ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 2 JUNE 2023
SHIMOGA : ಟೆಲಿಗ್ರಾಂನಲ್ಲಿ ಬಂದ ಪಾರ್ಟ್ ಟೈಮ್ ಜಾಬ್ (Part Time job) ಮಾಹಿತಿಯ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬ ಲಕ್ಷ ಲಕ್ಷ ರೂ. ಹಣ ಕಳದುಕೊಂಡಿದ್ದಾರೆ. ಹಣ ಹೂಡಿಕೆ ಮಾಡಿ, ಪ್ರಾಡೆಕ್ಟ್ ಪ್ರಮೋಷನ್ ಮಾಡಿ ಹಣ ಸಂಪಾದಿಸಬಹುದು ಎಂಬ ಆಮಿಷವೊಡ್ಡಿ, ವಂಚಿಸಲಾಗಿದೆ.
ಇದನ್ನೂ ಓದಿ – ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವಾಗ ಮೊಬೈಲ್ ಮಾಯ, ಸ್ವಲ್ಪ ಹೊತ್ತಿನಲ್ಲೇ ಕಾದಿತ್ತು ಮತ್ತೊಂದು ಶಾಕ್
ಟೆಲಿಗ್ರಾಂ ಆ್ಯಪ್‌ನಲ್ಲಿ ಶಿಕಾರಿಪುರದ ವ್ಯಕ್ತಿಯೊಬ್ಬನಿಗೆ ಪಾರ್ಟ್ ಟೈಮ್ ಉದ್ಯೋಗದ (Part Time job) ಲಿಂಕ್ ಬಂದಿತ್ತು. ಇದನ್ನು ಕ್ಲಿಕ್ ಮಾಡಿದಾಗ ಉತ್ಪನ್ನಗಳ ಪ್ರಮೋಷನ್ ಮಾಡಬೇಕು ಎಂದು ಸೂಚಿಸಲಾಗಿತ್ತು. ಮೊದಲಿಗೆ 200 ರೂ. ಡೆಪಾಸಿಟ್ ಮಾಡುವಂತೆ ತಿಳಿಸಲಾಗಿತ್ತು. ಟಾಸ್ಕ್ ಪೂರೈಸುತ್ತಿದ್ದಂತೆ ಶಿಕಾರಿಪುರದ ವ್ಯಕ್ತಿಯ ಬ್ಯಾಂಕ್ ಖಾತೆಗೆ 324 ರೂ. ಹಣ ಬಂದಿತ್ತು. ನಂತರ 500 ರೂ. ಹೂಡಿಕೆ ಮಾಡಿದ್ದಕ್ಕೆ 546 ರೂ. ಮರಳಿ ಬಂದಿತ್ತು.
ಇದನ್ನೂ ಓದಿ – ಶಿವಮೊಗ್ಗದ ಮಹಿಳೆಗೆ ಇಂಗ್ಲೆಂಡ್‌ನಿಂದ ಫ್ರೆಂಡ್ ರಿಕ್ವೆಸ್ಟ್, ಏರ್‌ಪೋರ್ಟ್‌ನಿಂದ ಫೋನ್, ಕೊನೆಗೆ ಕಾದಿತ್ತು ಶಾಕ್
ಮೇ 28ರಂದು ಟೆಲಿಗ್ರಾಂನಲ್ಲಿ ಮತ್ತೊಂದು ಲಿಂಕ್ ಬಂದಿತ್ತು. ಟಾಸ್ಕ್ ಪೂರೈಸುವಂತೆ ಸೂಚಿಸಲಾಗಿತ್ತು. ವಿವಿಧ ಹಂತದಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದರಿಂದ ಶಿಕಾರಿಪುರದ ಯುವಕ ತನ್ನ ಬ್ಯಾಂಕ್ ಖಾತೆಯಿಂದ 2.88 ಲಕ್ಷ ರೂ., ಅಣ್ಣನ ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ., ಹೆಂಡತಿಯ ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ. ಹೂಡಿಕೆ ಮಾಡಿದ್ದಾನೆ. ಹಣ ಹಿಂತಿರುಗಿ ಬಾರದಿದ್ದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422