಗಿದೆ, ಡಾಲರ್ ಇಂಡಿಯನ್ ಕರೆನ್ಸಿಗೆ ಎಕ್ಸ್‌ಚೇಂಜ್ ಆಗಬೇಕು, ಟ್ಯಾಕ್ಸ್ ಪಾವತಿಸಬೇಕು, ಪಾರ್ಸಲ್ ಡಿಲೇ, ಓನರ್ ಶಿಪ್ ಸರ್ಟಿಫಿಕೇಟ್ ಸೇರಿದಂತೆ ನಾನಾ ಶುಲ್ಕ ಪಾವತಿಸುವಂತೆ ಕಾರಣ ನೀಡಲಾಗಿದೆ. ಒಂದೊಂದು ಕಾರಣ ಹೇಳಿದಾಗಲು ನರ್ಸ್ ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದಾರೆ. ಒಟ್ಟು 16.66 ಲಕ್ಷ ರೂ. ಹಣವನ್ನು ನರ್ಸ್ ಪಾವತಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇಷ್ಟಾದರು ಪಾರ್ಸಲ್ ಬಾರದ ಹಿನ್ನೆಲೆ ಅನುಮಾನಗೊಂಡ ನರ್ಸ್ ಶಿವಮೊಗ್ಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422