ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 7 AUGUST 2023
ಬೀರುವಿನಲ್ಲಿ ಇಟ್ಟಿದ್ದ ಲಕ್ಷ ಲಕ್ಷ ರೂ. ಕಣ್ಮರೆ
BHADRAVATHI : ಬೋರ್ ವೆಲ್ ಲಾರಿ ಏಜೆಂಟ್ ಒಬ್ಬರು ತಮ್ಮ
ಮನೆಯ ಬೀರುವಿನಲ್ಲಿ ಇಟಿದ್ದ 3.15 ಲಕ್ಷ ರೂ. ಹಣ (Money) ಕಳ್ಳತನವಾಗಿದೆ. ಭದ್ರಾವತಿ ಹೊಸಮನೆ ಬಡಾವಣೆಯಲ್ಲಿರುವ ನೋಯಲ್ ಥಾಮ್ಸನ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಜು.30ರಂದು ಹಣವನ್ನು ಬೀರುವಿನಲ್ಲಿ ಇಟ್ಟು ಬೀಗ ಟೇಬಲ್ ಮೇಲೆ ಇರಿಸಿದ್ದರು. ಧರ್ಮಸ್ಥಳಕ್ಕೆ ತೆರಳಿದ್ದ ನೋಯಲ್ ಥಾಮ್ಸನ್ ಆ.1ರಂದ ರಾತ್ರಿ ಮನೆಗೆ ಮರಳಿದ್ದಾರೆ. ಬೀರು ತೆಗೆದಾಗ ಹಣ ಇರಲಿಲ್ಲ. ಮನೆಯಲ್ಲಿರುವವರನ್ನು ವಿಚಾರಿಸಿದಾಗ ಹಣ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ಭದ್ರಾವತಿ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಮೇಲೆ ಕಂಡಕ್ಟರ್‌ನಿಂದ ಹಲ್ಲೆ, ಕಾರಣವೇನು?

ಕಟ್ಟಿನಕಾರು ಬಳಿ ಬೈಕ್‌ಗೆ ಎದುರಿನಿಂದ ಬಂದ ಕಾರು ಡಿಕ್ಕಿ
SAGARA : ಬೈಕ್‌ಗೆ ಎದುರಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದು,
ಸವಾರರಿಬ್ಬರು ಗಾಯಗೊಂಡಿದ್ದಾರೆ. ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ (Kattinakaru) ಬಳಿ ಘಟನೆ ಸಂಭವಿಸಿದೆ. ಬೈಕ್ ಸವಾರರಾದ ಕೋಗಾರು ಗ್ರಾಮದ ಜೋಸೆಫ್ ಮತ್ತು ಚನ್ನಗೊಂಡದ ಜೀವೇಂದ್ರ ಗಾಯಗೊಂಡಿದ್ದಾರೆ. ಇಬ್ಬರು ಕಟ್ಟಿನಕಾರುವಿನಲ್ಲಿ ಗಾರೆ ಕೆಲಸಕ್ಕೆ ಬೈಕಿನಲ್ಲಿ ತೆರಳುತ್ತಿದ್ದರು. ದೇವಿಕಾನು ಅಪ್‌ನಲ್ಲಿ ಕಾರು ಡಿಕ್ಕಿ ಹೊಡೆದಿದೆ. ಜೀವೇಂದ್ರ ಅವರ ಬಲಗಾಲಿಗೆ ಗಾಯವಾಗಿದೆ. ಜೋಸೆಫ್ ತಲೆಗೆ ಪೆಟ್ಟು ಬಿದ್ದಿದೆ. ಕೂಡಲೆ ಇಬ್ಬರಿಗು ಕಾರ್ಗಲ್ (Kargal) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಗಾಂಜಾ ಸೇವಿಸಿದ್ದ ಬ್ಯಾಂಕ್ ಉದ್ಯೋಗಿ ಭದ್ರಾವತಿಯಲ್ಲಿ ಅರೆಸ್ಟ್ – 3 ಫಟಾಫಟ್ ಕ್ರೈಮ್ ನ್ಯೂಸ್

ರಿಪ್ಪನ್‌ಪೇಟೆ ಸುತ್ತಮುತ್ತ ರಬ್ಬರ್ ಶೀಟ್ ಕಳ್ಳತನ
RIPPONPETE : ಸುತ್ತಮುತ್ತಲ ವಿವಿಧೆಡೆ ಅಂದಾಜು 25 ಸಾವಿರ
ಮೌಲ್ಯದ ರಬ್ಬರ್ ಶೀಟ್‌ಗಳ (Rubber Sheet Theft) ಕಳ್ಳತನವಾಗಿದೆ. ರಬ್ಬರ್ ಹಾಲು ತೆಗೆದು ಶೀಟ್ ಮಾಡಿ ಒಣ ಹಾಕಿದ್ದ ವೇಳೆ ಘಟನೆ ಸಂಭವಿಸಿದೆ. ಬೆಳಂದೂರಿನ ವೀರೇಶ್ ಎಂಬುವವರ ಮನೆ ಮುಂದೆ ಒಣ ಹಾಕಲಾಗಿದ್ದ 8 ಸಾವಿರ ರೂ. ಮೌಲ್ಯದ 105 ರಬ್ಬರ್ ಶೀಟ್, ಬಿ.ಟಿ.ಪ್ರಕಾಶ್ ಅವರಿಗೆ ಸೇರಿದ 7 ಸಾವಿರ ರೂ. ಮೌಲ್ಯದ ಶೀಟ್‌ಗಳು, ಗವಟೂರು ಮಲ್ಲಾಪುರದ ಅಲೆಕ್ಸ್ ಜಾರ್ಜ್ ಅವರಿಗೆ ಸೇರಿದ 6 ಸಾವಿರ ರೂ. ಮೌಲ್ಯದ ರಬ್ಬರ್ ಶೀಟ್‌ಗಳ ಕಳ್ಳತನ ಮಾಡಲಾಗಿದೆ. ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
.jpeg)
LATEST NEWS
- ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

- ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

- ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ಉಷ್ಣಾಂಶ?

- ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್ ದಾಳಿ, ಒಬ್ಬ ಎಸ್ಕೇಪ್, ಮತ್ತೊಬ್ಬ ಅರೆಸ್ಟ್

About The Editor
ನಿತಿನ್ ಆರ್.ಕೈದೊಟ್ಲು





