ಶಿವಮೊಗ್ಗ ಜನಶತಾಬ್ದಿ, ಮೈಸೂರು – ತಾಳಗುಪ್ಪ ರೈಲಿಗೆ ಹೆಚ್ಚುವರಿ ಬೋಗಿ, ಯಾವ್ಯಾವ ದಿನ? ಕಾರಣವೇನು?

SHIVAMOGGA LIVE NEWS | 11 AUGUST 2023

SHIMOGA : ಸಾಲು ಸಾಲು ರಜೆ ಹಿನ್ನೆಲೆ ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಆದ್ದರಿಂದ ರೈಲ್ವೆ (Railway) ಇಲಾಖೆ ರಾಜ್ಯದ ವಿವಿಧ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಿದೆ. ಶಿವಮೊಗ್ಗದ ಎರಡು ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಈ ಸುದ್ದಿಯನ್ನು ಇನ್ನು 58 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಯಾವ್ಯಾವ ರೈಲಿಗೆ ಯಾವ್ಯಾವ ದಿನ ಹೆಚ್ಚುವರಿ ಬೋಗಿ?

ಮೈಸೂರು – ತಾಳಗುಪ್ಪ (ರೈಲು ಸಂಖ್ಯೆ 16227) – ಆ.11 ರಿಂದ 14ರವರೆಗೆ ಒಂದು ಹೆಚ್ಚವರಿ ಸ್ಲೀಪರ್‌ ಕೋಚ್‌ ಬೋಗಿ.

ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16228) – ಆ.12 ರಿಂದ 15ರವರೆಗೆ ಒಂದು ಹೆಚ್ಚುವರಿ ಸ್ಲೀಪರ್‌ ಕೋಚ್‌ ಬೋಗಿ.

ಬೆಂಗಳೂರು – ಶಿವಮೊಗ್ಗ ಜನಶತಾಬ್ದಿ (ರೈಲು ಸಂಖ್ಯೆ 12089) – ಆ.12ರಂದು ಒಂದು ಸಕೆಂಡ್‌ ಕ್ಲಾಸ್‌ ಚೇರ್‌ ಕಾರ್‌ ಬೋಗಿ.

ಇದನ್ನೂ ಓದಿ – ಗೃಹ ಜ್ಯೋತಿ ಉಚಿತ ವಿದ್ಯುತ್‌ ನಿರೀಕ್ಷೆಯಲ್ಲಿದ್ದ ಗ್ರಾಹಕನಿಗೆ ಮೆಸ್ಕಾಂನಿಂದ ಶಾಕ್‌

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ (ರೈಲು ಸಂಖ್ಯೆ 12090) – ಆ.13ರಂದು ಒಂದು ಸಕೆಂಡ್‌ ಕ್ಲಾಸ್‌ ಚೇರ್‌ ಕಾರ್‌ ಬೋಗಿ.

ವೇಯ್ಟಿಂಗ್‌ ಲಿಸ್ಟ್‌ ಸಂಖ್ಯೆ ಏರಿಕೆ

ಆ.12 ರಿಂದ 15ರವರೆಗೆ ಮೂರು ದಿನ ರಜೆ ಇದೆ. ಈ ಹಿನ್ನೆಲೆ ಶಿವಮೊಗ್ಗಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಹಾಗಾಗಿ ರೈಲ್ವೆ ಇಲಾಖೆ ಹೆಚ್ಚುವರಿ ಬೋಗಿ ಅಳವಡಿಸಿದೆ. ಹಾಗಿದ್ದೂ ಕಾಯ್ದಿರಿಸುವ ಸೀಟ್‌ಗಳಲ್ಲಿ ವೇಯ್ಟಿಂಗ್‌ ಲಿಸ್ಟ್‌ ಇದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

PARISHRAMA neet academy

Shimoga-Yeshwanthapura-Train-South-Western-Railway

Leave a Comment