SHIVAMOGGA LIVE NEWS | 1 SEPTEMBER 2023
ದುರ್ಗಿಗುಡಿಯಲ್ಲಿ ಯುವಕ ಅರೆಸ್ಟ್
SHIMOGA : ದುರ್ಗಿಗುಡಿಯಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವ ಅನುಮಾನ ಮೂಡಿದೆ. ಕೂಡಲೆ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ. ಮುಬಾರಕ್ (19) ಎಂಬಾತನನ್ನು ಬಂಧಿಸಲಾಗಿದೆ (Arrest). ಆತನ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ- ಬ್ಯಾಂಕಿನಲ್ಲಿ ಮಹಿಳೆ ಮೈಮೇಲೆ ಬಂತು ‘ದೇವರು’, 20 ಸಾವಿರ ರೂ. ಹಣಕ್ಕೆ ಪಟ್ಟು, ಮುಂದೇನಾಯ್ತು?
ಗಾರ್ಡನ್ ಏರಿಯಾದಲ್ಲಿ ಕೈ ಕೈ ಮಿಲಾಯಿಸಿದ ಗುಂಪುಗಳು
SHIMOGA : ಅಂಗಡಿ ಮುಂದೆ ಲಾರಿ ನಿಲ್ಲಿಸುವ ವಿಚಾರವಾಗಿ ಜಗಳವಾಗಿದ್ದು ಎರಡು ಗುಂಪುಗಳು ಕೈ ಕೈ ಮಿಲಾಯಿಸಿದ್ದಾರೆ. ಶಿವಮೊಗ್ಗದ ಗಾರ್ಡನ್ ಏರಿಯಾದ 1ನೇ ತಿರುವಿನಲ್ಲಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಗಲಾಟೆ ಮಾಡುತ್ತಿದ್ದವರು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕ ಶಾಂತಿ ಭಂಗ ಉಂಡು ಮಾಡಲು ಯತ್ನಿಸಿದ ಆರೋಪದ ಮೇಲೆ ನಾಲ್ವರ ವಿರುದ್ಧ ದೊಡ್ಡಪೇಟೆ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ರೈಲ್ವೆ ನಿಲ್ದಾಣ ಬಳಿ ಮನೆ ಕಳ್ಳತನ
SHIMOGA : ಮನೆಯವರೆಲ್ಲ ಚನ್ನಗಿರಿಗೆ ತೆರಳಿದ್ದ ವೇಳೆ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣ ಸಮೀಪದ ಅಮೀರ್ ಅಹಮ್ಮದ್ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ. ರಾಜೇಶ್ವರಿ ಅವರು ಚನ್ನಗಿರಿಯಲ್ಲಿರುವ ತಮ್ಮ ಸಂಬಂಧಿಯ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ 30 ಸಾವಿರ ರೂ.ನಗದು, 35 ಸಾವಿರ ರೂ. ಮೊತ್ತದ ಚಿನ್ನ, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ- ‘ಲಾಭ ಪಡೆದ ಕೋಟ್ಯಂತರ ಜನರು ಅವರ ಸ್ಮರಣೆ ಮಾಡುತ್ತಿಲ್ಲ, ಸಮಾಜಕ್ಕೆ ಇವರೆ ವರ್ತಮಾನದ ಆದರ್ಶ’
ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ, ಒಬ್ಬ ಅರೆಸ್ಟ್
SHIMOGA : ಚಿಂದಿ ಆಯುವ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತೌಫಿಕ್ ಅಲಿಯಾಸ್ ಅಸ್ಸು ಬಂಧಿತ (Arrest). ಆ.22ರಂದು ಟಿಪ್ಪು ನಗರದಲ್ಲಿ ಚಿಂದಿ ಆಯುವ ಮಂಜಣ್ಣ ಎಂಬಾತನ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ, ಭದ್ರಾವತಿಯಲ್ಲಿ ಏರಿಯಾ ಡಾಮಿನೇಷನ್
SHIMOGA : ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ವಿವಿಧೆಡೆ ಪೊಲೀಸರು ಏರಿಯಾ ಡಾಮಿನೆಷನ್ ವಿಶೇಷ ಗಸ್ತು ನಡೆಸಿದರು. ಹೊರವಲಯ ಮತ್ತು ಖಾಲಿ ಜಾಗದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವವರು ಮತ್ತು ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. 48 ಲಘು ಪ್ರಕರಣ ಮತ್ತು ಮೋಟರ್ ವೆಹಿಕಲ್ ಕಾಯ್ದೆ ಅಡಿ 4 ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200