SHIVAMOGGA LIVE | 16 JULY 2023
ಅಪಘಾತಕ್ಕೀಡಾದ ಕಾರಿನ ಹಿಂಬದಿ ಸೀಟಿನಲ್ಲಿ ಡ್ರಮ್ನಲ್ಲಿ ಮಾಂಸ
SAGARA : ಚಲಿಸುತ್ತಿದ್ದ ಎರಡು ಕಾರುಗಳಿಗೆ (CAR) ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಒಂದು ಕಾರಿನ ಹಿಂಬದಿ ಸೀಟ್ನಲ್ಲಿ ಡ್ರಮ್ನಲ್ಲಿ ಮಾಂಸ ಪತ್ತೆಯಾಗಿದ್ದು, ಗೋಮಾಂಸದ ಕುರಿತು ಶಂಕೆ ವ್ಯಕ್ತವಾಗಿದೆ. ಸಾಗರ ತಾಲೂಕು ಐಗಿನ ಬೈಲು ಬಳಿ ಘಟನೆ ಸಂಭವಿಸಿದೆ. ಖಾಸಗಿ ಬಸ್, ಇನ್ನೋವಾ ಮತ್ತು ಅಸೆಂಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಎರಡು ಕಾರುಗಳು ರಸ್ತೆ ಬದಿಗೆ ಹೋಗಿ ನಿಂತಿವೆ. ಈ ವೇಳೆ ಅಸೆಂಟ್ ಕಾರಿನಲ್ಲಿದ್ದವರು ಕಾರು (CAR) ಬಿಟ್ಟು ಪರಾರಿಯಾಗಿದ್ದಾರೆ. ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಅಸೆಂಟ್ ಕಾರಿನ ಹಿಂಬದಿಯಲ್ಲಿ ಡ್ರಮ್ನಲ್ಲಿ ಮಾಂಸ ಪತ್ತೆಯಾಗಿದೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆರಿಗೆ ಕಟ್ಟದ ವಾಹನಗಳು ವಶಕ್ಕೆ
SAGARA : ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತೆರಿಗೆ
ಇದನ್ನೂ ಓದಿ – ಶಿವಮೊಗ್ಗದ ಕಾಲೇಜುಗಳ ಬಳಿ ಬೈಕ್ ಸ್ಟಂಟ್ ಮಾಡಿದವರಿಗೆ ಪೊಲೀಸರಿಂದ ಶಾಕ್ – ಇಲ್ಲಿದೆ ಮತ್ತಷ್ಟು ಸುದ್ದಿಗಳು
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
SHIMOGA : ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತಲೂ ಹೆಚ್ಚಿ