BREAKING | ಆಗುಂಬೆ ಘಾಟಿಯಲ್ಲಿ ಕಂದಕಕ್ಕೆ ಬಿದ್ದ ವ್ಯಕ್ತಿ, ಪ್ರಾಣದ ಹಂಗು ತೊರೆದು ರಕ್ಷಿಸಿದ ಯುವಕರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 16 JULY 2023

THIRTHAHALLI : ಆಗುಂಬೆ ಘಾಟಿಯಲ್ಲಿ (Agumbe Ghat) ಸುಮಾರು 20 ಅಡಿ ಕಂದಕಕ್ಕೆ ಬಿದ್ದ ವ್ಯಕ್ತಿಯೊಬ್ಬರನ್ನು ಆಗುಂಬೆಯ ಯುವಕರು ರಕ್ಷಣೆ ಮಾಡಿದ್ದಾರೆ. ಗಂಭೀರ ಗಾಯಗೊಂಡಿರುವ ಆತನನ್ನು ಚಿಕಿತ್ಸೆಗೆಂದು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಹೇಗಾಯ್ತು ಘಟನೆ?

ಶಿವಮೊಗ್ಗದ ಮೊಹಮ್ಮದ್‌ ಬಾಷಾ ಎಂಬುವವರು ಟೋಯಿಂಗ್‌ ವಾಹನದಲ್ಲಿ ಟ್ರ್ಯಾಕ್ಟರನ್ನು ಟೋಯಿಂಗ್‌ ಮಾಡಿಕೊಂಡು ಬರುತ್ತಿದ್ದರು. 7ನೇ ತಿರುವಿನಲ್ಲಿ ಟೋಯಿಂಗ್‌ ವಾಹನ ಘಾಟಿ ಹತ್ತಲಾಗದೆ ನಿಂತಿದೆ. ವಾಹನದಿಂದ ಕೆಳಗಿಳಿದ ಮೊಹಮ್ಮದ್‌ ಬಾಷಾ, ಚಾಲಕನಿಗೆ ನಿರ್ದೇಶನ ನೀಡುತ್ತಿದ್ದರು. ಈ ವೇಳೆ ವಾಹನ ದಿಢೀರ್‌ ಹಿಂದಕ್ಕೆ ಬಂದಿದ್ದು ಮೊಹಮ್ಮದ್‌ ಬಾಷಾ ತಪ್ಪಿಸಿಕೊಳ್ಳುವ ಭರದಲ್ಲಿ ಘಾಟಿಯಿಂದ (Agumbe Ghat) ಕೆಳಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

Person-Rescued-at-agumbe-ghat.

ರಕ್ಷಣೆಗೆ ಧಾವಿಸಿದ ಆಗುಂಬೆ ಯುವಕರು

ಅದೇ ಮಾರ್ಗವಾಗಿ ಆಗುಂಬೆಗೆ ತೆರಳುತ್ತಿದ್ದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಮೊಹಮ್ಮದ್‌ ಬಾಷಾ ಅವರ ರಕ್ಷಣೆಗೆ ಧಾವಸಿದ್ದಾರೆ. ಪ್ರವಾಸಿಗರ ವಾಹನಗಳಲ್ಲಿದ್ದ ಬೆಡ್‍ಶೀಟ್‌, ಹಗ್ಗವಾಗಿ ಬಳಸಿ ಕಂದಕ್ಕೆ ಇಳಿದು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮೊಹಮ್ಮದ್‌ ಬಾಷಾ ಅವರನ್ನು ರಕ್ಷಿಸಿ ಮೇಲತ್ತಿದ್ದಾರೆ. ಅವರಿಗೆ ಸೊಂಟ ಮತ್ತು ತಲೆಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.

ಇಲ್ಲಿದೆ ರಕ್ಷಣಾ ಕಾರ್ಯಾಚರಣೆಯ ವಿಡಿಯೋ

ಆಪದ್ಭಾಂದವರಾದ ಸ್ಥಳೀಯ ಯುವಕರು

ನಾವು ಅದೇ ಮಾರ್ಗದಲ್ಲಿ ಬರುತ್ತಿದ್ದಾಗ ಜನ ಸೇರಿದ್ದರು. ಎಲ್ಲರು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಿದ್ದರು. ಕೂಡಲೆ ನಾವು ಕಾರ್ಯಪ್ರವೃತ್ತರಾಗಿ ರಕ್ಷಣೆಗೆ ಧಾವಿಸಿದೆವು. ಎಲ್ಲರು ಒಗ್ಗೂಡಿ ಅವರನ್ನು ರಕ್ಷಿಸಿದ್ದೇವೆ. ಆಂಬುಲೆನ್ಸ್‌ ಮೂಲಕ ಅವರನ್ನು ಆಸ್ಪತ್ರೆ ಕಳುಹಿಸಲಾಗಿದೆ.ನಿತ್ಯಾನಂದ ಆಗುಂಬೆ, ಸ್ಥಳೀಯರು

ನಿತ್ಯಾನಂದ ಆಗುಂಬೆ ಅವರ ನೇತೃತ್ವದಲ್ಲಿ ಸ್ಥಳೀಯರಾದ ಸಚಿನ್‌, ಅಶ್ವಥ್‌, ಕಿರಣ್‌, ಅಭಿ, ಶ್ರೀಕಾಂತ್‌, ಅಣ್ಣು ಪೂಜಾರಿ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆಗುಂಬೆ ಯುವಕರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ – ಹೈವೇಯಲ್ಲಿ ಅಪಘಾತ, ಕಾರಿನ ಹಿಂಬದಿ ಸೀಟ್‌ನಲ್ಲಿದ್ದ ಡ್ರಮ್‌ ಕಂಡು ಜನಕ್ಕೆ ಶಾಕ್‌ – ಮತ್ತಷ್ಟು ಸುದ್ದಿ ಇಲ್ಲಿದೆ

ಅತ್ಯಂತ ಡೇಂಜರಸ್‌ ತಿರುವು

ಆಗುಂಬೆ ಘಾಟಿಯ 7ನೇ ತಿರುವು ಅತ್ಯಂತ ಅಪಾಯಕಾರಿ ತಿರುವು. ಶಿವಮೊಗ್ಗ ಜಿಲ್ಲೆ ವ್ಯಾಪ್ತಿಗೆ ಸೇರುವ ಈ ತಿರುವಿನಲ್ಲಿ ಅಪಘಾತಗಳು ಸಾಮಾನ್ಯ. ಇಲ್ಲಿ ಕಂದಕಕ್ಕೆ ಬಿದ್ದು ಹಲವರು ಸಾವನ್ನಪ್ಪಿದ್ದಾರೆ. ಆಗುಂಬೆ ಭಾಗದಲ್ಲಿ ಮಳೆಯಾಗುತ್ತಿದ್ದು ಚಾಲಕರು, ಪ್ರವಾಸಿಗರು ಸ್ವಲ್ಪ ಯಾಮಾರಿದರು ಅಪಘಾತ ನಿಶ್ಚಿತ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 16, 2023

ATNC, ಕಮಲಾ ನೆಹರು ಕಾಲೇಜು ವಿದ್ಯಾರ್ಥಿಗಳಿಂದ ವಿಭಿನ್ನ ಮನವಿ, ಏನಿದು?

ATNC, ಕಮಲಾ ನೆಹರು ಕಾಲೇಜು ವಿದ್ಯಾರ್ಥಿಗಳಿಂದ ವಿಭಿನ್ನ ಮನವಿ, ಏನಿದು?

ಶಿವಮೊಗ್ಗದಲ್ಲಿ ಬೆಳಗಿನ ಜಾವ ಹಿಂಬದಿಯಿಂದ ಬಂದು ವೃದ್ಧೆಯ ಕೈ ಹಿಡಿದ ಯುವಕ, ಆಗಿದ್ದೇನು?

ಶಿವಮೊಗ್ಗದಲ್ಲಿ ಬೆಳಗಿನ ಜಾವ ಹಿಂಬದಿಯಿಂದ ಬಂದು ವೃದ್ಧೆಯ ಕೈ ಹಿಡಿದ ಯುವಕ, ಆಗಿದ್ದೇನು?

ಮೈದೊಳಲಿನಲ್ಲಿ ವೈಭವದ ಬ್ರಹ್ಮ ರಥೋತ್ಸವ, ಏನೇನೆಲ್ಲ ಪೂಜೆ ಆಯ್ತು? ಹೇಗಿತ್ತು ಜಾತ್ರೆ ಸಂಭ್ರಮ?

ಮೈದೊಳಲಿನಲ್ಲಿ ವೈಭವದ ಬ್ರಹ್ಮ ರಥೋತ್ಸವ, ಏನೇನೆಲ್ಲ ಪೂಜೆ ಆಯ್ತು? ಹೇಗಿತ್ತು ಜಾತ್ರೆ ಸಂಭ್ರಮ?

ಶಿವಮೊಗ್ಗದ ಕೋಟೆ ದೇವಸ್ಥಾನದಲ್ಲಿ ಸೋನಿಯಾ ಗಾಂಧಿಗಾಗಿ ವಿಶೇಷ ಪೂಜೆ

ಶಿವಮೊಗ್ಗದ ಕೋಟೆ ದೇವಸ್ಥಾನದಲ್ಲಿ ಸೋನಿಯಾ ಗಾಂಧಿಗಾಗಿ ವಿಶೇಷ ಪೂಜೆ

ಹೊಳೆಹೊನ್ನೂರಿನ ಚನ್ನಗಿರಿ ರಸ್ತೆಯಲ್ಲಿ ಅಪಘಾತ, ಆಸ್ಪತ್ರೆಗೆ ಸಾಗಿಸುವಾಗ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ಹೊಳೆಹೊನ್ನೂರಿನ ಚನ್ನಗಿರಿ ರಸ್ತೆಯಲ್ಲಿ ಅಪಘಾತ, ಆಸ್ಪತ್ರೆಗೆ ಸಾಗಿಸುವಾಗ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸಿಬ್ಬಂದಿಯನ್ನು ಅಡ್ಡಗಟ್ಟಿ ದೊಣ್ಣೆಯಿಂದ ದಾಳಿ

ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸಿಬ್ಬಂದಿಯನ್ನು ಅಡ್ಡಗಟ್ಟಿ ದೊಣ್ಣೆಯಿಂದ ದಾಳಿ

ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್‌ಗೆ ಕಾದಿತ್ತು ಶಾಕ್‌, ಆಗಿದ್ದೇನು?

ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್‌ಗೆ ಕಾದಿತ್ತು ಶಾಕ್‌, ಆಗಿದ್ದೇನು?

ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್‌ ರಚನೆ, ಯಾರಿಗೆ ಯಾವ ಜವಾಬ್ದಾರಿ?

ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್‌ ರಚನೆ, ಯಾರಿಗೆ ಯಾವ ಜವಾಬ್ದಾರಿ?

ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

Leave a Comment